ಕೇವಲ 5.78 ಲಕ್ಷ ರೂನಲ್ಲಿ ಲಭ್ಯವಾಗುತ್ತಿದ್ದ ಮಾರುತಿ ಸಿಫ್ಟ್ ಕಾರಿನ ಬೆಲೆಯಲ್ಲಿ ಮಹತ್ವದ ಬದಲಾವಣೆ

Published : Jun 23, 2026, 06:54 PM IST

ಭಾರತದಲ್ಲಿ ಅತೀ ಕಡಿಮೆ ಬೆಲೆಗೆ ಲಭ್ಯವಿರುವ ಮಾರುತಿ ಸುಜುಕಿ ಸಿಫ್ಟ್ ಕಾರಿನ ಬೆಲೆಯಲ್ಲಿ ಭಾರಿ ಬದಲಾವಣೆಯಾಗಿದೆ. 5.78 ಲಕ್ಷ ರೂ ಆರಂಭಿಕ ಬೆಲೆಯಲ್ಲಿ ಲಭ್ಯವಿರುವ ಸ್ವಿಫ್ಟ್ ಕಾರಿನ ಬೆಲೆಯಲ್ಲಿ ಆಗಿರುವ ವ್ಯತ್ಯಾಸವೇನು?

PREV
16
ಯುವಕರಿಂದ ಎಲ್ಲಾ ವರ್ಗದವರು ಇಷ್ಟಪಟ್ಟ ಕಾರಿನ ಬೆಲೆಯಲ್ಲಿ ಬದಲಾವಣೆ

ಮಾರುತಿ ಸುಜುಕಿ ಕಾರುಗಳು ಭಾರತದಲ್ಲಿ ಕಾರು ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಕಡಿಮೆ ಬೆಲೆ, ಕಡಿಮೆ ನಿರ್ವಹಣಾ ವೆಚ್ಚ, ಹೆಚ್ಚು ಮೈಲೇಜ್ ಸೇರಿದಂತೆ ಹಲವು ಪ್ರಯೋಜನಗಳು ಮಾರುತಿ ಸುಜುಕಿ ಕಾರಿನಲ್ಲಿದೆ. ಈ ಪೈಕಿ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಅತ್ಯಂತ ಜನಪ್ರಿಯವಾಗಿದೆ. ಕಾರಣ ಅತೀ ಕಡಿಮೆ ಬೆಲೆಗೆ ಅತ್ಯಂತ ಆಕರ್ಷಕ ಕಾರು ಇದಾಗಿದೆ. ಫ್ಯಾಮಿಲಿ, ಯುವ ಸಮೂಹ ಸೇರಿದಂತೆ ಎಲ್ಲರೂ ಇಷ್ಟಪಡುವ ಕಾರು ಇದಾಗಿದೆ. ಇದೀಗ ಸ್ವಿಫ್ಟ್ ಕಾರಿನ ಬೆಲೆಯಲ್ಲಿ ಬದಲಾವಣೆಯಾಗುತ್ತಿದೆ.

26
ಸಿಫ್ಟ್ ಕಾರಿನ ಬೆಲೆ ಏರಿಕೆ

ಮಾರುತಿ ಸುಜುಕಿ ಸ್ವಿಫ್ಟ್ ಪೆಟ್ರೋಲ್ ಹಾಗೂ ಸಿಎನ್‌ಜಿ ಕಾರುಗಳ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆ ಮ್ಯಾನ್ಯುಯೆಲ್ ಹಾಗೂ ಎಎಂಟಿ ವೇರಿಯೆಂಟ್ ಕಾರುಗಳಿಗೆ ಅನ್ವಯಿಸುತ್ತಿದೆ. ಆದರೆ ಬೇಸ್ ಮಾಡೆಲ್ ಕಾರಿನ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. 5.78 ಲಕ್ಷ ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಬೇಸ್ ಮಾಡೆಲ್ ಕಾರಿನ ಫೀಚರ್ಸ್‌ನಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ.

36
ಏಷ್ಟು ರೂಪಾಯಿ ಏರಿಕೆ?

ಮಾರುತಿ ಸುಜುಕಿಯ VXi, VXi (O), VXi AMT, VXi (O) AMT, ZXi MT, ಹಾಗೂ ZXi AMT ಕಾರಿನ ಬೆಲೆಯಲ್ಲಿ 3,900 ರೂಪಾಯಿ ಏರಿಕೆಯಾಗಿದೆ. ಇನ್ನು ಸಿಎನ್‌ಜಿ ವೇರಿಯೆಂಟ್‌ಗಳಾದ VXi CNG, VXi (O) CNG, ಹಾಗೂ ZXi CNG ಕಾರಿನ ಬೆಲೆಯಲ್ಲಿ 7400 ರೂಪಾಯಿ ಏರಿಕೆಯಾಗಿದೆ. ಇನ್ನು ಟಾಪ್ ವೇರಿಯೆಂಟ್ ಕಾರುಗಳಾದ ZXi+ MT ಹಾಗೂ ZXi+ AMT ವೇರಿಯೆಂಟ್ ಕಾರಿನ ಬೆಲೆ 18900 ರೂಪಾಯಿ ಏರಿಕೆಯಾಗಿದೆ.

46
ಮಾರುತಿ ಸ್ವಿಫ್ಟ್ ಹೊಸ ಪರಿಷ್ಕರಣೆ ಬೆಲೆ (ಎಕ್ಸ್ ಶೋ ರೂಂ)
  • LXi MT: 5.78 ಲಕ್ಷ ರೂಪಾಯಿ
  • VXi MT: 6.62 ಲಕ್ಷ ರೂಪಾಯಿ
  • VXi (O) MT: 6.88 ಲಕ್ಷ ರೂಪಾಯಿ
  • VXi AMT: 7.07 ಲಕ್ಷ ರೂಪಾಯಿ
  • VXi (O) AMT: 7.33 ಲಕ್ಷ ರೂಪಾಯಿ
  • ZXi MT: 7.56 ಲಕ್ಷ ರೂಪಾಯಿ
  • ZXi AMT: 8.01 ಲಕ್ಷ ರೂಪಾಯಿ
  • ZXi+ MT (ಡ್ಯುಯೆಲ್ ಟೋನ್): 8.38 ಲಕ್ಷ ರೂಪಾಯಿ
  • ZXi+ AMT (ಡ್ಯುಯೆಲ್ ಟೋನ್) 8.83 ಲಕ್ಷ ರೂಪಾಯಿ

ಸಿಎನ್‌ಜಿ ಕಾರು ಬೆಲೆ

  • VXi CNG: 7.52 ಲಕ್ಷ ರೂಪಾಯಿ
  • VXi (O) CNG: 7.78ಲಕ್ಷ ರೂಪಾಯಿ
  • ZXi CNG: 8.46 ಲಕ್ಷ ರೂಪಾಯಿ
56
ಎಂಜಿನ್ ಹಾಗೂ ಕಾರಿನ ಫೀಚರ್

ಮಾರುತಿ ಸ್ವಿಫ್ಟ್ ಕಾರಿನ ಎಂಜಿನ್ ಹಾಗೂ ಫೀಚರ್ಸ್‌ನಲ್ಲಿ ಬದಲಾವಣೆ ಮಾಡಿಲ್ಲ. 1.2 ಲೀಟರ್ ಎಂಜಿನ್, 80.46 ಬಿಹೆಚ್‌ಪಿ ಪವರ್ 111.7ಎನ್ಎಂ ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಅಥವಾ ಎಎಂಟಿ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ವೇರಿಯೆಂಟ್ ಕಾರು ಲಭ್ಯವಿದೆ.

66
ಭರ್ಜರಿ ಮೈಲೇಜ್

ಮಾರುತಿ ಸುಜುಕಿ ಕಡಿಮೆ ಬೆಲೆ ಜೊತೆಗೆ ಭರ್ಜರಿ ಮೈಲೇಜ್ ನೀಡುತ್ತದೆ. ಸ್ವಿಫ್ಟ್ ಮ್ಯಾನ್ಯುಯೆಲ್ ವೇರಿಯೆಂಟ್ ಕಾರು ಒಂದು ಲೀಟರ್ ಪೆಟ್ರೋಲ್‌ಗೆ 24.80 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಸಿಎನ್‌ಜಿ ವೇರಿಯೆಂಟ್ ಕಾರು ಪ್ರತಿ ಕೆಜಿಗೆ 32.85 ಕಿಲೋಮೀಟರ್ ಮೈಲೇಜ್ ನೀಡಲಿದೆ.

Read more Photos on
click me!

Recommended Stories