ಕೈಗೆಟುಕುವ ರೆನಾಲ್ಟ್ ಕೈಗರ್ ಕಾರಿನ ಬೆಲೆ 1.46 ಲಕ್ಷ ರೂ ಇಳಿಕೆ, 2026ರ ಹೊಸ ಮಾಡೆಲ್ ಖರೀದಿ ಸುಲಭ

Published : Jun 26, 2026, 01:31 PM IST

ರೆನಾಲ್ಟ್ ಕೈಗರ್ ಹೊಸ ರೂಪದಲ್ಲಿ ಬಿಡುಗಡೆಯಾಗಿದೆ. ಟರ್ಬೋ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಯಾಗಿರುವ 2026ರ ಕಿಗರ್ ಕಾರಿನ ಬೆಲೆಯಲ್ಲಿ ಬರೋಬ್ಬರಿ 1.46 ಲಕ್ಷ ರೂಪಾಯಿ ಇಳಿಕೆಯಾಗಿದೆ. ಪರಿಣಾಮ ಜನ ಖರೀದಿಗೆ ಮುಗಿಬಿದ್ದಿದ್ದಾರೆ.

PREV
16
ಕೈಗರ್ ಹೊಸ ಅಪ್‌ಡೇಟೆಡ್ ಕಾರು

ಫ್ರಾನ್ಸ್‌ನ ಪ್ರಮುಖ ಕಾರ್ ತಯಾರಕ ಕಂಪನಿ ರೆನಾಲ್ಟ್, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ತನ್ನ ಜನಪ್ರಿಯ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಮಾಡೆಲ್ ರೆನಾಲ್ಟ್ ಕೈಗರ್‌ನ ಟರ್ಬೊ ಪೆಟ್ರೋಲ್ ವೇರಿಯೆಂಟ್‌ಗಳನ್ನು ಗ್ರಾಹಕರು ಕಡಿಮೆ ಬೆಲೆಗೆ ಖರೀದಿಸಲು ಅನುಕೂಲವಾಗುವಂತೆ ಹೊಸ 'ಎವಲ್ಯೂಷನ್ ಟರ್ಬೊ' ವೇರಿಯೆಂಟ್ ಪರಿಚಯಿಸಿದೆ. ಈ ಹೊಸ 2026 ಸೀರೀಸ್‌ನ ಫೀಚರ್‌ಗಳು ಮತ್ತು ಬೆಲೆಯ ಸಂಪೂರ್ಣ ವಿವರ ಇಲ್ಲಿದೆ.

26
1.46 ಲಕ್ಷ ರೂಪಾಯಿ ಇಳಿಕೆ

ರೆನಾಲ್ಟ್ ಕೈಗರ್‌ನ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ವೇರಿಯೆಂಟ್ ಖರೀದಿಸಬೇಕಿದ್ದರೆ, ಅದರ ಆರಂಭಿಕ ಬೆಲೆ ₹9.33 ಲಕ್ಷ ಇತ್ತು. ಆದರೆ, ಈಗ ಪರಿಚಯಿಸಲಾದ ಹೊಸ ಎವಲ್ಯೂಷನ್ ಟರ್ಬೊ ವೇರಿಯೆಂಟ್‌ನ ಆರಂಭಿಕ ಬೆಲೆ ಕೇವಲ ₹7.89 ಲಕ್ಷ (ಎಕ್ಸ್ ಶೋರೂಂ). ಇದರಿಂದಾಗಿ ಟರ್ಬೊ ಎಂಜಿನ್ ಕಾರಿನ ಬೆಲೆ ಬರೋಬ್ಬರಿ ₹1.46 ಲಕ್ಷದಷ್ಟು ಕಡಿಮೆಯಾಗಿದೆ.

36
1.0 ಲೀಟರ್ ಪೆಟ್ರೋಲ್ ಎಂಜಿನ್

ಟರ್ಬೊ ಎಂಜಿನ್ ಬೇಡ ಎನ್ನುವವರಿಗಾಗಿ, 1.0-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ 'ಎವಲ್ಯೂಷನ್ ಪ್ಲಸ್' ಟ್ರಿಮ್ ಅನ್ನು ಪರಿಚಯಿಸಲಾಗಿದೆ. ಇದರ ಆರಂಭಿಕ ಬೆಲೆ ₹6.99 ಲಕ್ಷ. ಟೆಕ್ನೋ ಟರ್ಬೊ ಮ್ಯಾನುವಲ್ ಈ ಹೊಸ 2026 ಸೀರೀಸ್‌ನಲ್ಲಿ, ಟೆಕ್ನೋ ಟರ್ಬೊ ವೇರಿಯೆಂಟ್‌ಗೆ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಸೇರಿಸಲಾಗಿದೆ. ಇದರ ಬೆಲೆ ₹8.45 ಲಕ್ಷ. ಇದು ಸಿವಿಟಿ (CVT) ಆಟೋಮ್ಯಾಟಿಕ್ ವೇರಿಯೆಂಟ್‌ಗಿಂತ ಸುಮಾರು ₹90,000 ಅಗ್ಗವಾಗಿದೆ.

46
ಆಕರ್ಷಕ ಫೀಚರ್ ನೀಡಿದ ಕೈಗರ್

ಹೊಸ ಎವಲ್ಯೂಷನ್ ಪ್ಲಸ್ ಮತ್ತು ಟರ್ಬೊ ವೇರಿಯೆಂಟ್‌ಗಳಲ್ಲಿ ಗ್ರಾಹಕರನ್ನು ಸೆಳೆಯಲು ಹಲವು ಪ್ರೀಮಿಯಂ ಫೀಚರ್‌ಗಳನ್ನು ನೀಡಲಾಗಿದೆ. ಎಲ್‌ಇಡಿ ಡಿಆರ್‌ಎಲ್, ಎಲ್‌ಇಡಿ ಟೈಲ್‌ಲ್ಯಾಂಪ್, ಎಲ್‌ಇಡಿ ಹೆಡ್‌ಲ್ಯಾಂಪ್, 16-ಇಂಚಿನ ಫ್ಲೆಕ್ಸ್ ವೀಲ್ಸ್ ಮತ್ತು ಅಡ್ಜಸ್ಟಬಲ್ ORVM ಗಳಿವೆ. ಜೊತೆಗೆ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಪೋರ್ಟ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಕೀಲೆಸ್ ಎಂಟ್ರಿ, ಆಟೋಮ್ಯಾಟಿಕ್ ಎಸಿ ಮತ್ತು ಎತ್ತರ ಹೊಂದಿಸಬಹುದಾದ ಡ್ರೈವರ್ ಸೀಟ್‌ನಂತಹ ಸೌಲಭ್ಯಗಳಿವೆ.

56
ಎಂಜಿನ್ ಪರ್ಫಾಮೆನ್ಸ್

ರೆನಾಲ್ಟ್ ಕೈಗರ್ ತನ್ನ ಸೆಗ್ಮೆಂಟ್‌ನಲ್ಲೇ ಅತ್ಯುತ್ತಮ ಪರ್ಫಾರ್ಮೆನ್ಸ್ ಮತ್ತು ಸ್ಥಳಾವಕಾಶವನ್ನು ಹೊಂದಿದೆ. ಟರ್ಬೊ ವೇರಿಯೆಂಟ್‌ಗಳು ಅತ್ಯುತ್ತಮ 'ಟಾರ್ಕ್-ಟು-ವೇಟ್' ಅನುಪಾತವನ್ನು ಹೊಂದಿರುವುದರಿಂದ, ಕೆಲವೇ ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ತಲುಪುತ್ತದೆ. ಭಾರತದ ರಸ್ತೆಗಳಿಗೆ ಸೂಕ್ತವಾದ 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್, 405 ಲೀಟರ್ ಬೂಟ್ ಸ್ಪೇಸ್ ಮತ್ತು ಕ್ಯಾಬಿನ್ ಒಳಗೆ 29 ಲೀಟರ್ ಸ್ಟೋರೇಜ್ ಸ್ಥಳವಿದೆ. ಹಿಂಬದಿ ಪ್ರಯಾಣಿಕರಿಗೆ 222 ಎಂಎಂ ಲೆಗ್‌ರೂಮ್ (ಮಂಡಿ ಜಾಗ) ಮತ್ತು ಮುಂಬದಿ ಪ್ರಯಾಣಿಕರಿಗೆ 710 ಎಂಎಂ ಸ್ಥಳಾವಕಾಶ ನೀಡಲಾಗಿದೆ, ಇದು ಈ ಸೆಗ್ಮೆಂಟ್‌ನಲ್ಲೇ ಅತಿ ಹೆಚ್ಚು.

66
ಹೊಸ ಅಲೆ ಸೃಷ್ಟಿಸಿದ ಕೈಗರ್

ರೆನಾಲ್ಟ್ ಭಾರತದಲ್ಲಿ ಹೊಸ ಅಲೆ ಸೃಷ್ಟಿಸಲು ಶುರುಮಾಡಿದೆ. ಸಣ್ಣ ಎಸ್‌ಯುವಿ ಕಾರುಗಳ ಮಾರುಕಟ್ಟೆ, ಬೇಡಿಕೆ ಹೆಚ್ಚಾಗುತ್ತಿದ್ದಂತೆ ಕೈಗರ್ ಮಾಡೆಲ್ ಅಪ್‌ಡೇಟ್ ಮಾಡಿದೆ. ಇದರ ಜೊತೆಗೆ ಬೆಲೆ ಕಡಿಮೆ ಮಾಡಿ ಬಿಡುಗಡೆ ಮಾಡಿದೆ. ಇದರಿಂದ ಜನರು ಕೈಗರ್ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ ಎಂದು ಕಂಪನಿ ಹೇಳಿದೆ.

Read more Photos on
click me!

Recommended Stories