ಅಂತೂ ಹೇರ್‌ಸ್ಟೈಲ್ ಬದಲಿಸಿದ ಐಶ್ ಮಗಳು; ಆರಾಧ್ಯ ಹೊಸ ಲುಕ್‌‌ ನೋಡಿ ನೆಟಿಜನ್ಸ್ ಶಾಕ್

First Published | Mar 4, 2024, 10:48 AM IST

ಆರಾಧ್ಯ ಬಚ್ಚನ್ ಹೇರ್‌ಸ್ಟೈಲ್ ಬದಲಾಯಿಸೋಕೆ ಅಂಬಾನಿ 1000 ಕೋಟಿ ಖರ್ಚು ಮಾಡಬೇಕಾಯ್ತು ಎನ್ನುತ್ತಿದ್ದಾರೆ ನೆಟ್ಟಿಗರು. ಹೌದು, ಅನಂತ್- ರಾಧಿಕಾ ವಿವಾಹಪೂರ್ವ ಸಮಾರಂಭಕ್ಕೆ ಐಶ್ವರ್ಯಾ ರೈ ಪುತ್ರಿ ಹೊಸ ಹೇರ್‌ಸ್ಟೈಲ್‌ನಲ್ಲಿ ಬಂದು ಎಲ್ಲರ ಗಮನ ಸೆಳೆದಿದ್ದಾಳೆ.

ಸದಾ ಹಣೆಯ ಮೇಲೆ ಕೂದಲು ಇಳಿಸಿದ ರೀತಿ- ಆಡುಭಾಷೆಯಲ್ಲಿ ಬೇಬಿ ಶಾಮಿಲಿ ಹೇರ್‌ಸ್ಟೈಲ್- ಆರಾಧ್ಯ ಬಚ್ಚನ್ ಕಾಣಿಸಿಕೊಳ್ಳುತ್ತಿದ್ದುದು ದೊಡ್ಡ ಚರ್ಚೆಯ ವಿಷಯವಾಗಿತ್ತು. ಹಣೆ ದೊಡ್ಡದಿರಬಹುದೇ ಎಂದು ಹಲವರು ಅನುಮಾನ ಪಟ್ಟಿದ್ದರು.

ಆದರೀಗ ಐಶ್ ಬೇಬಿ ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಕಾರ್ಯಕ್ರಮಕ್ಕೆ ಹೊಸ ಹೇರ್‌ಸ್ಟೈಲ್‌ನಲ್ಲಿ ಬಂದು ಎಲ್ಲರನ್ನು ಅಚ್ಚರಿಗೊಳಿಸಿದ್ದಾಳೆ.

Tap to resize

12 ವರ್ಷದ ಆರಾಧ್ಯ ಬೇಬಿ ಪಿಂಕ್ ಬಣ್ಣದ ಗೌನ್ ಧರಿಸಿ, ಕೂದಲನ್ನು ಇಳಿ ಬಿಟ್ಟು ತಾಯಿಯೊಂದಿಗೆ ನಡೆದು ಬರುವಾಗ ಎಲ್ಲರ ಕಣ್ಣುಗಳು ಮಾಜಿ ವಿಶ್ವ ಸುಂದರಿಗಿಂತ ಹೆಚ್ಚಾಗಿ ಆಕೆಯ ಮಗಳ ಮೇಲೇ ಇತ್ತು.

ಬಹಳ ಖುಷಿಯಿಂದ ನಗುತ್ತಾ ಪಾಪಾರಾಜಿಗಳತ್ತ ನೋಡುತ್ತಿದ್ದ ಆರಾಧ್ಯಳ ಹೊಸ ಲುಕ್ ನೆಟಿಜನ್‌‍ಗಳನ್ನು ದಿಗ್ಭ್ರಮೆಗೊಳಿಸಿದೆ. ಜೊತೆಗೆ, ಪೋಟೋ ಹೊರ ಬಿದ್ದ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ.

'ಏನೇ ಆದ್ರೂ ಜೀನ್ಸ್ ಎಲ್ಲಿ ಹೋಗುತ್ತೆ, ತಾಯಿಯಂತೆ ಮಗಳು. ತುಂಬಾ ತುಂಬಾ ಸುಂದರಿ' ಎಂದು ನೆಟಿಜನ್‌ಗಳು ತಮ್ಮ ವರಸೆ ಬದಲಿಸಿ ಕಾಮೆಂಟ್ ಮಾಡುತ್ತಿದ್ದಾರೆ.

ಕ್ಲಿಪ್‌ನಲ್ಲಿ ತಾಯಿಯಷ್ಟೇ ಎತ್ತರವಾಗಿ ಕಾಣಿಸುವ ಆರಾಧ್ಯ, ಈ ಸಮಾರಂಭದಲ್ಲೇ ಸಾಕಷ್ಟು ಚಿತ್ರಗಳಿಗೆ ಆಫರ್ ಪಡೆಯಬಹುದು ಎಂದು ನೆಟ್ಟಿಗರು ಮಾತನಾಡುತ್ತಿದ್ದಾರೆ.

ಆರಾಧ್ಯ ಬಚ್ಚನ್ ಹೇರ್‌ಸ್ಟೈಲ್ ಬದಲಾಯಿಸೋಕೆ ಅಂಬಾನಿ 1000 ಕೋಟಿ ಖರ್ಚು ಮಾಡಬೇಕಾಯ್ತು ಎಂದು ತಮಾಷೆಯ ಚಟಾಕಿಯನ್ನೂ ಹಾರಿಸುತ್ತಿದ್ದಾರೆ.

ಇನ್ನು ಆರಾಧ್ಯ ಕಾರ್ಯಕ್ರಮದಲ್ಲಿ ಡ್ರಮ್ ಬೀಟ್ಸ್‌ಗೆ ತಂದೆ ಅಭಿಷೇಕ್ ಬಚ್ಚನ್ ಹಾಗೂ ತಾಯಿ ಐಶ್ವರ್ಯಾ ನಡುವೆ ಕುಳಿತು ಚಪ್ಪಾಳೆ ತಟ್ಟುತ್ತಾ ಎಂಜಾಯ್ ಮಾಡುತ್ತಿದ್ದುದು ಕೂಡಾ ಎಲ್ಲರ ಗಮನ ಸೆಳೆದಿದೆ.

ಈಕೆಯಲ್ಲಿ ಬಾಲಿವುಡ್ ಆಳುವ ಎಲ್ಲ ಲಕ್ಷಣಗಳಿವೆ, ಇವಳು ನಿಜಕ್ಕೂ ಪ್ರೆಟ್ಟಿ ಪ್ರಿನ್ಸೆಸ್ ಎನ್ನುತ್ತಿದ್ದಾರೆ. ಜೊತೆಗೆ, ಎಷ್ಟು ಬೇಗ ಈಕೆ ಮೆಚೂರ್ಡ್ ಲುಕ್ ಪಡೆದಿದ್ದಾಳೆ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

Latest Videos

click me!