ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಸೂರ್ಯ ಅವರ ಕಂಗುವಾ ಕೂಡ ಒಂದು. ಎರಡು ಬಾರಿ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟ ಈ ಚಿತ್ರ, ನವೆಂಬರ್ 14 ರಂದು ವಿಶ್ವಾದ್ಯಂತ 38 ಭಾಷೆಗಳಲ್ಲಿ 11,500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಮೊದಲ ಬಾರಿಗೆ ತಮಿಳು ಚಿತ್ರರಂಗದಿಂದ ಪ್ಯಾನ್ ವರ್ಲ್ಡ್ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ. ಸೂರ್ಯ ಅವರ ವೃತ್ತಿಜೀವನದಲ್ಲಿ ಮಾತ್ರವಲ್ಲ, ತಮಿಳು ಚಿತ್ರರಂಗದಲ್ಲೇ ಒಂದು ಮೈಲಿಗಲ್ಲು ಎನಿಸಲಿದೆ ಈ ಚಿತ್ರ.