ಅಜಯ್ ದೇವಗನ್ ಕೆರಿಯರ್‌ನ ಡಿಸಾಸ್ಟರ್ ಚಿತ್ರಗಳು: ಯಾವಾಗ ಬಿಡುಗಡೆಯಾಯಿತು ಎಂಬ ಸುಳಿವೂ ಇಲ್ಲ

Published : Nov 17, 2022, 04:42 PM IST

ಇಂದು, ಅಜಯ್ ದೇವಗನ್ (Ajay Devgn) ಅವರ ಬಹು ನಿರೀಕ್ಷಿತ ಚಿತ್ರ ದೃಶ್ಯಂ 2 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಜಯ್‌ ಅವರ ಈ ಚಿತ್ರಕ್ಕಾಗಿ ಜನರು ಬಹಳ ಸಮಯದಿಂದ ಕಾಯುತ್ತಿದ್ದಾರೆ. ಅದರ ಮೊದಲ ಭಾಗವು 2015 ರಲ್ಲಿ ಬಿಡುಗಡೆಯಾಯಿತು. ಬಹಳ ಕಾಲದಿಂದ  ಚಿತ್ರದ ಎರಡನೇ ಭಾಗದ ಬಗ್ಗೆ ಚರ್ಚೆ ನಡೆಯುತ್ತಿದೆ. ಅಜಯ್ ತಮ್ಮ 31 ವರ್ಷಗಳ ವೃತ್ತಿ ಜೀವನದಲ್ಲಿ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹಲವು ಹಿಟ್‌ ಸಿನಿಮಾಗಳನ್ನು ನೀಡಿದ್ದರೂ, ಅಜಯ್‌ ಅವರ ಕೆಲವು ಸಿನಿಮಾಗಳು ದೊಡ್ಡ ದುರಂತ ಎಂದು ಸಾಬೀತಾಯಿತು. ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ ಫ್ಲಾಪ್‌ ಆದ ಅಜಯ್‌ ದೇವಗನ್‌ ಅವರ ಸಿನಿಮಾಗಳು ಇಲ್ಲಿವೆ.

PREV
110
ಅಜಯ್ ದೇವಗನ್ ಕೆರಿಯರ್‌ನ ಡಿಸಾಸ್ಟರ್ ಚಿತ್ರಗಳು: ಯಾವಾಗ ಬಿಡುಗಡೆಯಾಯಿತು ಎಂಬ ಸುಳಿವೂ ಇಲ್ಲ

ಅಜಯ್ ದೇವಗನ್ ತಮ್ಮ ವೃತ್ತಿ ಜೀವನವನ್ನು ಬ್ಲಾಕ್ಬಸ್ಟರ್ ಚಿತ್ರ ಫೂಲ್ ಔರ್ ಕಾಂಟೆಯೊಂದಿಗೆ ಪ್ರಾರಂಭಿಸಿದರು. ಆದರೆ ಇದರ ನಂತರ ಬಂದ ಅವರ ಅನೇಕ ಚಿತ್ರಗಳು ಫ್ಲಾಪ್ ಆದವು.

210

1993 ರಲ್ಲಿ ಕರಿಷ್ಮಾ ಕಪೂರ್ ಮತ್ತು ಮನಿಶಾ ಕೊಯಿಲಾರ ಜೊತೆ ಧನ್ವನ್ ಚಿತ್ರ ಬಂದಿತ್ತು. ಈ ಮೆಗಾ ಡಿಸಾಸ್ಟರ್ ಚಿತ್ರದ ಕಲೆಕ್ಷನ್ ಕೇಳಿ ಯಾರಿಗಾದರೂ ತಲೆ ತಿರುಗಬಹುದು. ಚಿತ್ರ ಗಳಿಸಿದ್ದು ಕೇವಲ 1.39 ಕೋಟಿ ಮಾತ್ರ.
 

310

1993 ರ ಚಿತ್ರ ಬೇದರದಿ ಗಲ್ಲಾಪೆಟ್ಟಿಗೆಯಲ್ಲಿ ದುರಂತವಾಗಿ ಪರಿಣಮಿಸಿತು. ಊರ್ಮಿಳಾ ಮಾತೋಂಡ್ಕರ್ ಅಜಯ್‌ ಅಭಿನಯದ ಈ ಚಿತ್ರ ಯಾವಾಗ ಬಂತು, ಯಾವಾಗ ಹೋಯಿತು ಎಂಬುದು ಯಾರಿಗೂ ನೆನಪಿಲ್ಲ  ಈ ಚಿತ್ರ ಬರೋಬ್ಬರಿ 2.85 ಕೋಟಿ ಕಲೆಕ್ಷನ್ ಮಾಡಿತ್ತು.


 

410

ಟಬು, ಅಮರೀಶ್ ಪುರಿ ಮತ್ತು ರಾಹುಲ್ ಬೋಸ್ ಜೊತೆಗಿನ ತಕ್ಷಕ್ ಚಿತ್ರವೂ ದುರಂತ ಎಂದು ಸಾಬೀತಾಯಿತು. 1999 ರಲ್ಲಿ, ಈ ಚಿತ್ರವು ಚಿತ್ರಮಂದಿರಗಳಲ್ಲಿ ತನ್ನ ಮ್ಯಾಜಿಕ್ ತೋರಿಸಲು ಸಾಧ್ಯವಾಗಲಿಲ್ಲ. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ನೀಡಿತು ಮತ್ತು ಕೇವಲ 3.65 ಕೋಟಿ ಗಳಿಸಲು ಸಾಧ್ಯವಾಯಿತು.
 

510

ಅಜಯ್ ದೇವಗನ್ ಅವರ ತೇರಾ ಮೇರಾ ಸಾಥ್ ರಹೇ ಚಿತ್ರದ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. 2001 ರ ಈ ಚಿತ್ರದಲ್ಲಿ ಅಜಯ್ ಜೊತೆ ನಮ್ರತಾ ಶಿರೋಡ್ಕರ್ ಮತ್ತು ಸೋನಾಲಿ ಬೇಂದ್ರೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕೆಟ್ಟದಾಗಿ ನೆಲಕಚ್ಚಿತ್ತು ಮತ್ತು ಕೇವಲ 3.04 ಕೋಟಿ ವ್ಯವಹಾರವನ್ನು ಮಾಡಿತು.
 

610

ಅಮೀಶಾ ಪಟೇಲ್ ಜೊತೆ ಕೂಡ ಅಜಯ್ ದೇವಗನ್ ತೆರೆ ಹಂಚಿಕೊಂಡಿರುವುದು ಬಹುಶಃ ಯಾರಿಗೂ ನೆನಪಿಲ್ಲ ಇಬ್ಬರ ಚಿತ್ರ ಪರ್ವಾನಾ 2003ರಲ್ಲಿ ಬಂದಿತ್ತು. ಅವರ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಕೆಟ್ಟದ್ದನ್ನು ಗಳಿಸಿತು ಮತ್ತು ಮಹಾ ಡಿಸಾಸ್ಟರ್ ಎಂದು ಘೋಷಿಸಲಾಯಿತು. ಚಿತ್ರ ಕೇವಲ 4.35 ಕೋಟಿ ಗಳಿಸಿತು.


 

710

ಅಜಯ್ ದೇವಗನ್ ಕಾಜೋಲ್ ಅವರ ಕಸಿನ್‌ ರಾಣಿ ಮುಖರ್ಜಿ ಅವರೊಂದಿಗೆ 2-3 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈ ಚಿತ್ರಗಳಲ್ಲಿ ಒಂದು ಚೋರಿ ಚೋರಿ. ಈ ಚಿತ್ರವೂ ದೊಡ್ಡ ಡಿಸಾಸ್ಟರ್ ಆಗಿತ್ತು. 2003ರಲ್ಲಿ ಬಂದ ಈ ಚಿತ್ರದ  ಸುಮಾರು 3.15 ಕೋಟಿ ವ್ಯವಹಾರ ಮಾಡಿದೆ.

810

ಸೂಪರ್‌ ಹಿಟ್‌ ಹಮ್ ದಿಲ್ ದೇ ಚುಕೇ ಸನಮ್ ನಂತರವೂ ಅಜಯ್-ಐಶ್ವರ್ಯಾ ರೈ 1-2 ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಚಿತ್ರಗಳಲ್ಲಿ 2004 ರಲ್ಲಿ ತೆರೆಗೆ ಬಂದ ರೈನ್ ಕೋಟ್ ಕೂಡ ಒಂದು. ಆದಾಗ್ಯೂ, ಈ ಮಹಾನ್ ದುರಂತ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಗಳಿಸಿದ್ದು ಕೇವಲ 2.54 ಕೋಟಿ ರೂ. 

910

2005ರಲ್ಲಿ ಬ್ಲಾಕ್ ಮೇಲ್ ಹೆಸರಿನ ಸಿನಿಮಾದಲ್ಲಿ ಅಜಯ್ ದೇವಗನ್ ಕೂಡ ನಟಿಸಿದ್ದರು. ಈ ಚಿತ್ರದಲ್ಲಿ ಸುನೀಲ್ ಶೆಟ್ಟಿ ಮತ್ತು ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ದುರಂತವಾಯಿತು ಮತ್ತು 4.14 ಕೋಟಿ ಗಳಿಸಿತು.


 

1010

2010 ರಲ್ಲಿ, ತೂನ್‌ಪುರ್ ಕಾ ಸೂಪರ್‌ಹೀರೋ ಚಲನಚಿತ್ರವನ್ನು ಮಾಡಲು ಅಜಯ್ ದೇವಗನ್ ಅನಿಮೇಷನ್ ಪಾತ್ರದ ಜೊತೆ ಸೇರಿಕೊಂಡರು, ಆದರೆ ಅವರ ಪ್ರಯೋಗವು ದುರಂತ ಎಂದು ಸಾಬೀತಾಯಿತು. ಕಾಜೋಲ್ ಅವರೊಂದಿಗಿನ ಅವರ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕೇವಲ 3.55 ಕೋಟಿ ಗಳಿಸಿತು.
 

Read more Photos on
click me!

Recommended Stories