ಮುಂಬೈ(ಜೂ. 09) ಹೇಳಿಕೆಗಳಿಂದಲೇ ವಿವಾದ ಎಬ್ಬಿಸುವ ಬಾಲಿವುಡ್ ನಟಿ ಕಂಗನಾ ರಣಾವತ್ ದಿವಾಳಿಯಾಗಿದ್ದಾರೆ. ನಾವು ಹೇಳುತ್ತಿಲ್ಲ ಅವರೇ ಹೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಕಂಗನಾ ತಾನು ತೆರಿಗೆ ಕಟ್ಟಿಲ್ಲ ಎಂದಿದ್ದಾರೆ. ಈ ವರ್ಷ ಲಾಕ್ ಡೌನ್ ಕಾರಣ ಕೆಲಸವಿಲ್ಲ, ಅದರ ಪರಿಣಾಮ ತೆರಿಗೆ ಕಟ್ಟಲು ಹಣ ಇಲ್ಲ ಎಂದಿದ್ದಾರೆ. ಅವರು ತಮ್ಮ ಮಾತನ್ನು ಇಷ್ಟಕ್ಕೆ ನಿಲ್ಲಿಸಿಲ್ಲ ನಾನು ಅತಿ ಹೆಚ್ಚು ತೆರಿಗೆ ಕಟ್ಟುವ ನಟಿ ಎಂದು ಹೇಳಲು ಮರೆತಿಲ್ಲ. ನನ್ನ ಸಂಪಾದನೆಯಲ್ಲಿ ಶೇ. 45 ತೆರಿಗೆಗೆ ಹೋಗುವುದು. ಕೆಲಸ ಇಲ್ಲದೆ ಇರೋದರಿಂದ ನಾನು ಕಳೆದ ವರ್ಷ ಅರ್ಧದಷ್ಟು ಮಾತ್ರ ತೆರಿಗೆ ಕಟ್ಟಿದ್ದೇನೆ ಎಂದಿದ್ದಾರೆ. ವೈಯಕ್ತಿಕವಾಗಿ ಈ ಕೊರೋನಾ ಹೋರಾಟ ಸಂಕಷ್ಟ ತಂದಿದೆ. ಆದರೆ ಎಲ್ಲರೂ ಒಟ್ಟಾಗಿ ಎದುರಿಸಬೇಕಿದೆ ಎಂದು ಹೇಳಿದ್ದಾರೆ. ತಮಿಳು ನಾಡು ಮಾಜಿ ಸಿಎಂ ಜಯಲಲಿತಾ ಬಯೋಪಿಕ್ ನಲ್ಲಿ ಕಾಣಿಸಿಕೊಂಡಿದ್ದರು. ಕೊರೋನಾ ವೈರಸ್ ದೃಢಪಟ್ಟಿದ್ದು ಅದರಿಂದ ಗುಣಮುಖರಾಗಿಯೂ ಬಂದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೇ ವಿವಾದಕಾರಿ ಮಾತುಗಳನ್ನು ಬರೆಯುತ್ತಿದ್ದ ಕಾರಣ ಅವರ ಟ್ವಿಟರ್ ಖಾತೆಗೂ ಆತಂಕ ಎದುರಾಗಿತ್ತು. ಮಹಾರಾಷ್ಟ್ರ ಸರ್ಕಾರವನ್ನೇ ಎದುರು ಹಾಕಿಕೊಂಡು ಠಾಕ್ರೆ ವಿರುದ್ಧ ಸಮರ ಸಾರಿದ್ದರು . Bollywood Actres Kangana Ranaut says she hasn't paid half of last year’s tax due to ‘no work’ ತೆರಿಗೆ ಕಟ್ಟಲು ಹಣವಿಲ್ಲ; ಕಂಗನಾ ದಿವಾಳಿ!