ಕೊರೋನಾ ವಾರಿಯರ್ಸ್‌ಗೆ ಥ್ಯಾಂಕ್ಸ್‌ ಹೇಳಿ ಮನ ಗೆದ್ದ ಆರಾಧ್ಯ ಬಚ್ಚನ್‌

First Published May 5, 2020, 3:57 PM IST

ಭಾರತವನ್ನೂ ಸೇರಿದಂತೆ ಇಡೀ ವಿಶ್ವವೇ ಮಹಾಮಾರಿ ಕೊರೋನಾದ ವಿರುದ್ಧ ಹೋರಾಡುತ್ತಿದೆ. ಭಾರತದಲ್ಲಿ ಕೊರೋನಾ ಸೋಂಕು ಹರಡದಂತೆ ಏಪ್ರಿಲ್‌ 24ರಂದು ಶುರುವಾದ ಲಾಕ್‌ಡೌನ್‌ ಮೇ 17ರ ವರೆಗೆ ಮುಂದುವರಿಸಲಾಗಿದೆ. ಸಾಮಾನ್ಯ ಜನರಂತೆ ಬಾಲಿವುಡ್‌ನ ಸೆಲೆಬ್ರೆಟಿಗಳು ಸಹ ಮನೆಯಲ್ಲೇ ಇದ್ದು, ಫ್ಯಾಮಿಲಿ ಜೊತೆ ಟೈಮ್‌ ಸ್ಪೆಂಡ್‌ ಮಾಡುತ್ತಿದ್ದಾರೆ. ಇದರ ಜೊತೆ ಕೊರೋನಾ ವಾರಿಯರ್ಸ್‌ಗೆ ಎಲ್ಲರೂ ಸಲಾಮ್‌ ಎನ್ನುತ್ತಿದ್ದಾರೆ. ಐಶ್ವರ್ಯಾ ರೈ ಅವರ 8 ವರ್ಷದ ಮಗಳು ಆರಾಧ್ಯ ಬಚ್ಚನ್ ಸಹ ಕೊರೋನಾ ವಾರಿಯರ್ಸ್‌ಗೆ ತನ್ನ ಕಡೆಯಿಂದ ಥ್ಯಾಂಕ್‌ ಹೇಳಿದ್ದಾಳೆ. ಧನ್ಯವಾದ ಹೇಳಿರುವ ಪೈಂಟಿಂಗ್‌ ಅನ್ನು ತಾಯಿ ಐಶ್ವರ್ಯ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 

ಪೈಂಟಿಂಗ್‌ ಮೂಲಕ ಕೊರೋನಾ ವಾರಿಯರ್ಸ್‌ಗೆ ಧನ್ಯವಾದ ಅರ್ಪಿಸಿದ ಐಶ್ವರ್ಯಾ ರೈ ಅವರ 8 ವರ್ಷದ ಮಗಳು ಆರಾಧ್ಯ ಬಚ್ಚನ್.
undefined
ಐಶ್ ಇನ್‌ಸ್ಟಾಗ್ರಾಂನಲ್ಲಿ ಮಗಳು ಮಾಡಿದ ಪೈಂಟಿಂಗ್‌ ಹಂಚಿಕೊಂಡು, ಮೈ ಡಾರ್ಲಿಂಗ್ ಆರಾಧ್ಯಳ ಕೃತಜ್ಞತೆ ಮತ್ತು ಪ್ರೀತಿ ಎಂದು ಕ್ಯಾಪ್ಷನ್‌ ನೀಡಿದ್ದಾರೆ.
undefined
ಚಿತ್ರಕಲೆಯ ಮೂಲಕ ಈ ಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡಿದ ವೈದ್ಯಕೀಯ ಸಿಬ್ಬಂದಿ, ವೈದ್ಯರು, ಪೊಲೀಸ್, ಸೇನೆ, ಸ್ಕ್ಯಾವೆಂಜರ್ಸ್, ಶಿಕ್ಷಕರು, ಮಾಧ್ಯಮಗಳಿಗೆ ಧನ್ಯವಾದಗಳನ್ನು ಅರ್ಪಿಸಿದ ಪುಟಾಣಿ ಆರಾಧ್ಯಾ.
undefined
ಈ ವರ್ಣಚಿತ್ರದಲ್ಲಿ, ಮನೆಯಲ್ಲಿ ಉಳಿಯಲು, ಮಾಸ್ಕ್‌ ಹಾಕಿಕೊಳ್ಳಲು ಮತ್ತು ಸಾಬೂನಿನಿಂದ ಕೈ ತೊಳೆಯಲು ಆರಾಧ್ಯ ಸಲಹೆ ನೀಡಿದ್ದಾಳೆ.
undefined
ಐಶ್ವರ್ಯಾ ತನ್ನ ಕುಟುಂಬದೊಂದಿಗೆ ಮೋದಿ ದೀಪ ಹಚ್ಚಲು ಕರೆ ನೀಡಿದಾಗ ಸಾಥ್ ನೀಡಿದ್ದರು.
undefined
ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಮತ್ತು ತಾನು ಎನ್ನುವ ಮೂರು ಜನರ ರೇಖಾಚಿತ್ರಗಳನ್ನು ಸಹ ಮಾಡಿದ್ದಾಳೆ. ಮೂವರ ಪರವಾಗಿ ಆರಾಧ್ಯಾ ಕರೋನಾ ವಾರಿಯರ್ಸ್‌ಗೆ ಸಲಾಮ್‌ ಎಂದಿದ್ದಾಳೆ ಈ ಸ್ಟಾರ್‌ ಕಿಡ್‌.
undefined
ಈ ಡ್ರಾಯಿಂಗ್‌ ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ಲೈಕ್‌ ಪಡೆದಿದ್ದು,ಆರಾಧ್ಯಳ ಟ್ಯಾಲೆಂಟ‌ನ್ನು ಹೊಗಳಿದ್ದಾರೆ ನೆಟ್ಟಿಗರು.
undefined
ಮಗಳಿಗೆ ಸಿಗುತ್ತಿರುವ ಅಭಿನಂದನೆಯಿಂದ ಫುಲ್‌ ಖುಷಿಯಾಗಿದ್ದಾರೆ ಮಮ್ಮಿ ಮಮ್ಮಿ ಐಶ್‌ .
undefined
ಧಿರುಭಾಯ್ ಅಂಬಾನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಓದುತ್ತಿದ್ದಾಳೆ ಸೆಲೆಬ್ರೆಟಿ ಕಿಡ್‌ ಆರಾಧ್ಯ. ಪ್ರಸ್ತುತ, ಲಾಕ್ ಡೌನ್ ಕಾರಣ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ.
undefined
ಮಗಳ ಬಗ್ಗೆ ತುಂಬಾ ಪೋಸಿಸವ್‌ ಆಗಿರುವ ಐಶ್ವರ್ಯಾ ರೈ ಅವಳನ್ನು ಏಕಾಂಗಿಯಾಗಿ ಎಲ್ಲಿಯೂ ಹೋಗಲು ಬಿಡುವುದಿಲ್ಲವಂತೆ.
undefined
ಮಾಜಿ ವಿಶ್ವ ಸುಂದರಿಎಲ್ಲಿಗೆ ಹೋದರೂ ಮಗಳು ಆರಾಧ್ಯ ಜೊತೆಯಲ್ಲಿರುವುದನ್ನು ಕಾಣಬಹುದು. ಸದಾ ಮಗಳ ಕೈಯನ್ನು ಹಿಡಿದಿಟ್ಟುಕೊಳ್ಳುವ ಐಶ್ ಅನೇಕ ಬಾರಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ.
undefined
ಕಸೀನ್ಸ್‌ ನವ್ಯಾ ನವೇಲಿ ನಂದಾ ಮತ್ತು ಅಗಸ್ತ್ಯ ನಂದಾ ಜೊತೆ ಆರಾಧ್ಯ ಬಚ್ಚನ್.
undefined
ಫೋಟೋದಲ್ಲಿ ಅಜ್ಜ ಅಮಿತಾಬ್‌ ಬಚ್ಚನ್‌ ಹಾಗೂ ಅಜ್ಜಿ ಜಯಾ ಬಚ್ಚನ್‌ ಜೊತೆ ಆರಾಧ್ಯ.
undefined
ಕಳೆದ ಭಾನುವಾರ, ಭಾರತೀಯ ಸೈನ್ಯ ಕೂಡ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಮೇಲೂ ಪುಷ್ಪ ಸುರಿಸಿ ಧನ್ಯವಾದ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
undefined
click me!