ಜನಸಾಮಾನ್ಯರ ಕಾರು ಎಂದೇ ಗುರುತಿಸಿಕೊಂಡಿರುವ ರೆನಾಲ್ಟ್ ಕ್ವಿಡ್ ಇದೀಗ ಫೇಸ್‌ಲಿಫ್ಟ್ ವರ್ಶನ್ ಬಿಡುಗಡೆ ಮಾಡುತ್ತಿದೆ. ಹೊಸ ಕ್ವಿಡ್ ಕಾರಿನಲ್ಲಿ 5 ಅಪ್‌ಡೇಟ್‌ಗಳಿವೆ. ಜೊತೆಗೆ ಬೆಲೆಯೂ ಇತರ ಸಣ್ಣ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಪ್ರತಿಸ್ಪರ್ಧೆ ನೀಡುವಂತಿದೆ.
ರೆನಾಲ್ಟ್ ಇತ್ತೀಚೆಗೆ ಡಸ್ಟರ್ ಕಾರು ರೀಲಾಂಚ್ ಮಾಡಿ ಭಾರಿ ಸದ್ದು ಮಾಡಿದೆ. ಇದೀಗ ಜನಸಾಮಾನ್ಯರ ಕಾರಾಗಿ ಗುರುತಿಸಿಕೊಂಡಿರುವ ಕ್ವಿಡ್ ಕಾರನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡುತ್ತಿದೆ. ಸಣ್ಣ ಕಾರುಗಳಲ್ಲಿ ಮಾರುತಿ ಸುಜುಕಿ ಪ್ರಾಬಲ್ಯಕ್ಕೆ ಶಾಕ್ ಕೊಟ್ಟ ಕಾರು ರೆನಾಲ್ಟ್ ಕ್ವಿಡ್. ಇದೀಗ ಹಲವು ಹೊಸತನಗಳೊಂದಿಗೆ, ಅತೀ ಕಡಿಮೆ ಬೆಲೆಯಲ್ಲಿ ಕ್ವಿಡ್ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗುತ್ತಿದೆ.
26
ಜುಲೈ 3ಕ್ಕೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಲಾಂಚ್
ಜುಲೈ 3ರಂದು ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗುತಿದೆ.ಪ್ರಮುಖವಾಗಿ ಕ್ಲೂಸ್ಡ್ ಆಫ್ ಗ್ರಿಲ್ ಡಿಸೈನ್, ವೈ ಶೇಪ್ ಡಿಆರ್‌ಎಲ್, ವೈ ಶೇಪ್ ಟೈಲ್‌ಲ್ಯಾಂಪ್, ಫ್ರಂಟ್ ಹಾಗೂ ರೇರ್ ಬಂಪರ್‌ಗೆ ಹೊಸ ವಿನ್ಯಾಸ, ಹೊಸ ಶೈಲಿಯ ಅಲಾಯ್ ವ್ಹೀಲ್ಸ್, ಎಲ್‌ಇಡಿ ಹೆಡ್‌ಲ್ಯಾಂಪ್ಸ್ ಸೇರಿದಂತೆ ಹಲವು ಮಹತ್ವದ ಬದಲಾವಣೆ ಈ ಕಾರಿನಲ್ಲಿದೆ.
36
ಕಾರಿನ ಕ್ಯಾಬಿನ್ ಸೇರಿದಂತೆ ಇತರ ಫೀಚರ್ ಅಪ್‌ಡೇಟ್
ಕಾರಿನ ಡ್ಯಾಶ್‌ಬೋರ್ಡ್ ರಿಡಿಸೈನ್ ಮಾಡಲಾಗಿದೆ. 10 ಇಂಚಿನ ಇನ್ಫೊಟೈನ್ಮೆಂಟ್ ಸಿಸ್ಟಮ್, ಸಂಪೂರ್ಣ ಡಿಜಿಟಲ್ ಇನ್ಸ್‌ಸ್ಟ್ರುಮೆಂಟ್ ಕ್ಲಸ್ಟರ್, ನೂತನ ಸ್ಟೀರಿಂಗ್ ವ್ಹೀಲ್, ಆಕರ್ಷಕ ಸೀಟುಗಳು ಸೇರಿದಂತೆ ಹಲವು ಹೊಸತನಗಳು ಈ ಕಾರಿನಲ್ಲಿದೆ. ಇದೇ ಕಾರಣದಿಂದ ಇದೀಗ ಹೊಸ ಕ್ವಿಡ್‌ಗಾಗಿ ಹಲವು ಗ್ರಾಹಕರು ಕಾಯುತ್ತಿದ್ದಾರೆ.
ಹೊಸ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಕಾರಿನ ಬೆಲೆ 4.30 ಲಕ್ಷ - 5.88 ಲಕ್ಷ ರೂಪಾಯಿಂದ ಆರಂಭಗೊಳ್ಳುವ ಸಾಧ್ಯತೆ ಇದೆ. ಸದ್ಯಕ್ಕೆ ಬೆಲೆ ಹಾಗೂ ಫೀಚರ್ ಕುರಿತ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ ಕ್ವಿಡ್ ಕಾರಿಗೂ ಬಿಡುಗಡೆಯಾಗಲಿರುವ ಕ್ವಿಡ್ ಫೇಸ್‌ಲಿಫ್ಟ್ ಕಾರಿನ ಬೆಲೆಯಲ್ಲಿ ಕೆಲ ವ್ಯತ್ಯಾಸಗಳಾಗುವ ಸಾಧ್ಯತೆ ಇದೆ.
56
ಮಾರುತಿ ಕೆ10, ಸೆಲೆರಿಯೋ ಕಾರಿಗೆ ಪ್ರತಿಸ್ಪರ್ಧಿ
ರೆನಾಲ್ಡ್ ಕ್ವಿಡ್ ಫೇಸ್‌ಲಿಫ್ಟ್ ಕಾರು ಈಗಾಗಲೇ ಭಾರಿ ಕುತೂಹಲ ಮೂಡಿಸಿದೆ. ಮಾರುಕಟ್ಟೆಯಲ್ಲಿರುವ ಮಾರುತಿ ಕೆ10 ಹಾಗೂ ಮಾರುತಿ ಸೆಲೆರಿಯೋ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಕ್ವಿಡ್ ಹೊಸ ರೂಪದಲ್ಲಿ ಭಾರಿ ಬೇಡಿಕೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಇದರ ವಿನ್ಯಾಸ, ಕಾಂಪಾಕ್ಟ್ ಹ್ಯಾಚ್‌ಬ್ಯಾಕ್ ಶೈಲಿ ಸೇರಿದಂತೆ ಹಲವು ಕಾರಣಗಳಿಂದ ಕ್ವಿಡ್ ಫೇಸ್‌ಲಿಪ್ಟ್ ಜನಸಾಮಾನ್ಯರ ಮನ ಗೆಲ್ಲಲಿದೆ.
66
ಕ್ವಿಡ್ ಎಂಜಿನ್ ಹಾಗೂ ಪರ್ಫಾಮೆನ್ಸ್
ಕ್ವಿಡ್ ಫೇಸ್‌ಲಿಫ್ಟ್ ಕಾರಿನ ಎಂಜಿನ್‌ನಲ್ಲಿ ಹೆಚ್ಚಿನ ಬದಲಾವಣೆಯಾಗುವ ಸಾಧ್ಯತೆ ಇಲ್ಲ. ಸದ್ಯ ಕ್ವಿಡ್ ಕಾರಿನಲ್ಲಿರುವ 1.0 ಲಿಟರ್, 3 ಸಿಲಿಂಡರ್, ನ್ಯಾಚುರಲ್ ಆ್ಯಸ್ಪೈರ್ಡ್ ಪೆಟ್ರೋಲ್ ಎಂಜಿನ್ ಇರಲಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಹಾಗೂ 5 ಸ್ಪೀಡ್ ಎಎಂಟಿ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿರಲಿದೆ. 6 ಏರ್‌ಬ್ಯಾಗ್ ಸ್ಟಾಂಡರ್ಡ್ ಮಾಡುವ ಸಾಧ್ಯತೆ ಇದೆ.