ಬಚ್ಚನ್ ಮಗ-ಸೊಸೆ ಸಂಸಾರದಲ್ಲಿ ಬಿರುಕು; ಇನ್ನೊಂದೆಡೆ ಮೊಮ್ಮಗಳ ಆರಾಧ್ಯ ವೀಡಿಯೋ ವೈರಲ್‌

First Published | Dec 16, 2023, 4:21 PM IST

ಒಂದು ಕಡೆ  ಅಭಿಷೇಕ್ ಬಚ್ಚನ್ (Abhishek Bachchcan) ಮತ್ತು ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಅವರ ಡಿವೋರ್ಸ್‌ ವಿಷಯ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಅದೇ ಇನ್ನೊಂದು ಕಡೆ ಅವರ ಡಾರ್ಲಿಂಗ್‌ ಡಾಟರ್‌ ಆರಾಧ್ಯ ಬಚ್ಚನ್‌ (Aaradhya Bachchan) ವೀಡಿಯೋವೊಂದು ಸಖತ್‌ ವೈರಲ್‌ ಆಗಿದೆ. ಆರಾಧ್ಯ ಬಚ್ಚನ್‌ಳನ್ನು ಜನ ಸೂಪರ್‌ಸ್ಟಾರ್‌ ಎಂದು ಹೊಗಳಿದ್ದಾರೆ.
 

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಪುತ್ರಿ ಆರಾಧ್ಯ ಪ್ರದರ್ಶನ ನೀಡುತ್ತಿದ್ದಾಳೆ.

ಬಾಲಿವುಡ್‌ನ ಜನಪ್ರಿಯ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ಅವರ ಪ್ರೀತಿಯ ಮಗಳು ಆರಾಧ್ಯ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಓದುತ್ತಿದ್ದಾಳೆ. 

Tap to resize

ಇತ್ತೀಚೆಗೆ ನಡೆದ ಶಾಲೆಯ ವಾರ್ಷಿಕ ದಿನಾಚರಣೆಯಲ್ಲಿ  ಆರಾಧ್ಯ ನಾಟಕವೊಂದರಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದಳು. ಇದೀಗ ಆರಾಧ್ಯ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವೈರಲ್ ವೀಡಿಯೊದಲ್ಲಿ, ಆರಾಧ್ಯ ಕಪ್ಪು ಉಡುಪು ಧರಿಸಿರುವುದನ್ನು ಕಾಣಬಹುದು. ಸಂಗೀತ ನಾಟಕವನ್ನು ಪ್ರದರ್ಶಿಸುವಾಗ ತನ್ನ ಡೈಲಾಗ್ ಡೆಲಿವರಿಯಿಂದ ಹಿಡಿದು ತನ್ನ ಎಕ್ಸ್‌ಪ್ರೆಶನ್‌ಗಳವರೆಗೆ ನಟನೆ ತನ್ನ ರಕ್ತದಲ್ಲೇ ಇದೆ ಎಂಬುದನ್ನು ಸಾಬೀತುಪಡಿಸಿದ್ದಾಳೆ. 

ಆರಾಧ್ಯ ವೇದಿಕೆಯಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿದ್ದಂತೆ, ಹೆಮ್ಮೆಯ ಐಶ್ವರ್ಯಾ ತನ್ನ ಮಗಳ ಪ್ರದರ್ಶನವನ್ನು ತನ್ನ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡುವ ವೀಡಿಯೋಗಳನ್ನು ಸಹ ಕಾಣಬಹುದು. 

ಐಶ್ವರ್ಯಾ ಪಕ್ಕದಲ್ಲಿ ನಿಂತಿದ್ದು, ಅಗಸ್ತ್ಯ ನಂದಾ  ಮತ್ತು ಅವರ ತಾಯಿ ಬೃಂದ್ಯಾ ರೈ ಮೊಮ್ಮಗಳು ಆರಾಧ್ಯಳ ಸ್ಕಿಟ್ ಅನ್ನು ಎಂಜಾಯ್‌ ಮಾಡುತ್ತಿರುವುದು ಕಾಣಬಹುದು.

ಆಕೆಯ ಧ್ವನಿಯು ಹಾಲಿವುಡ್ ಚಿತ್ರ 'ಮೇಲ್ಫಿಶಿಯೆಂಟ್'ನಲ್ಲಿ ಐಶ್ವರ್ಯಾ ಅವರ ಧ್ವನಿಯನ್ನು ನೆನಪಿಸುವಂತೆ ಮಾಡಿದೆ. ಆರಾಧ್ಯಳ ವಿಡಿಯೋಗೆ ಜನರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಆದಾಗ್ಯೂ, ಅಭಿಮಾನಿಗಳ ಕಣ್ಣುಗಳು ಬ್ಯಾಂಗ್ಸ್ ಇಲ್ಲದ ಅವಳ ಕೇಶವಿನ್ಯಾಸದ ಮೇಲೆಯೇ ನೆಟ್ಟಿದೆ. ಅಭಿಮಾನಿಗಳು ಅವರನ್ನು ಯಾವಾಗಲೂ ಬ್ಯಾಂಗ್‌ಗಳೊಂದಿಗೆ ನೋಡಿದ್ದಾರೆ. ಇದರಿಂದ ನೆಟಿಜನ್ಸ್‌ ಬೇಸರಗೊಂಡಿದ್ದಾರೆ.  

 ಒಬ್ಬ ಬಳಕೆದಾರರು ಕ್ಯೂಟ್‌ ಎಂದು ಬರೆದಿದ್ದಾರೆ. ಮತ್ತೊಬ್ಬರು, 'ಈ ಹೇರ್ ಸ್ಟೈಲ್ ಆರಾಧ್ಯ ಅವರಿಗೆ ಚೆನ್ನಾಗಿ ಕಾಣುತ್ತದೆ' ಎಂದು ಬರೆದಿದ್ದಾರೆ. ಅಭಿನಂದನೆಗಳು, ಆರಾಧ್ಯಳ ಹಣೆ ಬರಹ ಕಾಣಿಸುತ್ತಿದೆ ಎಂದು ಮೂರನೆಯವರು ಬರೆದಿದ್ದಾರೆ.
 

ಅಭಿಷೇಕ್ ಐಶ್ವರ್ಯಾ ಅವರ 12 ವರ್ಷದ ಮಗಳು ಆರಾಧ್ಯ ಕೆಲವು ಕಾರಣಗಳಿಗಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಆಗಾಗ್ಗೆ ಟ್ರೋಲ್ ಆಗುತ್ತಾಳೆ . ಕೆಲವೊಮ್ಮೆ ಜನರು ಆರಾಧ್ಯ ಅವರ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಾರೆ  ಮತ್ತು ಕೆಲವೊಮ್ಮೆ ಅವರು ತಮ್ಮ ತಾಯಿ ಐಶ್ವರ್ಯಾ ಅವರೊಂದಿಗೆ ಕಾಣಿಸಿಕೊಂಡಾಗಲೂ  ಅವಳನ್ನು ಟೀಕಿಸುತ್ತಾರೆ.

Latest Videos

click me!