ಒಂದು ಸಾಲಿನ ಕಥೆ ಹೇಳಿ 235 ಕೋಟಿ ದೋಚಿದ ಕ್ರೈಂ ಥ್ರಿಲ್ಲರ್ ಮಲಯಾಳಂ ಸಿನಿಮಾ

Published : Jun 20, 2025, 12:40 PM IST

Malayalam movie: ಮಲಯಾಳಂ ಚಿತ್ರವು ಒಂದು ಮಧ್ಯಮ ವರ್ಗದ ಕುಟುಂಬದ ಕಥೆಯನ್ನು ಹೇಳುತ್ತದೆ. ಮಗ ಕಾಣೆಯಾದ ನಂತರ ಈ ಸಿನಿಮಾ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತದೆ.

PREV
15

ಮಲಯಾಳಂ ಚಿತ್ರರಂಗ ಸರಳವಾದ ಕಥೆಯನ್ನು ಸುಂದರವಾಗಿ ಹೇಳುವಲ್ಲಿ ನಿಸ್ಸೀಮರು. ಹಾಗಾಗಿ ಇಂದು ಯಾವುದೇ ಮಲಯಾಳಂ ಸಿನಿಮಾ ರಿಲೀಸ್ ಆದ್ರೆ ಬಾಲಿವುಡ್ ಸೇರಿದಂತೆ ಇಡೀ ಚಿತ್ರರಂಗ ತಿರುಗಿ ನೋಡುತ್ತದೆ. ಈ ವರ್ಷ ಏಪ್ರಿಲ್‌ನಲ್ಲಿ ಬಿಡುಗಡೆಯಾದ ಮಲಯಾಳಂ ಸಿನಿಮಾ ಕೇವಲ 28 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಆದ್ರೆ ಇದೀಗ 230-235 ಕೋಟಿ ರೂ. ಕಲೆಕ್ಷನ್ ಮಾಡಿದೆ.

25

ಇಂದು ಮಲಯಾಳಂ ಸಿನಿಮಾಗಳು ಪ್ಯಾನ್ ಇಂಡಿಯಾ ಕಲ್ಪನೆಯಲ್ಲಿ ತೆರೆ ಕಾಣುತ್ತಿವೆ. ಏಪ್ರಿಲ್‌ನಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಸಿನಿಮಾ, ದಿನಿನಿತ್ಯ ಸಮಾಜದಲ್ಲಿ ನಡೆಯುವ ಕಥೆಯನ್ನು ಹೊಂದಿತ್ತು. ಈ ಚಿತ್ರ ವೀಕ್ಷಕರಿಗೆ ಪರಿಣಾಮಕಾರಿ ತಲುಪಿಸುವ ಉದ್ದೇಶದಿಂದ 2024ರ ಕೇರಳದಲ್ಲಿ ನಡೆದ ಭೂ ಕುಸಿತದ ಸನ್ನಿವೇಶಗಳೊಂದಿಗೆ ಜೋಡಿಸಲಾಗಿದೆ.

35

ಮಾಲಿವುಡ್ ಸೂಪರ್ ಸ್ಟಾರ್ ಮೋಹನ್‌ಲಾಲ್ ಅಭಿನಯದ 'ತುಡರುಮ್' ಚಿತ್ರ ಏಪ್ರಿಲ್‌-2025ರಲ್ಲಿ ಬಿಡುಗಡೆಯಾಗಿತ್ತು. ಮಧ್ಯಮ ಕುಟುಂಬದ ಓರ್ವ ಟ್ಯಾಕ್ಸಿ ಚಾಲಕ ಬೆಂಜು ಮತ್ತು ಅವನ ಸುಂದರವಾದ ಕುಟುಂಬ. ಮುದ್ದಾದ ಪತ್ನಿ, ಆರತಿಗೊಬ್ಬಳು ಮಗಳು, ಕೀರ್ತಿಗೊಬ್ಬ ಮಗ. ಖುಷಿ ಖುಷಿಯಾಗಿದ್ದ ಕುಟುಂಬದಲ್ಲಿ ಮಗ ಕಾಣೆಯಾಗುತ್ತಾನೆ. ನಂತರ ಸಾಮಾನ್ಯ ವ್ಯಕ್ತಿಯಂತಿದ್ದ ಬೆಂಜು ರೂಪವೇ ಬದಲಾಗುತ್ತದೆ.

45

ಮಗನ ಸಾವಿನ ಹಿಂದಿರುವ ಇಬ್ಬರು ಪೊಲೀಸ್ ಅಧಿಕಾರಿಗಳ ಪಾತ್ರವಿರುವ ವಿಷಯ ಬೆಂಜುಗೆ ಗೊತ್ತಾಗುತ್ತದೆ. ಮುಂದೆ ಮಗನ ಸಾವಿಗೆ ಕಾರಣ ಏನು ಅಂತ ತಿಳಿದುಕೊಳ್ಳಲು ಬೆಂಜು ಮುಂದಾಗುತ್ತಾನೆ. ಪೊಲೀಸ್ ಅಧಿಕಾರಿಗಳು ಬೆಂಜುವಿನ ಕುಟುಂಬದ ಮೇಲೆ ಅನೇಕ ಆರೋಪಗಳನ್ನು ಮಾಡುತ್ತಿರುತ್ತಾರೆ. ಹಾಗೆ ತಮ್ಮದೇ ಆದ ಸುಳ್ಳು ಕಥೆಗಳ ಮೂಲಕ ತಂದೆಯಿಂದಲೇ ಮಗನ ಕೊ*ಲೆ ಎಂದು ಬಿಂಬಿಸಲು ಪ್ರಯತ್ನಿಸುತ್ತಾರೆ.

55

ಅಧಿಕಾರದಲ್ಲಿರುವ ಜನರು ದೌರ್ಜನ್ಯದಿಂದ ಹೇಗೆ ಅಮಾಯಕರು ಕಿರುಕುಳಕ್ಕೆ ಒಳಗಾಗುತ್ತಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ಮೋಹನ್ ಲಾಲ್, ಶೋಬನಾ, ಪ್ರಕಾಶ್ ವರ್ಮಾ, ಬಿನ್ನು ಪಪ್ಪು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಚಿತ್ರಕ್ಕೆ ತರುಣ್ ಮೂರ್ತಿ ಆಕ್ಷನ್ ಕಟ್ ಹೇಳಿದ್ದಾರೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ತುಡರುಮ್ ಸಿನಿಮಾ ವೀಕ್ಷಿಸಬಹುದು.

Read more Photos on
click me!

Recommended Stories