ಕಿಯಾ ಸೈರೋಸ್ ಇದೀಗ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡಗೆ ಸಜ್ಜಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 526 ಕಿಲೋಮೀಟರ್ ಮೈಲೇಜ್ ನೀಡಲಿದೆ. ಈ ಕಾರನ್ನು ಕೇವಲ 25,000 ರೂಗೆ ಬುಕ್ ಮಾಡಬಹುದು.
ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ವಿಸ್ತರಣೆಗೊಳ್ಳುತ್ತಿದೆ. ಪೈಪೋಟಿ ತೀವ್ರಗೊಳ್ಳುತ್ತಿದೆ. ಇದೀಗ ಕಿಯಾ ತನ್ನ ಸೈರೋಸ್ ಕಾರನ್ನು ಇವಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಭಾರಿ ನಿರೀಕ್ಷೆ ಹುಟ್ಟು ಹಾಕಿರುವ ಕಿಯಾ ಸೈರೋಸ್ ಎಲೆಕ್ಟ್ರಿಕ್ ಕಾರಿನ ಬಿಡುಗಡಗೆ ಕೆಲ ದಿನಗಳಿರುವಾಗಲೇ ಬುಕಿಂಗ್ ಆರಂಭಗೊಂಡಿದೆ.
26
25,000 ರೂಪಾಯಿಗೆ ಸೈರೋಸ್ ಇವಿ ಬುಕಿಂಗ್
ಕಿಯಿ ಸೈರೋಸ್ ಎಲೆಕ್ಟ್ರಿಕ್ ಕಾರಿನ ಬುಕಿಂಗ್ ಬೆಲೆ ಕೇವಲ 25,000 ರೂಪಾಯಿ. ಹೊಸ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಇನ್ನು ಕಾರಿನ ಬೆಲೆ ಶೀಘ್ರದಲ್ಲೇ ಬಹಿರಂಗವಾಗಲಿದೆ. ಸದ್ಯ ಬುಕಿಂಗ್‌ಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ ಎಂದು ಕಿಯಾ ಮೋಟಾರ್ಸ್ ಹೇಳಿದೆ.
36
ಸೈರೋಸ್ ಮೈಲೇಜ್ ಹಾಗೂ ಬ್ಯಾಟರಿ
ಕಿಯಾ ಸೈರೋಸ್ ಎರಡು ಬ್ಯಾಟರಿ ಪ್ಯಾಕ್ ವೇರಿಯೆಂಟ್‌ನಲ್ಲಿ ಲಭ್ಯವಿದೆ. 51.4 kWh ಬ್ಯಾಟರಿ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 526 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ARAI ಸರ್ಟಿಫೈಡ್ ಮಾಡಿದೆ. 42 kWh ಬ್ಯಾಟರಿ ಪ್ಯಾಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 443 ಕಿಲೋಮೀಟರ್ ಮೈಲೇಜ್ ನೀಡಲಿದೆ. ಟಾಪ್ ಕಾರು 171 hp ಪವರ್ 255 Nm ಟಾರ್ಕ್ ಹೊಂದಿದೆ.
ಕಿಯಾ ಸೈರೋಸ್ ಕಾರು 7.4 kW ಹಾಗೂ 11 kW AC ಚಾರ್ಚಿಂಗ್ ಆಯ್ಕೆ ಹೊಂದಿದೆ. 100 kW DC ಫಾಸ್ಟ್ ಚಾರ್ಜಿಂಗ್‌ನಲ್ಲಿ ಕಾರು ಶೇಕಡಾ 10 ರಿಂದ 100ರಷ್ಟು ಚಾರ್ಜ್ ಆಗಲು 39 ನಿಮಿಷ ಬೇಕಿದೆ. ಇನ್ನು ನಾರ್ಮಲ್ ಚಾರ್ಜಿಂಗ್‌ನಲ್ಲಿ ಸಂಪೂರ್ಣ ಚಾರ್ಜ್ ಆಗಲು 7 ಗಂಟೆ 15 ನಿಮಿಷ ತೆಗೆದುಕೊಳ್ಳಲಿದೆ.
56
ಅಡಾಸ್ ಫೀಚರ್
ಲೆವೆಲ್ 2 ಅಡಾಸ್ ಫೀಚರ್, 6 ಏರ್‌ಬ್ಯಾಗ್, 360 ಡಿಗ್ರಿ ಕ್ಯಾಮೆರಾ, ESC, ಹಿಲ್ ಅಸಿಸ್ಟ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸುರಕ್ಷತಾ ಫೀಚರ್ಸ್ ಹೊಂದಿದೆ. ಇನ್ನು ವೆಂಟಿಲೇಟೆಡ್ ರೇರ್ ಸೀಟ್, ಪನೋರಮಿಕ್ ಸನರೂಫ್, ರೇರ್ ಸನ್‌ಶೇಡ್, ಡ್ಯುಯೆಲ್ ಕ್ಯಾಮೆರಾ ಡ್ಯಾಶ್‌ಬೋರ್ಡ್ ಹೊಂದಿದೆ.
66
ಸೈರೋಸ್ ಇವಿ ಕ್ಯಾಬಿನ್
17 ಇಂಚಿನ ಅಲೋಯ್ ವ್ಹೀಲ್, 12.3 ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 5.0 ಇಂಚಿನ ಕ್ಲೈಮೇಟ್ ಕಂಟ್ರೋಲ್ ಡಿಸ್‌ಪ್ಲೇ, 12.3 ಇಂಚಿನ ಇನ್ಫೋಟೈನ್ಮೆಂಟ್ ಸ್ಕ್ರೀನ್, ವೈಯರ್‌ವೆಸ್ ಆ್ಯಪಲ್ ಹಾಗೂ ಆ್ಯಂಡ್ರಾಯ್ಡ್ ಕಾರ್ ಪ್ಲೇ, 8 ಹರ್ಮನ್ ಕಾರ್ಡನ್ ಆಡಿಯೋ ಸ್ಪೀಕರ್ ಈ ಕಾರಿನಲ್ಲಿದೆ.