ELLE ಬ್ಯೂಟಿ ಅವಾರ್ಡ್ಸ್ 2022ನಲ್ಲಿ ಮಿಂಚಿದ ದೀಪಿಕಾ, ಜಾನ್ವಿ ಪೋಟೋ ವೈರಲ್‌

Published : Nov 17, 2022, 03:42 PM IST

ಮೂರು ವರ್ಷಗಳು ಕಾದ ನಂತರ ಮನೋರಂಜನಾ ಉದ್ಯಮದ ಸೆಲೆಬ್ರೆಟಿಗಳು  ELLE ಬ್ಯೂಟಿ ಅವಾರ್ಡ್ಸ್ 2022 ಗಾಗಿ (ELLE Beauty Awards 2022) ಒಂದಾಗಿದ್ದರು. ಬಾಲಿವುಡ್‌ನ ಪ್ರಮುಖ ಸೆಲೆಬ್ರಿಟಿಗಳು ಹೆಜ್ಜೆ ಹಾಕಿದ್ದರು. 2022ರ ಎಲ್ಲೆ ಬ್ಯೂಟಿ ಅವಾರ್ಡ್ಸ್‌ನಲ್ಲಿ ಅನೇಕ ಪ್ರಸಿದ್ಧ ವ್ಯಕ್ತಿಗಳು ರೆಡ್ ಕಾರ್ಪೆಟ್ ಅನ್ನು ಅಲಂಕರಿಸಿದ  ಸಂದರ್ಭದಲ್ಲಿ ಫೋಟೋಗಳು ಸಖತ್‌ ವೈರಲ್‌ ಆಗಿವೆ. ಬಾಲಿವುಡ್‌ನ ದಿವಾಸ್‌ ದೀಪಿಕಾ ಪಡುಕೋಣೆ (Deepika Padukone),ಜಾನ್ವಿ ಕಪೂರ್ (Janhvi Kapoor)‌, ಕೃತಿ ಸನೋನ್‌ (Kriti Sanon) ಮುಂತಾದವರು ಈ ಆವಾರ್ಡ್‌ ಸಂಜೆಯ ಮೆರಗು ಹೆಚ್ಚಿಸಿದ್ದರು.  

PREV
113
ELLE ಬ್ಯೂಟಿ ಅವಾರ್ಡ್ಸ್ 2022ನಲ್ಲಿ ಮಿಂಚಿದ ದೀಪಿಕಾ,  ಜಾನ್ವಿ  ಪೋಟೋ ವೈರಲ್‌

ಅದೊಂದು ಅತ್ಯಂತ ಸುಂದರವಾದ ಸಂಜೆಯಾಗಿತ್ತು. 2022ರ ಎಲ್ಲೆ ಬ್ಯೂಟಿ ಅವಾರ್ಡ್ಸ್‌ನಲ್ಲಿ ಅನೇಕ ಪ್ರಸಿದ್ಧ ವ್ಯಕ್ತಿಗಳು ರೆಡ್ ಕಾರ್ಪೆಟ್ ಅನ್ನು ಅಲಂಕರಿಸಿದ್ದಾರೆ. ಈ ಸಂದರ್ಭದಲ್ಲಿ ಬಾಲಿವುಡ್ ಮತ್ತು ದೂರದರ್ಶನ ಉದ್ಯಮದ ಗಣ್ಯರು ಇದ್ದರು.
 

213

ELLE ಬ್ಯೂಟಿ ಅವಾರ್ಡ್ಸ್ 2022 ಗಾಗಿ, ಬಾಲಿವುಡ್‌ನ ಪ್ರಮುಖ ಸೆಲೆಬ್ರಿಟಿಗಳು ಕಪ್ಪು ಕಾರ್ಪೆಟ್ ಮೇಲೆ ಆಗಮಿಸಿದರು. ಮೂರು ವರ್ಷಗಳ ನಂತರ ಎಂಟರ್‌ಟೈನ್ಮೆಂಟ್‌ ಇಂಡಸ್ಟ್ರಿಯ ಜನರು ಅವಾರ್ಡ್ಸ್‌ ಮೆರಗು ಹೆಚ್ಚಿಸಿದರು.

313

ಬಿಳಿ ಟುಟು ಸ್ಕರ್ಟ್‌ನಲ್ಲಿ ಬಾಲಿವುಡ್‌ ದಿವಾ ದೀಪಿಕಾ ಪಡುಕೋಣೆ ಗೊಂಬೆಯಂತೆ ಕಂಗೊಳಿಸುತ್ತಿದ್ದರು. ಅವರು ತನ್ನ ಬಿಳಿ ಬಣ್ಣದ ನೆಟ್ ಸ್ಕರ್ಟ್ ಅನ್ನು ಬಿಳಿ ಶರ್ಟ್‌ನೊಂದಿಗೆ ಪೇರ್‌ ಮಾಡಿಕೊಂಡಿದ್ದರು ಮತ್ತು ಕಪ್ಪು ಬೆಲ್ಟ್ ಅನ್ನು ಧರಿಸಿದ್ದರು. ದೀಪಿಕಾ ಯಾವುದೇ ಮೇಕ್ಅಪ್ ಧರಿಸಿರಲಿಲ್ಲ.

413

ಬಾಲಿವುಡ್‌ನ ಯಂಗ್‌ ದಿವಾ ಜಾನ್ವಿ ಕಪೂರ್. ಶೈನಿಂಗ್‌ ಮತ್ತು ಪ್ಲಂಗಿಗ್‌ ನೆಕ್‌ ಲೈನ್‌ನೀಲಿ ಉಡುಗೆಯಲ್ಲಿ ಎಲ್ಲರ ಗಮನ ಸೆಳೆದರು. ಡ್ರೆಸ್‌ಗೆ ಮ್ಯಾಚ್‌ ಆಗುವ ಗ್ಲೌಸ್‌ ಧರಿಸಿರುವ ಮೂಲಕ ತಮ್ಮ ಲುಕ್‌  ಪೂರ್ಣಗೊಳಿಸಿದರು. ನಟಿಯ ಐಸ್ ಬ್ಲೂ ಗೌನ್ ಮತ್ತು ಅದಕ್ಕೆ ಹೊಂದಿಕೆಯಾಗುವ ಅಲಂಕೃತ ಕೈಗವಸುಗಳನ್ನು ಫಲ್ಗುಣಿ ಶೇನ್ ಪೀಕಾಕ್ ವಿನ್ಯಾಸಗೊಳಿಸಿದ್ದಾರೆ.


 

513

ELLE ಬ್ಯೂಟಿ ಅವಾರ್ಡ್ಸ್ ಕಾರ್ಯಕ್ರಮಕ್ಕೆ, ನಟಿ ಹಿನಾ ಖಾನ್ ಫ್ಲೋಯಿಂಗ್‌ ಡ್ರೆಸ್‌ ಆರಿಸಿಕೊಂಡರು. ಯಾವಾಗಲೂ ತಮ್ಮ ಬೆಸ್ಟ್‌ ಡ್ರೆಸ್ಸಿಂಗ್‌ ಸೆನ್ಸ್‌ಗೆ ಫೇಮಸ್‌ ಆಗಿರುವ ಹೀನಾ ಖಾನ್‌ ಅವರ ಈ ಬಾರಿ ಇನ್ನೂ ಉತ್ತಮ ಆಯ್ಕೆಯನ್ನು ಮಾಡಬಹುದಿತ್ತು.

613

ಗೋಟಾ ಮತ್ತು ಮುಂಭಾಗದಲ್ಲಿ ಮಿರರ್‌ವರ್ಕ್ ಇರುವ ಕಸ್ಟಮ್-ಮೇಡ್‌ ಹಾಟ್ ಪಿಂಕ್ ಸಬ್ಯಸಾಚಿ ವೆಲ್ವೆಟ್ ಗೌನ್ ಧರಿಸಿ ಶೆಫಾಲಿ ಶಾ ಅವರು ಈ ಲುಕ್‌ನಲ್ಲಿ ಕಾಣಿಸಿಕೊಂಡರು.

713

ನಟಿ ಮತ್ತು ಫ್ಯಾಶನ್ ಡಿಸೈನರ್ (Fashion Designer) ಮತ್ತು ಸೌಂದರ್ಯವರ್ಧಕ ಉದ್ಯಮದಲ್ಲಿ ಕೆಲಸ ಮಾಡಿದ ಬಹುಮುಖ ಪ್ರತಿಭೆಯ ಮಸಾಬಾ ಗುಪ್ತಾ  ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡರು.

813

ಎಲ್ಲೆ ಬ್ಯೂಟಿ ಅವಾರ್ಡ್ಸ್‌ನಲ್ಲಿ, ಬಿಗ್ ಬಾಸ್ 15 ರ ವಿಜೇತೆ ತೇಜಸ್ವಿ ಪ್ರಕಾಶ್ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡರು. ಅವರು ಸಿಲ್ವರ್‌ ಹೀಲ್ಸ್‌, ವೇಸ್ಟ್ ಕೋಟ್ ಮತ್ತು ಪ್ಯಾಂಟ್‌ಗಳೊಂದಿಗೆ ಮಿಂಚಿದರು.

913

ಬಾಲಿವುಡ್‌ನ ಯಂಗ್‌ ನಟ ಕಾರ್ತಿಕ್‌ ಆರ್ಯನ್‌  ಕಪ್ಪು ಪೊಲೊ-ನೆಕ್ ಟಿ-ಶರ್ಟ್‌ನೊಂದಿಗೆ ಹೊಳೆಯುವ ಹಸಿರು ಸೂಟ್‌ನಲ್ಲಿ  ಸಖತ್‌  ಹ್ಯಾಂಡ್‌ಸಮ್‌ ಆಗಿ ಕಾಣಿಸಿಕೊಂಡರು.

1013

Elli AvrRam ಈ ಇವೆಂಟ್‌ನಲ್ಲಿ ಅತ್ಯಂತ ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. ಈ ಸಮಯದ ಇವರ ಲುಕ್‌ ಸಖತ್‌ ವೈರಲ್‌ ಆಗಿದೆ. ಅವರು  ಬಿಳಿ ಟ್ಯೂಬ್ ಡ್ರೆಸ್ ಅನ್ನು ಆರಿಸಿಕೊಂಡು ಎಲ್ಲರಿಗೂ ಸರ್‌ಫ್ರೈಸ್‌ ನೀಡಿದ್ದು, ತಮ್ಮ ಕೂದಲನ್ನು ಹೈ ಬನ್ ಸ್ಟೈಲ್‌ನಲ್ಲಿ ಕಟ್ಟಿದ್ದರು.

1113

ರಾಜ್‌ಕುಮಾರ್ ರಾವ್ ಅವರು ಸಾಂಪ್ರದಾಯಿಕವಾದ ರೆಡ್ ಕಾರ್ಪೆಟ್ ಸೂಟ್ ಅನ್ನು ಬಿಟ್ಟು,  ರೈಡ್‌ ಸೈಡ್‌ ಸ್ಟೈಲ್‌ನಿಂದ ಪ್ರೇರಿತವಾದ ಸಂಪೂರ್ಣ ಬಿಳಿ ಡ್ರೆಸ್‌ನಲ್ಲಿ ಕೂಲ್‌ ಆಗಿ ಕಾಣುತ್ತಿದ್ದರು.

 

1213

ಕೃತಿ ಸನೋನ್ ಲೋ ನೆಕ್‌ಲೈನ್‌ ಹೊಂದಿದ ನೀಲಿ ಕಟೌಟ್ ಡ್ರೆಸ್‌ನಲ್ಲಿ ಸಖತ್‌ ಸ್ಟನ್ನಿಂಗ್‌  ಕಾಣುತ್ತಿದ್ದರು. ಗೇವಿನ್ ಮಿಗುಯೆಲ್ ಗೌನ್‌ನೊಂದಿಗೆ ನಟಿ ಯಾವುದೇ ನೆಕ್‌ಪೀಸ್ ಧರಿಸಿರಲಿಲ್ಲ.

1313

ದಿಲ್ ಬೇಚಾರದಲ್ಲಿ ನಟಿಸಿದ್ದ ಸಂಜನಾ ಸಂಘಿ ಕೂಡ ಅಲ್ಲಿ ಈ ಆವಾರ್ಡ್‌ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಅವರು ಬೋ ಸ್ಲೀವ್ಸ್ ಮತ್ತು ಕಪ್ಪು ಸ್ಕರ್ಟ್‌ನೊಂದಿಗೆ ಬ್ರಾಲೆಟ್ ಟಾಪ್ ಅನ್ನು ಧರಿಸಿದ್ದರು.

Read more Photos on
click me!

Recommended Stories