ಆಸ್ಪತ್ರೆ ಬಿಲ್‌ ಕಟ್ಟಲೂ ಹಣವಿಲ್ಲದೆ ನರಳಿದ ಸ್ಟಾರ್ಸ್‌ ಇವರು!

Published : Sep 19, 2022, 05:37 PM IST

ಕಿರುತೆರೆಯ ಕುಬೂಲ್ ಹೈ' ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದ ನಟಿ ನಿಶಿ ಸಿಂಗ್ ಇನ್ನಿಲ್ಲ. ಸಾಯುವ ಎರಡು ದಿನಗಳ ಮೊದಲು ತನ್ನ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಿಶಿ ಸಿಂಗ್, ಕೊನೆ ಕ್ಷಣದಲ್ಲಿ ಚಿಕಿತ್ಸೆ ಪಡೆಯಲು ತಮ್ಮ ಮನೆ ಮತ್ತು ಕಾರನ್ನು ಮಾರಾಟ ಮಾಡಬೇಕಾಯಿತು. ಆದರೂ ಅವರು ಬದುಕುಳಿಯಲಿಲ್ಲ. ಅವರ ನಿಧನದ ನಂತರ ಅವರ ಕುಟುಂಬವು ಶೋಕದಲ್ಲಿ ಮಾತ್ರವಲ್ಲದೆ ಆರ್ಥಿಕ ಮುಗ್ಗಟ್ಟಿನಲ್ಲಿದೆ. ಅಂದಹಾಗೆ, ಆರ್ಥಿಕ ಬಿಕ್ಕಟ್ಟಿನಿಂದಾಗಿ ಅನೇಕ ಖ್ಯಾತನಾಮರು ಸೆಲಬ್ರೆಟಿಗಳು  ಜಗತ್ತನ್ನು ತೊರೆದಿದ್ದಾರೆ. ಅಂತಹ ಸೆಲೆಬ್ರಿಟಿಗಳ ಬಗ್ಗೆ ವಿವರ ಇಲ್ಲಿದೆ.

PREV
112
ಆಸ್ಪತ್ರೆ ಬಿಲ್‌ ಕಟ್ಟಲೂ ಹಣವಿಲ್ಲದೆ ನರಳಿದ ಸ್ಟಾರ್ಸ್‌ ಇವರು!

ಹಿಂದಿನ ನಟಿ ಮೀನಾ ಕುಮಾರಿ ಯಾರಿಗೆ ಗೊತ್ತಿಲ್ಲ ಹೇಳಿ? ಕೇವಲ 4ನೇ ವಯಸ್ಸಿನಲ್ಲಿಯೇ ತಮ್ಮ ನಟನಾ ವೃತ್ತಿ ಪ್ರಾರಂಭಿಸಿದ ಮೀನಾ ಕುಮಾರಿ ಅವರು ಟ್ರಾಜಿಡಿ ಕ್ವೀನ್ (Tragedy Queen) ಎಂದು ಜನಪ್ರಿಯರಾಗಿದ್ದಾರೆ. ಅವರು 31 ಮಾರ್ಚ್ 1972 ರಂದು ನಿಧನರಾದಾಗ ಅವರಿಗೆ 38 ವರ್ಷ. ಕೊನೆ ಕ್ಷಣದಲ್ಲಿ ಆಸ್ಪತ್ರೆ ಬಿಲ್ ಕಟ್ಟಲು ಮೀನಾ ಕುಮಾರಿ ಬಳಿ ಹಣ ಇರಲಿಲ್ಲ ಎನ್ನಲಾಗಿದೆ.

212

ಒಂದು ಕಾಲದಲ್ಲಿ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರಾಗಿದ್ದ ಪರ್ವೀನ್ ಬಾಬಿ ಆರ್ಥಿಕ ಬಿಕ್ಕಟ್ಟಿನಲ್ಲಿ ನಿಧನರಾದರು. 70 ಮತ್ತು 80 ರ ದಶಕದಲ್ಲಿ 'ಅಮರ್ ಅಕ್ಬರ್ ಅಂತೋನಿ' ಮತ್ತು 'ನಮಕ್ ಹಲಾಲ್' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಪರ್ವೀನ್, 20 ಜನವರಿ 2005 ರಂದು ತನ್ನ ಅಪಾರ್ಟ್ಮೆಂಟ್‌ನಲ್ಲಿ ನಿಧನರಾದರು. 2 ದಿನಗಳಿಂದ ಅವರ ಶವ ಅಪಾರ್ಟ್‌ಮೆಂಟ್‌ನಲ್ಲಿಯೇ ಇತ್ತು. ಕೊನೆಯ ಕ್ಷಣದಲ್ಲಿ ಅವರ ಬಳಿ ಚಿಕಿತ್ಸೆ ಪಡೆಯಲು ಕೂಡ ಹಣವಿರಲಿಲ್ಲ.


 

312

70ರ ದಶಕದಲ್ಲಿ ‘ಹುಮ್‌ರಾಜ್‌’ ಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ ವಿಮಿ, ಪತಿಯಿಂದ ವಿಚ್ಛೇದನದ ನಂತರ ಖಿನ್ನತೆಗೆ ಒಳಗಾಗಿದ್ದರು. ಅವರ ಕೊನೆಯ ದಿನಗಳು ಒಂಟಿತನ ಮತ್ತು ಬಡತನದಲ್ಲಿ ಕಳೆದವು. ಅವರು 22 ಆಗಸ್ಟ್ 1977 ರಂದು ನಿಧನರಾದಾಗ, ಅವರ ಅಂತ್ಯಕ್ರಿಯೆಯಲ್ಲಿ ಚಿತ್ರರಂಗದ ಯಾರೂ ಭಾಗವಹಿಸಲಿಲ್ಲ. ಅವರ ಶವವನ್ನು ಸಹ ಕೈಗಾಡಿಯಲ್ಲಿ ಸ್ಮಶಾನಕ್ಕೆ ಕೊಂಡೊಯ್ಯಲಾಯಿತು.


 

412

ಶೋಲೆಯ ಇಮಾಮ್, ಎ. ಆಫ್. ಹಂಗಲ್ ಸಹ ಬಡತನದಲ್ಲಿ ನಿಧನರಾದರು. ಕೊನೆಯ ಕ್ಷಣದಲ್ಲಿ ಚಿಕಿತ್ಸೆ ಪಡೆಯಲು ಕೂಡ ಹಣವಿರಲಿಲ್ಲ. ಅಮಿತಾಬ್ ಬಚ್ಚನ್ ಅವರಿಗೆ ಚಿಕಿತ್ಸೆಗಾಗಿ 20 ಲಕ್ಷ ರೂಪಾಯಿ ನೀಡಿದ್ದರು. 26 ಆಗಸ್ಟ್ 2012 ರಂದು ತಮ್ಮ 95 ನೇ ವಯಸ್ಸಿನಲ್ಲಿ ವೃದ್ಧಾಪ್ಯದ ಸಮಸ್ಯೆಗಳಿಂದ ನಿಧನರಾದರು.


 

512

ಪೀಪ್ಲಿ ಲೈವ್' ಮತ್ತು 'ಪಾನ್ ಸಿಂಗ್ ತೋಮರ್' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟ ಸೀತಾರಾಮ್ ಪಾಂಚಾಲ್ ಅವರು ಆಗಸ್ಟ್ 2017 ರಲ್ಲಿ ನಿಧನರಾದರು. ಅವರು ಮೂತ್ರಪಿಂಡ ಮತ್ತು ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕೊನೆಯ ಕ್ಷಣದಲ್ಲಿ ಚಿಕಿತ್ಸೆ ಪಡೆಯಲು ಹಣವಿಲ್ಲದೇ ಬಡತನದಲ್ಲೇ ಕೊನೆಯುಸಿರೆಳೆದಿದ್ದಾರೆ.


 

612

40 ಮತ್ತು 50 ರ ದಶಕದ ನಟಿ ನಳಿನಿ ಜಯವಂತ್ ಕಾಜೋಲ್ ಅವರ ತಾಯಿಯ ಅಜ್ಜಿ ಶೋಭನಾ ಸಮರ್ಥ್ ಅವರ ಸೋದರ ಸಂಬಂಧಿಯಾಗಿದ್ದು, ಈ ಸಂಬಂಧದಿಂದ ಅವರು ಕಾಜೋಲ್ ಅವರ ತಾಯಿಯ ಅಜ್ಜಿಯಾಗಿದ್ದರು. ಅಂತಹ ದೊಡ್ಡ ಮತ್ತು ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವರಾಗಿದ್ದರೂ, ಅವರು ಬಡತನ ಮತ್ತು ಒಂಟಿತನದಲ್ಲಿ ನಿಧನರಾದರು. 'ಬೆಹೆನ್' (1941) ನಂತಹ ಚಿತ್ರಗಳ ನಾಯಕಿಯಾಗಿ ನಟಿಸಿದ್ದ ನಳಿನಿ ಎರಡು ಮದುವೆಗಳನ್ನು ಮಾಡಿಕೊಂಡಿದ್ದರು. ಎರಡನೇ ಗಂಡನ ಮರಣದ ನಂತರ ಸಮಾಜದಿಂದ ದೂರವಾಗಿದ್ದರು. ಅವರು 2010ರಲ್ಲಿ ತಮ್ಮ 84 ನೇ ವಯಸ್ಸಿನಲ್ಲಿ ತೀವ್ರ ಹಣದ ಸಮಸ್ಯೆಗಳಿದ್ದಾಗಲೇ ನಿಧನರಾದರು. ಕೊನೆ ಕ್ಷಣದಲ್ಲಿ ಆಸ್ಪತ್ರೆ ಬಿಲ್ ಕಟ್ಟುವಷ್ಟು ಹಣವೂ ಅವರ ಬಳಿ ಇರಲಿಲ್ಲ ಎನ್ನಲಾಗಿದೆ.

712

ಕುಕು ಮೋರ್ ಆಂಗ್ಲೋ-ಇಂಡಿಯನ್ ನರ್ತಕಿ ಮತ್ತು ನಟಿಯಾಗಿದ್ದು, ಅವರು 'ಬರ್ಸಾತ್' (1949), 'ಹಂಸ್ಟೆ ಅನುಷ್' (1950) ಮತ್ತು 'ಮುಜೆ ಜೀನೆ ದೋ' (1963) ದಂತಹ ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. ಅವರು 30 ಸೆಪ್ಟೆಂಬರ್ 1981 ರಂದು ಕ್ಯಾನ್ಸರ್ ನಿಂದ ನಿಧನರಾದರು. ಆಕೆಯ ಮರಣದ ಸಮಯದಲ್ಲಿ ಕುಕುಗೆ ಸುಮಾರು 53 ವರ್ಷ ವಯಸ್ಸಾಗಿತ್ತು ಮತ್ತು ಅವಳು ಕೊನೆಯ ಸಮಯವನ್ನು ಬಡತನದಲ್ಲಿ ಕಳೆದರು ಎಂದು ಹೇಳಲಾಗುತ್ತದೆ.


 

812

ಭಗವಾನ್ ದಾದಾ ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿ ವ್ಯಕ್ತಿಯಾಗಿದ್ದ ಕಾಲವೊಂದಿತ್ತು. ಅವರು ಜುಹು ಬೀಚ್‌ನಲ್ಲಿ 25 ಮಲಗುವ ಕೋಣೆಗಳ ಬಂಗಲೆ ಮತ್ತು 7 ಐಷಾರಾಮಿ ಕಾರುಗಳನ್ನು ಹೊಂದಿದ್ದರು. ಆದರೆ ಅದೃಷ್ಟವು ತಿರುವು ಪಡೆದುಕೊಂಡಿತು ಮತ್ತು ಅವರು ಎಲ್ಲವನ್ನೂ ಮಾರಾಟ ಮಾಡಿದರು. ಕೊನೆಯ ಕ್ಷಣದಲ್ಲಿ ಕುಟುಂಬವನ್ನು ಚಾಲ್‌ನಲ್ಲಿ ಇರಿಸಬೇಕಾಯಿತು. ಅವರು 2002 ರಲ್ಲಿ ತಮ್ಮ 89 ನೇ ವಯಸ್ಸಿನಲ್ಲಿ ನಿಧನರಾದರು.

912

1920 ರಿಂದ 1970 ರ ದಶಕದವರೆಗೆ 'ಬಲಿದನ್', 'ಬಾಜ್' ಮತ್ತು 'ಆಮ್ರಪಾಲಿ' ಚಿತ್ರಗಳ ನಾಯಕಿಯಾಗಿದ್ದ ರೂಬಿ ಮೇಯರ್ಸ್ ಅಕಾ ಸುಲೋಚನಾ ಅವರು ಬಾಂಬೆ ಗವರ್ನರ್‌ಗಿಂತ ಹೆಚ್ಚು ಸಂಪಾದನೆ ಮಾಡಿದ್ದರು. ಸ್ವಂತ ಪ್ರೊಡಕ್ಷನ್ ಹೌಸ್ ಕೂಡ ಆರಂಭಿಸಿದರು. ಆದರೆ ಅವರು 1983 ರಲ್ಲಿ ನಿಧನರಾದಾಗ ಅವರ ಬಳಿ ಏನೂ ಇರಲಿಲ್ಲ.

1012

ಅಚಲ ಸಚ್‌ದೇವ್ ಅವರು 120 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ, ಇದರಲ್ಲಿ 'ಕಲ್ ಹೋ ನಾ ಹೋ', 'ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ', 'ಚೈಲಾ ಬಾಬು', 'ಗೀತಾ ಮೇರಾ ನಾಮ್', 'ಅಲ್ಬೇಲಾ' ಮತ್ತು 'ಕನ್ಯಾದಾನ' ಪ್ರಮುಖವಾದವು. ಆಕೆಯ ಪತಿ ಪೀಟರ್ ಮರಣದ ನಂತರ, ಅವರು ಒಂಟಿಯಾಗಿ ವಾಸಿಸಲು ಪ್ರಾರಂಭಿಸಿದರು. 30 ಏಪ್ರಿಲ್‌ 2012 ರಂದು ಪುಣೆಯಲ್ಲಿ ನಿಧನರಾದಾಗ, ಅವರು ಬಡತನ ಮತ್ತು ಒಂಟಿತನದಿಂದ ಬಳಲುತ್ತಿದ್ದರು. ಅವರ ಬಳಿ ಚಿಕಿತ್ಸೆಗೆ ಹಣವೂ ಇರಲಿಲ್ಲ.


 

1112

ಜನಪ್ರಿಯ ನಟ ಚಂದ್ರ ಮೋಹನ್ ಅವರು 1930 ಮತ್ತು 1940 ರ ದಶಕಗಳಲ್ಲಿ ಬಡತನದಿಂದ ಬಳಲಿ  1949 ರಲ್ಲಿ ನಿಧನರಾದರು. ಅವರು 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದರು ಮತ್ತು  ಇವುಗಳಲ್ಲಿ 'ಮೊಘಲ್-ಎ-ಅಜಮ್' ಮತ್ತು 'ರಾನಾಬನ್' ಸೇರಿವೆ. ಕುಡಿತ, ಜೂಜಾಟದ ಚಟ ಇವರನ್ನು ಹಾಳು ಮಾಡಿತ್ತು 44ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು ಎನ್ನಲಾಗಿದೆ.


 

1212

ಭರತ್ ಭೂಷಣ್ 50 ರ ದಶಕದಲ್ಲಿ ಭಾರತೀಯ ಚಿತ್ರರಂಗದ ಅತ್ಯಂತ ಸುಂದರ ನಟರಲ್ಲಿ ಒಬ್ಬರು. ಅವರು ಚಲನಚಿತ್ರಗಳಿಂದ ಸಾಕಷ್ಟು ಗಳಿಸಿದರು. ಆದರೆ ಜೂಜಿನ ಚಟ ಅವರನ್ನು ಹಾಳುಮಾಡಿತು. ಅವರು ತಮ್ಮ ಎಲ್ಲಾ ಹಣ ಕಳೆದುಕೊಂಡರು ಮತ್ತು ಕೊನೆಯ ಕ್ಷಣದಲ್ಲಿ ಚಾಲ್‌ಗಳಲ್ಲಿ ವಾಸ ಮಾಡಬೇಕಾಯಿತು. ಅವರು 27 ಜನವರಿ 1992 ರಂದು ಬಡತನದಲ್ಲಿ ನಿಧನರಾದರು.

Read more Photos on
click me!

Recommended Stories