ಪ್ರಮೋಷನ್ ಮಾಡ್ಲಿಲ್ಲ, ಅಬ್ಬರಿಸಲಿಲ್ಲ; 4 ಪಟ್ಟು ಗಳಿಸಿದ ಮಲಯಾಳಂ ಥ್ರಿಲ್ಲರ್ ಸಿನಿಮಾ

Published : Aug 01, 2026, 08:50 AM IST

ಇದೊಂದು ಕಾಮಿಡಿ ಮಿಸ್ಟರಿ ಥ್ರಿಲ್ಲರ್ ಕಥೆಯನ್ನು ಹೊಂದಿರುವ ಮಲಯಾಳಂ ಭಾಷೆಯ ಅದ್ಭುತವಾದ ಸಿನಿಮಾವಾಗಿದೆ. ತನ್ನ ಹೊಸ ನೆರೆಮನೆಯವನ ಮೇಲೆ ಅನುಮಾನಗೊಂಡು ಆತನ ಮೇಲೆ ಕಣ್ಣಿಡುವ ಗೃಹಿಣಿಯೊಬ್ಬಳ ರೋಚಕ ಕಥೆಯನ್ನು ಈ ಚಿತ್ರ ಹೊಂದಿದೆ.

PREV
15
ಮಲಯಾಳಂ ಸಿನಿಮಾ

ಕೆಲವೊಂದು ಸಿನಿಮಾಗಳು ಯಾವುದೇ ಅಬ್ಬರದ ಪ್ರಚಾರವಿಲ್ಲದೇ ಬಿಡುಗಡೆಯಾಗಿ, ಪ್ರೇಕ್ಷಕರಿಂದಲೇ ಮೆಚ್ಚುಗೆ ಪಡೆದುಕೊಂಡು ಹೌಸ್ ಫುಲ್ ಪ್ರದರ್ಶನ ಕಾಣುತ್ತವೆ. ನಂತರ OTT ಪ್ಲಾಟ್‌ಫಾರಂನಲ್ಲಿ ಸಂಚಲನವನ್ನೇ ಸೃಷ್ಟಿಸುತ್ತವೆ. ಇಂದು ನಾವು ನಿಮಗೆ ಅಂತಹುವುದೇ ಒಂದು ಮಲಯಾಳಂ ಸಿನಿಮಾ ಬಗ್ಗೆ ಹೇಳುತ್ತಿದ್ದೇವೆ.

25
ಒಟ್ಟು 54.36 ಕೋಟಿ ಕಲೆಕ್ಷನ್

ಸದ್ಯ OTTಯಲ್ಲಿ ಈ ಸಿನಿಮಾವನ್ನು ಮಲಯಾಳಂ ಜೊತೆಯಲ್ಲಿ ಕನ್ನಡ, ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿಯೂ ವೀಕ್ಷಿಸಬಹುದಾಗಿದೆ. 22ನೇ ನವೆಂಬರ್ 2024ರಂದು ಬಿಡುಗಡೆಯಾದ ಈ ಸಿನಿಮಾ 14 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಭಾರತದಲ್ಲಿ 27.92 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ವಿದೇಶದಲ್ಲಿಯೂ ಬಿಡುಗಡೆಯಾಗಿ ಅಲ್ಲಿಯೂ 22 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಒಟ್ಟು 54.36 ಕೋಟಿ ನಿರ್ಮಾಪಕರ ಜೇಬು ಸೇರಿದೆ.

35
ಯಾವುದು ಈ ಸಿನಿಮಾ?

ಸೂಕ್ಷ್ಮದರ್ಶಿನಿ 2024ರಲ್ಲಿ ಬಿಡುಗಡೆಯಾಗಿದ್ದು, ಬೆಸಿಲ್ ಜೋಸೆಫ್ ಮತ್ತು ನಜರಿಯಾ ನಾಜಿಮ್ ಪಹಾದ್ ಪ್ರಮುಖ ಪಾತ್ರಧಾರಿಗಳಾಗಿ ನಟಿಸಿದ್ದಾರೆ. ಕಾಮಿಡಿ ಮಿಸ್ಟರಿ ಥ್ರಿಲ್ಲರ್ ಕಥೆಯನ್ನು ಹೊಂದಿರುವ ಸಿನಿಮಾಗೆ ಜಿತಿನ್ ಆಕ್ಷನ್ ಕಟ್ ಹೇಳಿದ್ದಾರೆ. ಡಿಸ್ನಿ ಹಾಟ್‌ಸ್ಟಾರ್‌ ನಲ್ಲಿ ಸೂಕ್ಷ್ಮದರ್ಶಿನಿ (Sookshmadarshini On Disney Plus Hotstar) ಸಿನಿಮಾವನ್ನು ನೋಡಬಹುದಾಗಿದೆ.

45
ಸಿನಿಮಾದ ಕಥೆ ಏನು?

ಸೂಕ್ಷ್ಮದರ್ಶಿನಿ ಸಿನಿಮಾದಲ್ಲಿ ಪ್ರಿಯದರ್ಶಿನಿ ಉರ್ಫ್ ಪ್ರಿಯಾ ಸುತ್ತವೇ ಕಥೆ ಸಾಗುತ್ತದೆ. ಪತಿ ಆಂಥೋನಿ ಮತ್ತು ಮಗಳು ಕಾನಿ ಜೊತೆ ಪ್ರಿಯಾ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾಳೆ. ಹಾಗೆಯೇ ಹೌಸಿಂಗ್ ಕಾಲೋನಿಯಲ್ಲಿರುವ ಎಲ್ಲಾ ಮಹಿಳೆಯರೊಂದಿಗೆ ಪ್ರಿಯಾ ತುಂಬಾ ಅನ್ನೋನ್ಯತೆಯಿಂದಿರುತ್ತಾಳೆ. ಆದ್ರೆ ಈ ಹೌಸಿಂಗ್ ಕಾಲೋನಿಗೆ ಗ್ರೇಸ್ ಬೇಕರ್ಸ್ ಮಾಲೀಕ ಮ್ಯಾನೂಯೆಲ್ ಎಂಬಾತ ತನ್ನ ವೃದ್ದ ತಾಯಿಯೊಂದಿಗೆ ವಾಸಿಸಲು ಆರಂಭಿಸುತ್ತಾನೆ.

55
ಬುಕ್‌ಮೈಶೋ ನಲ್ಲಿ 8.7 ಮತ್ತು IMDBಯಲ್ಲಿ 7.8 ರೇಟಿಂಗ್

ಈ ಮ್ಯಾನೂಯೆಲ್‌ನ ಚಲನವಲನ ಮೇಲೆ ಪ್ರಿಯಾಗೆ ಅನುಮಾನ ಉಂಟಾಗುತ್ತದೆ. ಈ ಅನುಮಾನದಿಂದ ಮ್ಯಾನೂಯೆಲ್ ಮೇಲೆ ಪ್ರಿಯಾ ಕಣ್ಣಿಡುತ್ತಾಳೆ. ಇಲ್ಲಿಂದಲೇ ಕಥೆ ರೋಚಕ ತಿರುವು ಪಡೆದುಕೊಳ್ಳುತ್ತದೆ. ಮುಂದೆ ಏನಾಗುತ್ತೆ ಎಂಬುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. ಈ ಸಿನಿಮಾಗೆ ಬುಕ್‌ಮೈಶೋ ನಲ್ಲಿ 8.7 ಮತ್ತು IMDBಯಲ್ಲಿ 7.8 ರೇಟಿಂಗ್ ನೀಡಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories