ಇ20 ಪೆಟ್ರೋಲ್ ವಿವಾದ ತೀವ್ರಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಮೋದಿ ಸರ್ಕಾರ ಇದೀಗ ಹೊಸ ಫ್ಯೂಯೆಲ್ ಎಕಾನಮಿ ನೀತಿ ಪ್ರಸ್ತಾವನೆ ಮುಂದಿಟ್ಟಿದೆ. CAFE-III ನೀತಿ ಎಪ್ರಿಲ್ 1, 2027ರಿಂದ ಜಾರಿಯಾಗಲಿದೆ. ಏನಿದು ಹೊಸ ನೀತಿ?
ದೇಶದಲ್ಲೆಡೆ ಇ20 ಪೆಟ್ರೋಲ್ ವಿವಾದ ಭುಗಿಲೆದ್ದಿದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ವಾಹನ ಸಮಸ್ಯೆಯಾಗುತ್ತಿದೆ, ರಿಪೇರಿಗೆ ಬರುತ್ತಿದೆ, ಜೊತೆಗೆ ಮೈಲೇಜ್ ಕಡಿಮೆಯಾಗುತ್ತಿದೆ ಅನ್ನೋ ಗಂಭೀರ ಆರೋಪಗಳನ್ನು ವಾಹನ ಮಾಲೀಕರು ಮಾಡುತ್ತಿದ್ದಾರೆ. ಈ ವಿವಾದಗಳ ತೀವ್ರಗೊಳ್ಳುತ್ತಿದ್ದಂತೆ ಇದೀದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೊಸ ಫ್ಯೂಯೆಲ್ ಎಕಾನಾಮಿ ನೀತಿ ಪ್ರಸ್ತಾಪಿಸಿದೆ. ಈ ಪ್ರಸ್ತಾವನೆ ಎಪ್ರಿಲ್ 1, 2027ರಿಂದ ಜಾರಿಯಾಗುತ್ತಿದೆ.
26
ಏನಿದು ಫ್ಯೂಯೆಲ್ ಎಕಾನಮಿ ನೀತಿ?
ಫೂಯೆಲ್ ಎಕನಾಮಿ ನೀತಿ ಅಥವಾ ಇಂಧನ ದಕ್ಷತೆ ನೀತಿ ಪ್ರಮುಖವಾಗಿ ಕಾರಿನ ಮೈಲೇಜ್ ನೀತಿ. ಅಂದರೆ ಪರಿಸರ ಸ್ನೇಹಿ ಹಾಗೂ ಗರಿಷ್ಠ ಮೈಲೇಜ್ ನೀಡಬಲ್ಲ ವಾಹನ ಉತ್ಪಾದಿಸವ ನೀತಿ ಇದಾಗಿದೆ. ಈ ಕುರಿತ ಕಾರ್ಪೊರೇಟ್ ಆವರೇಜ್ ಫ್ಯುಯೆಲ್ ಎಫಿಷಿಯನ್ಸಿ (CAFE) ನೀತಿಯ ಕರಡು ಪ್ರತಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ವಾಹನ ತಯಾರಕ ಕಂಪನಿಗಳು ಈ ನೀತಿಯಡಿ 2027ರಿಂದ ವಾಹನ ಉತ್ಪಾದಿಸಬೇಕು.
36
ಕಡಿಮೆ ಇಂಧನಗಲ್ಲಿ ಗರಿಷ್ಠ ಮೈಲೇಜ್
ಕಡಿಮೆ ಇಂಧನದಲ್ಲಿ ಹೆಚ್ಚಿನ ಮೈಲೇಜ್ ನೀಡಬಲ್ಲ ಹಾಗೂ ಪರಿಸರಕ್ಕೆ ಪೂರಕವಾದ ಅಂದರೆ ಕಾರ್ಬನ್ ಅತೀ ಕಡಿಮೆ ಪ್ರಮಾಣದ ಹೊರಸೂಸುವಿಕೆಯ ಕಾರುಗಳನ್ನು ಉತ್ಪಾದನೆ ಮಾಡಬೇಕು. 2027-28ನೇ ಹಣಕಾಸು ವರ್ಷದಲ್ಲಿ ಪ್ರತಿ 100 ಕಿಲೋಮೀಟರ್‌ಗೆ ಸರಾಸರಿ ಇಂಧನ ಬಳಕೆ 3.996 ಲೀಟರ್ (ಕಾರ್ಬನ್ ಹೊರಸೂಸುವಿಕೆ 94.76 ಗ್ರಾಂ/ಕಿಮೀ) ಇರಬೇಕೆಂದು ನಿಗದಿಪಡಿಸಲಾಗಿದೆ.
ಸದ್ಯ ಇರುವ ಫ್ಯೂಯೆಲ್ ಎಕಾನಮಿ ನೀತಿ ಅವಧಿ 2027ರ ಮಾರ್ಚ್ 31ಕ್ಕೆ ಅಂತ್ಯಗೊಳ್ಳಲಿದೆ. ಹೊಸ ನೀತಿ ಗರಿಷ್ಠ 8 ಆಸನಗಳ ಪ್ಯಾಸೆಂಜರ್ ಕಾರುಗಳಾದ ಹ್ಯಾಚ್‌ಬ್ಯಾಕ್, ಸೆಡಾನ್ ಹಾಗೂ ಎಸ್‌ಯುವಿ ಕಾರುಗಳಿಗೆ ಅನ್ವಯವಾಗಲಿದೆ. ಆದರೆ ವಾಣಿಜ್ಯ ಸರಕು ವಾಹನಗಳು, ಬಸ್‌ಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಇತ್ತ ವಾರ್ಷಿಕವಾಗಿ 1000 ಕ್ಕಿಂತ ಕಡಿಮೆ ಕಾರುಗಳ ಮಾರಾಟ ಮಾಡುವ ಸಣ್ಣ ಕಾರು ಕಂಪನಿಗಳಿಗೆ ವಿನಾಯಿತಿ ನೀಡಲಾಗಿದೆ.ಹೊಸ ನೀತಿ ಮುಂದಿನ 5 ವರ್ಷಗಳ ಕಾಲ ಇರಲಿದೆ. ಬಳಿಕ ಪರಿಷ್ಕರಣೆ ಮಾಡಲಾಗುತ್ತದೆ.
56
ಕಾರು ಕಂಪನಿಗಳು ಆದೇಶ ಪಾಲಿಸಬೇಕು
ಕಾರು ಕಂಪನಿಗಳು ಹೊಸ ಫ್ಯೂಯೆಲ್ ಎಕಾನಮಿ ನೀತಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಇದಕ್ಕೆ ತಕ್ಕಂತೆ ವಾಹನಗಳ ಉತ್ಪಾದನೆ ಮಾಡಬೇಕು. ಸದ್ಯ ಇರುವ ನೀತಿಯಿಂದ ಕಾರು ಕಂಪನಿಗಳು ಹೈಬ್ರಿಡ್ ಕಾರು, ಎಲೆಕ್ಟ್ರಿಕ್ ಕಾರುಗಳತ್ತೆ ಹೆಚ್ಚಿನ ಒತ್ತು ನೀಡುತ್ತಿದೆ. ಕಂಪನಿಗಳು ಆದೇಶ ಪಾಲಿಸದಿದ್ದರೆ ದುಬಾರಿ ದಂಡಕ್ಕೆ ಗುರಿಯಾಗಲಿದೆ.
66
ಪರಿಸರ ಸ್ನೇಹಿ ವಾಹನಗಳಿಗೆ ಕೇಂದ್ರದ ಪ್ರೋತ್ಸಾಹ
ಪ್ರಮುಖವಾಗಿ ಎಲೆಕ್ಟ್ರಿಕ್ ವಾಹನ ಸೇರಿದಂತೆ ಪರಿಸರ ಸ್ನೇಹಿ ವಾಹನಗಳಿಗೆ ಕೇಂದ್ರ ಸರ್ಕಾರ ಉತ್ತೇಜನ ನೀಡಲಿದೆ. ಪ್ಲಗ್ ಇನ್ ಹೈಬ್ರಿಡ್, ಫ್ಲೆಕ್ಸ್ ಫ್ಯೂಯೆಲ್ ವಾಹನಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಸಬ್ಸಿಡಿ ಯೋಜನೆಗಳನ್ನು ನೀಡಲಾಗಿದೆ.