ಸನ್ನಿ ಡಿಯೋಲ್ ಇದೀಗ ಗದರ್ 2 ಚಿತ್ರದ ಯಶಸ್ಸಿನಲ್ಲಿದ್ದಾರೆ. ಗದರ್ 2 ಚಿತ್ರ ಈಗಾಗಲೇ 300 ಕೋಟಿ ರೂಪಾಯಿ ಬಾಚಿಕೊಂಡು ಸಾಗುತ್ತಿದೆ. ಚಿತ್ರಕ್ಕೆ ಸಿಕ್ಕಿರುವ ರೆಸ್ಪಾನ್ಸ್‌ನಿಂದ ಸನ್ನಿ ಹಿರಿ ಹಿರಿ ಹಿಗ್ಗಿದ್ದಾರೆ.
ಗದರ್ 2 ಚಿತ್ರ ಯಶಸ್ಸಿನ ಅಲೆಯಲ್ಲಿರುವ ಸನ್ನಿ ಡಿಯೋಲ್ ಇತ್ತೀಚೆಗೆ ಯಾವುದೇ ಕಾರು ಖರೀದಿಸಿಲ್ಲ. ಆದರೆ ಸನ್ನಿ ಡಿಯೋಲ್ ಬಳಿಕ ಹಲವು ದುಬಾರಿ ಕಾರುಗಳಿವೆ.
ಸನ್ನಿ ಡಿಯೋಲ್ ಹೆಚ್ಚಾಗಿ ರೇಂಜ್ ರೋವರ್ ಆಟೋಬಯೋಗ್ರಫಿ ಕಾರು ಬಳಕೆ ಮಾಡುತ್ತಾರೆ. ವಿಮಾನ ನಿಲ್ದಾಣದ ಹೊರಭಾಗದಲ್ಲಿ ಬಹುತೇಕ ಬಾರಿ ಇದೇ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರಿನ ಆರಂಭಿಕ ಬೆಲೆ 3.16 ಕೋಟಿ ರೂಪಾಯಿ
ರೇಂಜ್ ರೋವರ್ ಕಾರನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದರೂ, ಸನ್ನಿ ಡಿಯೋಲ್ ಪೋರ್ಶ್ ಕಾರಿನ ಅಭಿಮಾನಿ. ಹೀಗಾಗಿ ಸನ್ನಿ ಡಿಯೋಲ್ ಬಳಿ ಎರಡೆರಡು ಪೋರ್ಶ್ ಕಾರುಗಳಿವೆ. ಸರಿಸುಮಾರು 3 ಕೋಟಿ ರೂಪಾಯಿ ಬೆಲೆ ಪೋರ್ಶೆ ಜಿಟಿ 911 ಕಾರು ಹೊಂದಿದ್ದಾರೆ.
ಪೊರ್ಶೆ ಕಾರುಗಳನ್ನು ಹೆಚ್ಚಾಗಿ ಇಷ್ಟಪಡುವ ಸನ್ನಿ ಡಿಯೋಲ್ 2.5 ಕೋಟಿ ರೂಪಾಯಿ ಬೆಲೆಯ ಪೊರ್ಶೆ ಕೈನ್ ಕಾರಿನ ಮಾಲೀಕರಾಗಿದ್ದಾರೆ. ಇದು ಎಸ್‌ಯುವಿ ಮಾದರಿ ಕಾರಾಗಿದೆ.
ಸನ್ನಿ ಡಿಯೋಲ್ ಕಾರು ಸಂಗ್ರಹದಲ್ಲಿ ಆಡಿ ಎ8 ಕೂಡ ಇದೆ. ಆಡಿ ಎ8 ಕಾರಿನ ಬೆಲೆ 1.6 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಇತ್ತೀಚಿನ ದಿನಗಳಲ್ಲಿ ಸನ್ನಿ ಆಡಿ ಎ8 ಕಾರಿನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ.
Porsche Car
ಈ ಕಾರುಗಳ ಜೊತೆಗೆ 2003ರಲ್ಲಿ ಸನ್ನಿ ಡಿಯೋಲ್ ಖರೀದಿಸಿದ ಮರ್ಸಿಡೀಸ್ ಬೆಂಜ್ ಎಸ್‌ಎಲ್ 500 ಕಾರು ಕೂಡ ಇದೆ. ಇದು ಕೂಪ್ ಮಾದರಿ ಕಾರಾಗಿದೆ. ಈ ಕಾರನ್ನು ಹೆಚ್ಚಾಗಿ ಬಳಸಿದ್ದರೂ ಅದೇ ಕಂಡೀಷನ್‌ನಲ್ಲಿ ಸನ್ನಿ ಡಿಯೋಲ್ ಕಾರು ಸಂಗ್ರಹಾಲಯದಲ್ಲಿದೆ.
ಗದರ್ 2 ಚಿತ್ರ ಬಿಡುಗಡೆಯಾಗಿ 8 ದಿನಗಳು ಉರುಳಿಸಿದೆ. ಇದೀಗ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇತ್ತ ಸನ್ನಿ ಡಿಯೋಲ್ ಜೊತೆ ಅಭಿಮಾನಿಗಳ ಸೆಲ್ಫಿ ಕ್ಲಿಕ್ಕಿಸುವಾಗ ಗರಂ ಆಗಿರುವ ವಿಡಿಯೋಗಳು ಭಾರಿ ಸಂಚಲನ ಸೃಷ್ಟಿಸಿದೆ.