ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಲ್ಲಿ ಹಲವು ಆಯ್ಕೆಗಳಿವೆ. ಟಾಟಾ ಮೋಟಾರ್ಸ್, ಎಂಜಿ ಮೋಟಾರ್ಸ್ ಸೇರಿದಂತೆ ಹಲವು ಐಷಾರಾಮಿ ಕಂಪನಿಗಳ ಎಲೆಕ್ಟ್ರಿಕ್ ಕಾರುಗಳು ಲಭ್ಯವಿದೆ. ಇದೀಗ ಆಡಿ ಕಂಪನಿ ಹೊಚ್ಚ ಹೊಸ ಆಡಿ ಕ್ಯೂ8 ಇ ಟ್ರಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ.
ಹೊಚ್ಚ ಹೊಸ ಆಡಿ ಕ್ಯೂ8 ಇ ಟ್ರಾನ್ ಎಲೆಕ್ಟ್ರಿಕ್ ಕಾರು ಹಲವು ವಿಶೇಷತೆಗಳು, ಅತ್ಯಾಧುನಿಕ ತಂತ್ರಜ್ಞಾನ, ಗರಿಷ್ಠ ಸುರಕ್ಷತೆ ಹೊಂದಿದೆ. ಪ್ರಮುಖವಾಗಿ ಇವಿ ವಾಹನಗಳಿಗೆ ಚಾರ್ಜಿಂಗ್ ಅತೀ ದೊಡ್ಡ ಸಮಸ್ಯೆ. ಶೇಕಡಾ 80 ರಷ್ಟು ಚಾರ್ಜ್ ಆಗಲು ಕನಿಷ್ಠ 1 ಗಂಟೆ ಬೇಕೆ ಬೇಕು. ಆದರೆ ಆಡಿ ಕ್ಯೂ8 ಇಟ್ರಾನ್ ಈ ಸಮಸ್ಯೆಗೆ ಪರಿಹಾರ ನೀಡಿದೆ.
ಆಡಿ ಕ್ಯೂ8 ಇ ಟ್ರಾನ್ ಕಾರು ಕೇವಲ 31 ನಿಮಿಷದಲ್ಲಿ ಶೇಕಡಾ 80 ರಷ್ಟು ಜಾರ್ಜ್ ಆಗಲಿದೆ. ಈ ಮೂಲಕ ಎಲೆಕ್ಟ್ರಿಕ್ ಕಾರು ಬಳಕೆ ಮಾಡುವ ಗ್ರಾಹಕರು ಸುದೀರ್ಘ ಸಮಯವನ್ನು ಚಾರ್ಜಿಂಗ್‌ಗಾಗಿ ಮೀಸಲಿಡಬೇಕಾದ ಅವಶ್ಯಕತೆ ಇಲ್ಲ
ಸಂಪೂರ್ಣ ಬ್ಯಾಟರಿ ಚಾರ್ಜ್ ಮಾಡಿದರೆ ಆಡಿ ಕ್ಯೂ8 ಇ ಟ್ರಾನ್ ಕಾರು ಬರೋಬ್ಬರಿ 600 ಕಿ.ಮೀ ಮೈಲೇಜ್ ನೀಡಲಿದೆ. ಸದ್ಯ ಭಾರತದಲ್ಲಿ ಲಭ್ಯವಿರುವ ಗರಿಷ್ಠ ಮೈಲೇಜ್ ನೀಡಬಲ್ಲ ಇವಿ ಪೈಕಿ ಆಡಿ ಕ್ಯೂ8 ಇ ಟ್ರಾನ್ ಮುಂಚೂಣಿಯಲ್ಲಿದೆ.
ನೂತನ ಕಾರಿನಲ್ಲಿ ಎರಡು ವೇರಿಯೆಂಟ್ ಲಭ್ಯವಿದೆ. ಆಡಿ ಕ್ಯೂ8 ಇ ಟ್ರಾನ್ ಹಾಗೂ ಆಡಿ ಕ್ಯೂ8 ಇ ಟ್ರಾನ್ ಸ್ಪೋರ್ಟ್ಸ್‌ಬ್ಯಾಕ್. 114kWh ಬ್ಯಾಟರಿ ಪ್ಯಾಕ್ ಹಾಗೂ 95kWh ಸಾಮರ್ಥ್ಯ ಹೊಂದಿದೆ.
ಎರಡು ಕಾರುಗಳ ಬ್ಯಾಟರಿ ಪ್ಯಾಕ್ ಭಿನ್ನವಾಗಿದೆ. ಹೀಗಾಗಿ ಎರಡೂ ಕಾರಿನ ಪರ್ಫಾಮೆನ್ಸ ಕೂಡ ಭಿನ್ನವಾಗಿದೆ. 340bhp ಪವರ್ ಹಾಗೂ 664Nm ಟಾರ್ಕ್ ಹಾಗೂ ಮತ್ತೊಂದು ವೇರಿಯೆಂಟ್ ಕಾರು 408bhp ಪವರ್ ಹಾಗೂ 664Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ.
0-100 ಕಿ.ಮೀ ವೇಗವನ್ನು ನೂತನ ಆಡಿ ಕ್ಯೂ8 ಇ ಟ್ರಾನ್ ಕಾರು ಕೇವಲ 5.5 ಸೆಕೆಂಡ್‌ಗಳಲ್ಲಿ ಪಡೆದುಕೊಳ್ಳಲಿದೆ. ಹೀಗಾಗಿ ಇಂಧನ ಕಾರುಗಳಂತೆ ವೇಗವಾಗಿ ಮುನ್ನುಗ್ಗುವ ಸಾಮರ್ಥ್ಯವನ್ನು ಈ ಕಾರು ಹೊಂದಿದೆ.
2022 Lexus NX 350h
ಹೊಚ್ಚ ಹೊಸ ಕಾರನ್ನು 5 ಲಕ್ಷ ರೂಪಾಯಿ ನೀಡಿ ಬುಕಿಂಗ್ ಮಾಡಿಕೊಳ್ಳಬಹುದು. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 1.14 ಕೋಟಿ ರೂಪಾಯಿ