ನಟ ಅಲ್ಲು ಅರ್ಜುನ್, ಕನ್ನಡತಿ ಪೂಜಾ ಹೆಗ್ಡೆ ರಹಸ್ಯ ಬಿಚ್ಚಿಟ್ಟ ನಂದಮೂರಿ ಬಾಲಕೃಷ್ಣ!

Published : Nov 10, 2024, 07:10 PM IST

ತೆಲು ಸಿನಿಮಾ ಇಂಡಸ್ಟ್ರಿ  ಹಿರಿಯ ನಟ ಬಾಲಯ್ಯ @ ನಂದಮೂರಿ ಬಾಲಕೃಷ್ಣ ಅವರು ತಮ್ಮ ಅನ್‌ಸ್ಟಾಪೆಬಲ್ -4 ಶೋನಲ್ಲಿ  ನಟ ಅಲ್ಲು ಅರ್ಜುನ್ ಹಾಗೂ ಕನ್ನಡತಿ ಪೂಜಾ ಹೆಗ್ಡೆ ಅವರೊಂದಿಗೆ ಇದ್ದ ಕೆಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಈ ವಿಚಾರವನ್ನು ಕೇಳಿದ ನಟ ಅಲ್ಲು ಅರ್ಜುನ್ ಶಾಕ್ ಆಗಿದ್ದಾರೆ. ಆ ರಹಸ್ಯವೇನು ಗೊತ್ತಾ.? ಇಲ್ಲಿದೆ ನೋಡಿ ಮಾಹಿತಿ..,

PREV
15
ನಟ ಅಲ್ಲು ಅರ್ಜುನ್, ಕನ್ನಡತಿ ಪೂಜಾ ಹೆಗ್ಡೆ ರಹಸ್ಯ ಬಿಚ್ಚಿಟ್ಟ ನಂದಮೂರಿ ಬಾಲಕೃಷ್ಣ!

ನಟ ಅಲ್ಲು ಅರ್ಜುನ್ ಇವಾಗ `ಪುಷ್ಪ 2` ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಇನ್ನೂ 25 ದಿನಗಳಲ್ಲಿ ಈ ಸಿನಿಮಾ ವೀಕ್ಷಕರ ಮುಂದೆ ಪುಷ್ಪ-2 ಸಿನಿಮಾ ಬರಲಿದೆ. ಆದರೆ, ಇದೀಗ ಹಿರಿಯ ನಟ ಬಾಲಯ್ಯ ಅವರು ಅಲ್ಲು ಅರ್ಜುನ್ ಜೊತೆಗೆ ಮಾತನಾಡುತ್ತಾ ವೇದಿಕೆಯ ಮೇಲೆಯೇ ನಟಿ ಪೂಜಾ ಹೆಗ್ಡೆಗೆ ಸಂಬಂಧಿಸಿದ ವಿಷಯವನ್ನು ಲೀಕ್ ಮಾಡಿದ್ದಾರೆ. ಏಕಾಏಕಿ ಕನ್ನಡತಿಯರಾದ ರಶ್ಮಿಕಾ ಮಂದಣ್ಣ ಹಾಗೂ ಮತ್ತೊಬ್ಬ ಕನ್ನಡತಿ ಪೂಜಾ ಹೆಗ್ಡೆ ಹೆಸರು ಹೇಳಿ ಐಕಾನ್ ಸ್ಟಾರ್‌ ಅಲ್ಲು ಅರ್ಜುನ್‌ಗೆ ಶಾಕ್ ಮೇಲೆ ಶಾಕ್ ಕೊಟ್ಟಿದ್ದಾರೆ.

25

ಅಲ್ಲು ಅರ್ಜುನ್, ಪೂಜಾ ಹೆಗ್ಡೆ ಇಬ್ಬರೂ ಎರಡು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. `ಡಿಜೆ` ಹಾಗೂ `ಅಲಾ ವೈಕುಂಠಪುರಮುಲೋ` ಚಿತ್ರದಲ್ಲಿ ನಟಿಸಿದ್ದಾರೆ. ಡಿಜೆ ಸಿನಿಮಾ ಉತ್ತಮ ಯಶಸ್ಸು ಕಂಡರೆ, `ಅಲಾ ವೈಕುಂಠಪುರಮುಲೋ` ಸಿನಿಮಾ ದೊಡ್ಡ ಹಿಟ್ ಆಗಿತ್ತು. ಈ ಎರಡೂ ಸಿನಿಮಾಗಳಿಂದ ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ನಡುವೆ ಒಳ್ಳೆಯ ಕೆಮಿಸ್ಟ್ರಿ ಇತ್ತು ಎಂಬುದು ಇಡೀ ತೆಲುಗು ಸಿನಿಮಾ ಇಂಡಸ್ಟ್ರಿಗೆ ತಿಳಿದಿತ್ತು.

ಒಂದು ಅವಧಿಯಲ್ಲಿ ಅಲ್ಲು ಅರ್ಜುನ್, ಪೂಜಾ ಹೆಗ್ಡೆ ಅತ್ಯುತ್ತಮ ಜೋಡಿಯೂ ಆಗಿತ್ತು. ಇನ್ನು ಪೂಜಾ ಹೆಗ್ಡೆ ಅವರು ತ್ರಿವಿಕ್ರಮ್ ಅವರ ಮುಂಬರುವ ಚಿತ್ರಕ್ಕೂ ನಾಯಕಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

35

ಇನ್ನು ನಟ ಬಾಲಯ್ಯ ಅವರು ಹೋಸ್ಟ್ ಮಾಡುತ್ತಿರುವ ಅನ್‌ಸ್ಟಾಪಬಲ್ 4 ಶೋನಲ್ಲಿ ಅಲ್ಲು ಅರ್ಜುನ್ ಭಾಗವಹಿಸಿದ್ದು. ಸಿನಿಮಾಗಳು, ವೃತ್ತಿಗೆ ಸಂಬಂಧಿಸಿದ ವಿಷಯಗಳು, ಕುಟುಂಬ ಮತ್ತು ನಾಯಕಿಯರೊಂದಿಗಿನ ಸಂಪರ್ಕಗಳು, ಚಿರಂಜೀವಿ ಜೊತೆಗಿನ ಸಂಪರ್ಕ, ಮೆಗಾ ಸ್ಟಾರ್ ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ಅನೇಕ ತಮಾಷೆಯ ಮಾತುಗಳನ್ನು ಇಲ್ಲಿ ಕೇಳಿದ್ದಾರೆ.

ಈ ಸಂಭಾಷಣೆಯಲ್ಲಿ ಬಾಲಯ್ಯ ಅವರು ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ. ರಶ್ಮಿಕಾ ಮಂದಣ್ಣಗಿಂತ ಪೂಜಾ ಹೆಗ್ಡೆ ಜೊತೆ ಹೆಚ್ಚು ಸಿನಿಮಾ ಮಾಡೋಕೆ ಇಷ್ಟ ಪಡ್ತೀಯಾ ಎಂದು ಅಲ್ಲು ಅರ್ಜುನ್‌ಗೆ, ಬಾಲಯ್ಯ ಕೇಳಿದ್ದಾರೆ. ಆಗ ರಶ್ಮಿಕಾ, ಪೂಜಾ ಹೆಗಡೆ ಜೊತೆಗೆ ಮಾಡುವುದಾಗಿ ತಿಳಿಸಿದರು.

45

ಆಗ ಸಡನ್ ಆಗಿ ಶಾಕ್ ಆದ ಅಲ್ಲು ಅರ್ಜುನ್ ಅವರು ಈ ಶೋಗೆ ಬಂದಿದ್ದ ಅವರ ತಾಯಿ ನಿರ್ಮಲಮ್ಮ ಕಡೆಗೆ ನೋಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಬಾಲಯ್ಯ ಅವರು ಅಲ್ಲು ಅರ್ಜುನ್ ಅವರ ಅಮ್ಮನನ್ನು ಮಾತನಾಡಿಸುತ್ತಾ, ನೀವು ಚಿಕ್ಕಂದಿನಲ್ಲಿ ಏನಾದ್ರು ಮಗನಿಗೆ ಹೊಡೆದಿದ್ದೀರಾ ಅಂತ ಕೇಳಿದ್ದಾರೆ. ಆಗ ಅಲ್ಲು ಅರ್ಜುನ್ ತಮಾಷೆಯಾಗಿ ಎಲ್ಲ ವಿಚಾರಕ್ಕೂ ಹೊಡೆದಿದ್ದಾರೆ ಎಂದು ಉತ್ತರಿಸಿದರು. ಇದಾದ ನಂತರ ನಾನು 'ಸ್ನೇಹಾ ರೆಡ್ಡಿ' ಅನ್ನೋ ವೆಪನ್‌ನಿಂದ ಬದಲಾದೆ ಅಂತ ಹೇಳಿದಾಗ ಕಾರ್ಯಕ್ರಮದಲ್ಲಿ ಇದ್ದ ಎಲ್ಲ ವೀಕ್ಷಕರು ಕೂಡ ಶಾಕ್ ಆದರು.

ನಿರ್ಮಲಮ್ಮ ಬನ್ನಿ ಸಂಕಷ್ಟದಲ್ಲಿದ್ದಾಗ ಸಾಂತ್ವನ ಹೇಳಿದ್ದೀರಾ? ಎಂದು ಕೇಳಿದಾಗ ಬನ್ನಿ ತಾಯಿ ಸ್ವಲ್ಪ ಭಾವುಕರಾಗಿ ಕಾಣುತ್ತಿದ್ದರು. ಆದರೆ, ಮಾತನ್ನು ಮುಂದುವರೆಸುತ್ತಾ ನೀವು ಆರಂಭದಲ್ಲಿ ಪ್ರಣಯವನ್ನು ಇಷ್ಟಪಡುತ್ತೀರಾ? ಆ್ಯಕ್ಷನ್ ಇಷ್ಟವೇ ಎಂದು ಬಾಲಯ್ಯ ಕೇಳಿದರು. ಆಗ ಸ್ಕ್ರೀನ್‌ನಲ್ಲಿ ಆಕ್ಷನ್ ಯಾರಿಗೆ ಬೇಕು ಸರ್, ರೊಮ್ಯಾನ್ಸ್ ಗೆ ಆದ್ಯತೆ ನೀಡುತ್ತೇನೆ ಎಂದು ಹೇಳಿದರು. 

55

ಇದಾದ ನಂತರ ಮಾವ ಚಿರಂಜೀವಿ ಮತ್ತು ಅವರ ದೊಡ್ಡ ಕುಟುಂಬವನ್ನು ಹೇಗೆ ನೋಡಿಕೊಳ್ಳಬೇಕು ಎಂದು ಅಲ್ಲು ಅರ್ಜುನದ ಮಾತನಾಡಿದ್ದಾರೆ. ನಾವು ಬಂಧುಗಳು, ಕೃಷ್ಣ ಇಲ್ಲಿದ್ದಾನೆ, ನಾನು ಅರ್ಜುನ, ನೀವು ಗೀತೆಯನ್ನು ಕೊಡಿ, ನಾನು ಕುರುಕ್ಷೇತ್ರ ಮಾಡುತ್ತೇನೆ ಎಂದು ಹೇಳಿದ್ದು ವೇದಿಕೆಯಲ್ಲಿದ್ದ ಜನರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.

ಇನ್ನು ಅಲ್ಲು ಅರ್ಜುನ್ ನೀವು `ಪುಷ್ಪ 3' ಮಾಡ್ತಿದ್ದೀರಿ, ನಾನು `ಅಖಂಡ 3' ಮಾಡುತ್ತಿದ್ದೇನೆ ಎಂದು ಹೇಳಿದ ಬಾಲಕೃಷ್ಣ ಅವರು ಅಲ್ಲು ಅರ್ಜುನ್ ಅವರೊಂದಿಗೆ ಪುಷ್ಪ ಸ್ಟೈಲ್ ನಲ್ಲಿ ಸ್ವ್ಯಾಗ್ ಮಾಡುತ್ತಾ ನಡೆದುಕೊಂಡು ಹೋಗಿದ್ದು ಆಕರ್ಷಕವಾಗಿತ್ತು. ಆದರೆ, ಈ ವೇದಿಕೆಯಲ್ಲಿ ಮಾವ ಪವನ್ ಕಲ್ಯಾಣ್ ಜೊತೆಗಿನ ವಿವಾದದ ಬಗ್ಗೆ ಚರ್ಚೆ ಮಾಡಲಿಲ್ಲ. ಈ ಎಪಿಸೋಡ್ ಈ ತಿಂಗಳ 15ಕ್ಕೆ ಆಹಾದಲ್ಲಿ ಸ್ಟ್ರೀಮಿಂಗ್ ಆಗಲಿದೆ.

Read more Photos on
click me!

Recommended Stories