ಬಾಲಿವುಡ್ ಸ್ಟಾರ್ ಸೈಫ್ ಆಲಿ ಖಾನ್‌ಗೆ ಕಾರು ಕ್ರೇಜ್ ತುಸು ಹೆಚ್ಚೇ ಇದೆ. ಅದರಲ್ಲೂ ಆಫ್ ರೋಡ್ ಡ್ರೈವ್ ಕೂಡ ಸೈಫ್ ಇಷ್ಟಪಡುತ್ತಾರೆ. ಆಫ್ ರೋಡ್ ಡ್ರೈವಿಂಗ್‌ಗಾಗಿ ಸೈಫ್ ಆಲಿ ಖಾನ್ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಬಳಕೆ ಮಾಡುತ್ತಾರೆ. ಇದರ ಜೊತೆ ಫೋರ್ಡ್ ಮಸ್ತಾಂಗ್, ಆಡಿ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.