665 ಕಿ.ಮಿ ಮೈಲೇಜ್, 15 ನಿಮಿಷದಲ್ಲೇ ಚಾರ್ಜ್, ಅದ್ಭುತಗಳ ಟಾಟಾ ಸಿಯೆರಾ ಇವಿ ಕಾರು ಬಿಡುಗಡೆ

Published : Jun 30, 2026, 07:17 PM IST

ಬಹುನಿರೀಕ್ಷಿತ ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದೆ. ಅಸಾಧ್ಯ ಪರ್ಫಾಮೆನ್ಸ್, 665 ಕಿಲೋಮೀಟರ್ ಮೈಲೇಜ್, ವಿಶೇಷ ಅಂದರೆ 15 ನಿಮಿಷದಲ್ಲೇ ಚಾರ್ಜಿಂಗ್, ಜೊತೆಗೆ ಕೈಗೆಟುಕುವ ದರದಲ್ಲಿ ಸಿಯೆರಾ ಇವಿ ಬಿಡುಗಡೆಯಾಗಿದೆ. 

PREV
16
ಟಾಟಾ ಸಿಯೆರಾ ಇವಿ ಊಹೆಗೂ ನಿಲುಕದ ಕಾರು ಲಾಂಚ್

ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳ ಪೈಕಿ ಅತ್ಯಂತ ಬಹುನಿರೀಕ್ಷಿತ ಸಿಯೆರಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದೆ. ಮೈಲೇಜ್, ಪರ್ಫಾಮೆನ್ಸ್, ಪವರ್, ಸ್ಟೈಲಿಶ್ ಡಿಸೈನ್ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಟಾಟಾ ಸಿಯೆರಾ ಐಷಾರಾಮಿ ಕಾರುಗಳನ್ನೇ ಮೀರಿಸಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು 665 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ.

26
ಟಾಟಾ ಸಿಯೆರಾ ಇವಿ ಬೆಲೆ

ಈ ಸೆಗ್ಮೆಂಟ್ ಇವಿ ಕಾರುಗಳ ಪೈಕಿ ಟಾಟಾ ಸಿಯೆರಾ ಕೈಗೆಟುಕುವ ದರದ ಅತ್ಯುತ್ತಮ ಕಾರಾಗಿ ಗುರುತಿಸಿಕೊಂಡಿದೆ. ಕಾರಣ ಹೊಸ ಟಾಟಾ ಸಿಯೆರಾ ಇವಿ ಕಾರು ಆರಂಭಿಕ ಬೆಲೆ 18.79 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಐದು ವೇರಿಯೆಂಟ್‌ಗಳಲ್ಲಿ ಕಾರು ಲಭ್ಯವಿದೆ.

  • ಪ್ಯೂರ್: 18.79 ಲಕ್ಷ ರೂ (63kWh RWD)
  • ಪ್ಯೂರ್ ಎಸ್:19.99ಲಕ್ಷ ರೂ(63kWh RWD)
  • ಅಡ್ವೆಂಚರ್:20.99ಲಕ್ಷ ರೂ(63kWh RWD), 22.19 ಲಕ್ಷ ರೂಪಾಯಿ (75kWh RWD)
  • ಎಂಪವರ್ಡ್:22.79ಲಕ್ಷ ರೂ(63kWh RWD), 23.79 ಲಕ್ಷ ರೂಪಾಯಿ (75kWh RWD)
  • ಎಂಪವರ್ಡ್ ಎ:24.79 ಲಕ್ಷ ರೂ (75kWh RWD), 25.99 ಲಕ್ಷ ರೂಪಾಯಿ (75kWh AWD)
36
ಟಾಟಾ ಸಿಯೆರಾ ಬ್ಯಾಟರಿ ಹಾಗೂ ಮೈಲೇಜ್

ಟಾಟಾ ಸಿರೆಯಾ ಇವಿ ಕಾರು ಎರಡು ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದೆ. 63kWh ಹಾಗೂ 75kWh ಬ್ಯಾಟರಿ ಆಯ್ಕೆ ಹೊಂದಿದೆ. 75kWh ಬ್ಯಾಟರಿ ಪ್ಯಾಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 665 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು 63kWh ಬ್ಯಾಟರಿ ಪ್ಯಾಕ್ ಕಾರಿನ ಮೈಲೇಜ್ 565 ಕಿಲೋಮೀಟರ್.

46
15 ನಿಮಿಷದಲ್ಲಿ ಚಾರ್ಜಿಂಗ್ ಹಾಗೂ ಪ್ರಯಾಣ

ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಇದೀಗ ಟಾಟಾ ಇದಕ್ಕೆ ಉತ್ತರ ನೀಡಿದೆ. ಕೇವಲ 15 ನಿಮಿಷ ಚಾರ್ಜ್ ಮಾಡಿದರೆ ಸಾಕು ಬರೋಬ್ಬರಿ 263 ಕಿಲೋಮೀಟರ್ ಮೈಲೇಜ್ ನೀಡಲಿದೆ. 26 ನಿಮಷದಲ್ಲಿ ಶೇಕಡಾ 20 ರಿಂದ 80 ರಷ್ಟು ಚಾರ್ಜ್ ಆಗಲಿದೆ. ಲೈಫ್ ಟೈಮ್ ವಾರೆಂಟಿ (15 ವರ್ಷ ಅವಧಿ) ನೀಡಲಾಗುತ್ತದೆ.

56
ಅತ್ಯಾಧುನಿಕ ತಂತ್ರಜ್ಞಾನ

ಟಾಟಾ ಸಿಯೆರಾ ಕಾರು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. L2+ ADAS ತಂತ್ರಜ್ಞಾನ ಹೊಂದಿದೆ. 540 ಡಿಗ್ರಿ ಕ್ಯಾಮೆರಾ, ಆಟೋ ಪಾರ್ಕ್ ಅಸಿಸ್ಟ್, ರಿಮೂಟ್ ಪಾರ್ಕ್, ರಿವರ್ಸ್ ಅಸಿಸ್ಟ್ ಸೇರಿದಂತೆ ಹಲವು ವಿಶೇಷತೆಗಳು ಇದರಲ್ಲಿದೆ. iRA. ev ಕನೆಕ್ಟೆಡ್ ಫೀಚರ್ಸ್ ನೀಡಲಾಗಿದ್ದು, ಬರೋಬ್ಬರಿ 70 ಫೀಚರ್ಸ್ ಇದರಲ್ಲಿದೆ.

66
ಯಾವಾ ಕಾರಿಗೆ ಪ್ರತಿಸ್ಪರ್ಧಿ

ಟಾಟಾ ಸಿಯೆರಾ ಇವಿ ಕಾರು ಸದ್ಯ ಮಾರುಕಟ್ಟೆಯನ್ನು ಆಳುವ ಸೂಚನೆ ನೀಡಿದೆ. ಪವರ್ ಹಾಗೂ ಪರ್ಫಾಮೆನ್ಸ್, ಟೆಕ್, ಸುರಕ್ಷತೆ ಎಲ್ಲವೂ ಇದರಲ್ಲಿದೆ. ಈ ಕಾರು ಎಂಜಿ ZS EV, ಬಿವೈಡಿ ಆಟೋ 2, ಬಿವೈಡಿ ಸೀಲ್, ಕಿಯಾ ಇವಿ6, ವೋಲ್ವೋ EX30, ಹ್ಯುಂಡೈ ಐಕಾನಿಕ್5 ಸೇರಿದಂತೆ ಹಲವು ಇವಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.

Read more Photos on
click me!

Recommended Stories