ಬೈಕ್‌ಗಿಂತ ಅಧಿಕ ಮೈಲೇಜ್ ನೀಡುವ ಕಾರು ಲಿಸ್ಟ್, ನಿರ್ವಹಣೆಗೆ ಕೇವಲ 30 ಸಾವಿರ ಸ್ಯಾಲರಿ ಸಾಕು

Published : Jan 06, 2026, 06:25 PM IST

ಬೈಕ್‌ಗಿಂತ ಅಧಿಕ ಮೈಲೇಜ್ ನೀಡುವ ಕಾರು ಲಿಸ್ಟ್, ಕೇವಲ 30 ಸಾವಿರ ಸ್ಯಾಲರಿಯಲ್ಲಿ ನಿರ್ವಹಣೆ ಸಾಧ್ಯ, ಕಡಿಮೆ ಡೌನ್‌ಪೇಮೆಂಟ್ ಮೂಲಕ ಈ ಕಾರುಗಳನ್ನು ಖರೀದಿಸಬಹುದು. ಈ ಕಾರುಗಳು ಬೈಕ್‌ ರೀತಿಯಲ್ಲೇ ಅತೀ ಕಡಿಮೆ ಖರ್ಚಿನಲ್ಲಿ ಮೈಂಟೇನ್ ಮಾಡಲು ಸಾಧ್ಯ. 

PREV
15
ಕೈಗೆಚುಕುವ ದರ, ಕಡಿಮೆ ನಿರ್ವಹಣೆ ವೆಚ್ಚ

ಕಾರು ಖರೀದಿಸಬೇಕು ಅನ್ನೋ ಬಹುತೇಕ ಎಲ್ಲರ ಕನಸು. ಹಲವರು ಖರಿದಿಸಿದ ಬಳಿಕ ನಿರ್ವಹಣೆ ಹೇಗೆ ಅನ್ನೋ ಚಿಂತೆ, ಮತ್ತೆ ಕೆಲವರಿಗೆ ಅಗ್ಗದ ಕಾರಾಗಾದರೂ ಅಷ್ಟು ಮೊತ್ತ ಹೊಂದಿಸುವುದೇ ಚಿಂತೆ. ಸದ್ಯ ಮಾರುಕಟ್ಟಯಲ್ಲಿ ಬಜೆಟ್‌ಗೆ ಅನುಗುಣವಾಗಿ ಕಾರು ಲಭ್ಯವಿದೆ.ಜೊತೆಗೆ ಅತೀ ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಮಾಡುವ ಕಾರುಗಳು ಲಭ್ಯವಿದೆ. ಈ ಪೈಕಿ ಮಾರುತಿ ಸುಜುಕಿ ಕೈಗೆಟುಕುವ ದರ, ಕಡಿಮೆ ನಿರ್ವಹಣೆ ಖರ್ಚಿನ ಕಾರುಗಳನ್ನು ನೀಡುತ್ತಿದೆ.

25
ಮಾರುತಿ ಸುಜುಕಿ ಅಲ್ಟೋ 800

ಕೆಲವು ಬೈಕ್‌ಗಳು 30-40 kmpl ಮೈಲೇಜ್ ನೀಡುತ್ತವೆ. ಅದೇ ಬೆಲೆಗೆ ಮಾರುತಿ ಆಲ್ಟೊ 800 ಕಾರು ಲಭ್ಯ. ಇದು 25 Kmpl (ಪೆಟ್ರೋಲ್) ಮತ್ತು 34 Km/Kg (CNG) ಮೈಲೇಜ್ ನೀಡುತ್ತದೆ. ಕಡಿಮೆ ನಿರ್ವಹಣೆಯ ಈ ಮಾಡೆಲ್ ಈಗ ಸೆಕೆಂಡ್ ಹ್ಯಾಂಡ್‌ನಲ್ಲಿ ಲಭ್ಯವಿದೆ. ಬೈಕ್ ರೀತಿಯಲ್ಲಿ ಪ್ರತಿ ನಿತ್ಯ ಬಳಕೆಯೂ ಮಾಡಬಹುದು, ಅದೇ ರೀತಿ ಅತೀ ಕಡಿಮೆ ಬೆಲೆಯಲ್ಲಿ ನಿರ್ವಹಣೆ ಮಾಡಲು ಸಾಧ್ಯವಿದೆ.

35
ಮಾರುತಿ ಸುಜುಕಿ ಅಲ್ಟೋ ಕೆ10

ಆಲ್ಟೊ 800 ಬದಲಿಗೆ ಬಂದಿರುವ ಮಾಡೆಲ್ ಆಲ್ಟೊ K10. ಇದು ಭಾರತದಲ್ಲಿ ಜನಪ್ರಿಯವಾಗಿದೆ. ಪೆಟ್ರೋಲ್‌ನಲ್ಲಿ 24-25 Kmpl ಮತ್ತು CNGಯಲ್ಲಿ 34-35 Km/Kg ಮೈಲೇಜ್ ನೀಡುತ್ತದೆ. ಇದರ ಬೆಲೆ ₹3.70 ಲಕ್ಷದಿಂದ ₹5.45 ಲಕ್ಷದವರೆಗೆ ಇದೆ. ದೂರ ಪ್ರಯಾಣ ಅಥವಾ ಪ್ರತಿ ನಿತ್ಯ ಓಡಾಟಕ್ಕೂ ಈ ಕಾರು ಬಳಕೆ ಮಾಡಬಹುದು.

45
ಮಾರುತಿ ಸುಜುಕಿ ಸೆಲೆರಿಯೋ

ಮಾರುತಿ ಸುಜುಕಿಯ ಮತ್ತೊಂದು ಬಜೆಟ್ ಸ್ನೇಹಿ ಕಾರು ಸೆಲೆರಿಯೊ. ಇದು ಆಲ್ಟೊಗಿಂತ ಉತ್ತಮ ಫೀಚರ್‌ಗಳನ್ನು ಹೊಂದಿದೆ. ಪೆಟ್ರೋಲ್‌ನಲ್ಲಿ 24-25 Kmpl ಮತ್ತು CNGಯಲ್ಲಿ 34-35 Km/Kg ಮೈಲೇಜ್ ನೀಡುತ್ತದೆ. ಇದರ ಬೆಲೆ ₹4.70 ಲಕ್ಷದಿಂದ ₹6.73 ಲಕ್ಷದವರೆಗೆ ಇದೆ.

ಮಾರುತಿ ಸುಜುಕಿ ಸೆಲೆರಿಯೋ

55
ಮಾರುತಿ ಸುಜುಕಿ ಸ್ವಿಫ್ಟ್

ಉತ್ತಮ ಮೈಲೇಜ್ ಜೊತೆಗೆ ಸ್ವಲ್ಪ ದೊಡ್ಡ ಕಾರು ಬಯಸುವವರಿಗೆ ಸ್ವಿಫ್ಟ್ ಉತ್ತಮ ಆಯ್ಕೆ. ಇದು 24 ರಿಂದ 33 ಕಿ.ಮೀ. ಮೈಲೇಜ್ ನೀಡುತ್ತದೆ. ಇದರ ಬೆಲೆ ₹5 ಲಕ್ಷದಿಂದ ₹9 ಲಕ್ಷದವರೆಗೆ ಇದೆ. ಸೂಚನೆ: ಮೈಲೇಜ್ ಮತ್ತು ಬೆಲೆ ನಗರ, ಷೋರೂಂಗೆ ಅನುಗುಣವಾಗಿ ಬದಲಾಗಬಹುದು.

ಮಾರುತಿ ಸುಜುಕಿ ಸ್ವಿಫ್ಟ್

Read more Photos on
click me!

Recommended Stories