ಇತ್ತೀಚೆಗಷ್ಟೇ ಕಪಿಲ್ ಶರ್ಮಾ ಅಭಿನಯದ ಜ್ವಿಗಾಟೊ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಆದರೆ, ಚಿತ್ರ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಇದುವರೆಗೂ ಚಿತ್ರ ಕೇವಲ 1 ಕೋಟಿ ಕಲೆಕ್ಷನ್ ಮಾಡಿದೆ. ಈ ನಡುವೆ, ಕಪಿಲ್ ಅವರ ಐಷಾರಾಮಿ ಮನೆಯ ಫೋಟೋಗಳು ಮುನ್ನೆಲೆಗೆ ಬಂದಿವೆ. ಹೇಗಿದೆ ನೋಡಿ ಅವರ ಮನೆ.
ಕಪಿಲ್ ಶರ್ಮಾ ಮುಂಬೈನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಹೊಂದಿದ್ದು, ಅಲ್ಲಿಂದ ನಗರವನ್ನು ಕಾಣಬಹುದು ಮತ್ತು ಅವರ ಮನೆಯ ಸುತ್ತಲಿನ ವಾತಾವರಣ ಹಸಿರಿನಿಂದ ತುಂಬಿದೆ. ಕಪಿಲ್ ಶರ್ಮಾ ಪಂಜಾಬ್‌ನಲ್ಲಿ ಸಖತ್ ದೊಡ್ಡ ಮನೆಯನ್ನು ಸಹ ಹೊಂದಿದ್ದಾರೆ.
28
ಕಪಿಲ್ ಶರ್ಮಾ ಅವರ ಮನೆಯಲ್ಲಿ ದೊಡ್ಡ ಸ್ಟಡಿ ಏರಿಯಾವನ್ನು ಹೊಂದಿದ್ದಾರೆ, ಇದರ ಚಾವಣಿ ಗೋಲ್ಡನ್ ಮತ್ತು ಬಿಳಿ ಬಣ್ಣದ ಬೃಹತ್ ಲೈಟಿನ ಗೊಂಚಲುಗಳನ್ನು ಹೊಂದಿದೆ. ಇದಲ್ಲದೆ ಕೋಣೆಯ ಮೂಲೆಗಳಲ್ಲಿ ಐಷಾರಾಮಿ ನೋಟವನ್ನು ನೀಡುವ ಲೈಟ್‌ಗಳಿವೆ
38
ಕಪಿಲ್ ಅವರ ಮನೆಯಲ್ಲಿ ಉದ್ಯಾನಕ್ಕೆ ಎದುರಾಗಿ ದೊಡ್ಡ ಊಟದ ಹಾಲ್ ಇದೆ. ಇಡೀ ಪ್ರದೇಶದ ಗೋಡೆಗಳು ಮತ್ತು ಚಾವಣಿಗಳ ಥೀಮ್ ಅನ್ನು ಬಿಳಿಯಾಗಿ ಇರಿಸಲಾಗಿದೆ. ಇಟ್ಟಿಗೆ ಗೋಡೆಗಳ ಉದ್ದಕ್ಕೂ ಚಾವಣಿಯ ಮೇಲೆ ನೇತಾಡುವ ನಕ್ಷತ್ರ ದೀಪಗಳಿವೆ.
48
ಅವರ ಮುಂಬೈನ ಮನೆಯು ಉದ್ದನೆಯ ಬಾಲ್ಕನಿಯನ್ನು ಹೊಂದಿದ್ದು ಅಲ್ಲಿ ಅವರು ಗಾರ್ಡಿನಿಂಗ್ ಮಾಡಿರುವುದು ಕಂಡುಬರುತ್ತದೆ. ಬಾಲ್ಕನಿ ಮತ್ತು ಗಾರ್ಡನ್ ಪ್ರದೇಶಕ್ಕೆ ಸಂಪೂರ್ಣ ನೋಟವನ್ನು ನೀಡಲು ಫಾಕ್ಸ್ ಗ್ರಾಸ್ ಕಾರ್ಪೆಟ್ ಅನ್ನು ಆಳವಡಿಸಲಾಗಿದೆ.
58
Kapil Sharma
ಕಪಿಲ್ ಶರ್ಮಾ ಅವರ ಮನೆಗೆ ದೊಡ್ಡ ಗಾಜಿನ ಕಿಟಕಿಗಳಿವೆ. ಅವರು ಸಂಗೀತಕ್ಕಾಗಿ ಮನೆಯ ಒಂದು ಸ್ಥಳವನ್ನು ಮೀಸಲಾಗಿಟ್ಟು ಕೊಂಡಿದ್ದು ಅಲ್ಲಿ ಅವರು ಆಗಾಗ್ಗೆ ಹಾಡುತ್ತಾರೆ ಮತ್ತು ನುಡಿಸುತ್ತಾರೆ.
68
ಪಂಜಾಬ್‌ನಲ್ಲಿರುವ ಕಪಿಲ್ ಶರ್ಮಾ ಅವರ ಬಂಗಲೆ ಅರಮನೆಗಿಂತ ಕಡಿಮೆಯಿಲ್ಲ. ಒಂದೇ ಅಂತಸ್ತಿನ ಮನೆಯ ಮುಂದೆ ಸಹ ಸುಂದರವಾದ ಉದ್ಯಾನವಿದೆ.
78
ಪಂಜಾಬ್‌ನ ಮನೆಯಲ್ಲಿ ಮರದ ನೆಲಹಾಸನ್ನು ಮಾಡಲಾಗಿದೆ. ಮನೆಯ ಮೂಲೆ ಮೂಲೆಯಲ್ಲೂ ಹೂವಿನ ಕುಂಡಗಳನ್ನು ಅಳವಡಿಸಲಾಗಿದೆ. ಕಪಿಲ್ ಪಂಜಾಬ್‌ನಲ್ಲಿದ್ದಾಗ ಇಲ್ಲಿನ ಗಾರ್ಡನ್ ನಲ್ಲಿ ವರ್ಕೌಟ್ ಮಾಡುತ್ತಾರೆ.
88
ಈ ಮನೆಯ ಸುತ್ತಲೂ ಉದ್ಯಾನವಿದೆ. ಲಿವಿಂಗ್‌ನಿಂದ ರೆಸ್ಟ್ ಮತ್ತು ಡ್ರೆಸ್ಸಿಂಗ್ ರೂಮ್‌ವರೆಗೆ ಪ್ರತಿಯೊಂದು ಕೋಣೆಯನ್ನೂ ವಿಶೇಷವಾಗಿ ಡಿಸೈನ್ ಮಾಡಿದ್ದಾರೆ ಮತ್ತು ಈ ಮನೆಯಲ್ಲಿ ಈಜುಕೊಳವೂ ಇದೆ.