ಹೊಸ ವರ್ಷ ಸಂಭ್ರಮದಲ್ಲಿ ಕಾರು ಖರೀದಿಸುವವರಿಗೆ ಶಾಕ್, ಜನವರಿಯಿಂದ ರೆನಾಲ್ಟ್ ಬೆಲೆ ಏರಿಕೆ, ಜನವರಿ 2026ರಿಂದ ರೆನಾಲ್ಟ್ ತನ್ನ ಎಲ್ಲಾ ಕಾರುಗಳ ಬೆಲೆ ಏರಿಕೆ ಮಾಡುತ್ತಿದೆ. ಕಾರು ಖರೀದಿಗೆ ಪ್ಲಾನ್ ಮಾಡಿದ್ದರೆ 31ರ ಒಳಗೆ ಬುಕ್ ಮಾಡಿ
ಭಾರತದಲ್ಲಿ ಜಿಎಸ್‌ಟಿ ಕಡಿತದ ಬಳಿಕ ಕಾರುಗಳ ಬೆಲೆ ಇಳಿಕೆ ಮಾರಾಟದಲ್ಲೂ ದಾಖಲೆ ಬರೆಯುವಂತೆ ಮಾಡಿತ್ತು. ಸಣ್ಣ ಕಾರುಗಳಲ್ಲಿ ಭಾರಿ ರಿಯಾಯಿತಿ, ಜಿಎಸ್‌ಟಿ ಕಡಿತದಿಂದ ಹಲವರು ಕಾರು ಖರೀದಿಸಿದ್ದಾರೆ. ಇದೀಗ ಹೊಸ ವರ್ಷಕ್ಕೆ ಕಾರು ಖರೀದಿಸಲು ಹಲವರು ಸಜ್ಜಾಗುತ್ತಿದ್ದಾರೆ. ಇದರ ನಡುವೆ ಬೆಲೆ ಏರಿಕೆ ಶಾಕ್ ಎದುರಾಗಿದೆ.
26
ರೆನಾಲ್ಟ್ ಕಾರುಗಳ ಬೆಲೆ ಶೇಕಡಾ 2ರಷ್ಟು ಏರಿಕೆ
ರೆನಾಲ್ಟ್ ಕಾರುಗಳ ಬೆಲೆಯಲ್ಲಿ ಶೇಕಡಾ 2ರಷ್ಟು ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದೆ. ಆಯಾ ಮಾಡೆಲ್, ವೇರಿಯೆಂಟ್‌ಗಳ ಎಕ್ಸ್ ಶೋ ರೂಂ ಬೆಲೆ ಮೇಲೆ ಶೇಕಡಾ 2ರಷ್ಟು ಚ್ಚಳವಾಗಲಿದೆ. ಹೀಗಾಗಿ ಪ್ರತಿ ಕಾರಿನ ಬೆಲೆ ಏರಿಕೆಯಾಗುತ್ತಿದೆ. ವೇರಿಯೆಂಟ್‌ಗೆ ಅನುಗುಣವಾಗಿ ಬೆಲೆ ಬದಲಾಗಲಿದೆ.
36
ಎಂಜಿ ಬೆನ್ನಲ್ಲೇ ರೆನಾಲ್ಟ್
ಎಂಜಿ ಮೋಟಾರ್ಸ್ ಇತ್ತೀಚೆಗೆ ಭಾರತದಲ್ಲಿ ಬೆಲೆ ಏರಿಕೆ ಘೋಷಿಸಿದೆ. ಎಂಜಿ ಮೋಟಾರ್ಸ್ ಕೂಡ ಶೇಕಡಾ ರಷ್ಟು ಬೆಲೆ ಏರಿಕೆ ಮಾಡುವುದಾಗಿ ಹೇಳಿದೆ. ಇದರ ಬೆನ್ನಲ್ಲೇ ರೆನಾಲ್ಟ್ ಇಂಡಿಯಾ ಕಾರುಗಳ ಬೆಲೆ ಹೆಚ್ಚಳ ಘೋಷಿಸಿದೆ. ಇದರಿಂದ ಮತ್ತಷ್ಟು ಕಾರು ಬ್ರ್ಯಾಂಡ್ ಬೆಲೆ ಏರಿಕೆ ಮಾಡುವ ಸಾಧ್ಯತೆ ಇದೆ.
ಮಾರುತಿ ಸುಜುಕಿ ಇದುವರೆಗೆ ಬೆಲೆ ಏರಿಕೆ ಕುರಿತು ಯಾವುದೇ ಘೋಷಣೆ ಮಾಡಿಲ್ಲ. ಇತ್ತ ಹ್ಯುಂಡೈ, ಮಹೀಂದ್ರ ಆ್ಯಂಡ್ ಮಹೀಂದ್ರ ಕೂಡ ಯಾವುದೇ ರೀತಿಯ ಬೆಲೆ ಏರಿಕೆ ಘೋಷಣೆ ಮಾಡಿಲ್ಲ. ಆದರೆ ಎರಡು ಬ್ರ್ಯಾಂಡ್ ಬೆಲೆ ಏರಿಕೆ ಮಾಡಿರುವ ಕಾರಣ ದಿಡೀರ್ ಘೋಷಣೆ ಮಾಡಿದರೂ ಅಚ್ಚರಿಯಿಲ್ಲ
56
ಸುಳಿವು ನೀಡಿದ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ ಅಧಿಕೃತವಾಗಿ ಕಾರುಗಳ ಬೆಲೆ ಏರಿಕೆ ಕುರಿತು ಯಾವುದೇ ಘೋಷಣೆ,ಪ್ರಕಟಣೆ ಹೊರಡಿಸಿಲ್ಲ. ಆದರೆ ಇತ್ತೀಚೆಗೆ ಪ್ಯಾಸೆಂಜರ್ ವಾಹನ ನಿರ್ದೇಶಕ ಶೈಲೇಶ್ ಚಂದ್ರ ಕಾರುಗಳ ಬೆಲೆ ಏರಿಕೆ ಕುರಿತು ಸುಳಿವು ನೀಡಿದ್ದರು. ತ್ರೈಮಾಸಿಕ ಆದಾಯ ಕುರಿತು ಮಾತುಕತೆಯಲ್ಲಿ ಶೈಲೇಶ್ ಚಂದ್ರ ಈ ಕುರಿತು ಸುಳಿವು ನೀಡಿದ್ದರು.
ಸುಳಿವು ನೀಡಿದ ಟಾಟಾ ಮೋಟಾರ್ಸ್
66
ಜಿಎಸ್‌ಟಿ ಕಡಿತ ಇದೀಗ ಸರಿದೂಗಲಿದೆ
ಜಿಎಸ್‌ಟಿ ಕಡಿತದಿಂದ ಕಾರುಗಳ ಬೆಲೆ ಇಳಿಕೆಯಾಗಿತ್ತು. ಇದೀಗ ಹೊಸ ವರ್ಷದಲ್ಲಿ ಕಾರುಗಳ ಬೆಲೆ ಬೆಲೆ ಏರಿಕೆಯಾಗುವುದರಿಂದ ಮತ್ತೆ ವಾಹನಗಳ ಬೆಲೆ ಹೆಚ್ಚಳವಾಗಲಿದೆ. ಹೀಗಾಗಿ ಹೊಸ ವರ್ಷದಲ್ಲಿ ಮಧ್ಯಮ ವರ್ಗದ ಕಾರು ಕನಸು ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದೆ.