ಭಾರಿ ಕುತೂಹಲ ಕೆರಳಿಸಿರುವ, ಹಲವು ಬದಲಾವಣೆ ಮೂಲಕ ಬಿಡುಗಡೆಯಾಗುತ್ತಿರುವ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್ ಕಾರಿನ ಬುಕಿಂಗ್ ಆರಂಭಗೊಂಡಿದೆ. ಕೇವಲ 11 ಸಾವಿರ ರೂಪಾಯಿಗೆ ಹೊಸ ಕಾರು ಬುಕಿಂಗ್ ಮಾಡಲು ಸಾಧ್ಯ.
ಮಾರುತಿ ಸುಜುಕಿಯ ಅತೀ ಹೆಚ್ಚು ಮಾರಾಟವಾಗಿರುವ ಕಾರುಗಳ ಪೈಕಿ ಬ್ರೆಜಾ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್ ಕಾರು ಇದೇ ಜುಲೈ 24 ರಂದು ಬಿಡುಗಡೆಯಾಗುತ್ತಿದೆ. ಹೊಸ ವಿನ್ಯಾಸ, ಟರ್ಬೋ ಎಂಜಿನ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಜೊತೆಗೆ ಕೈಗೆಟುಕುವ ದರದಲ್ಲಿ ಎಸ್‌ಯುವಿ ಕಾರು ಖರೀದಿಗೆ ಸಾಧ್ಯವಿದೆ. ವಿಶೇಷ ಅಂದರೆ ಬಿಡುಗಡೆಗೂ ಮೊದಲು ಇದೀಗ ಬ್ರೆಜಾ ಕಾರಿನ ಬುಕಿಂಗ್ ಆರಂಭಗೊಂಡಿದೆ.
26
11,000 ರೂಗೆ ಹೊಸ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್ ಬುಕಿಂಗ್
ಮಾರುತಿ ಸುಜುಕಿ ಇದೀಗ ಬ್ರೆಜಾ ಫೇಸ್‌ಲಿಫ್ಟ್ ಕಾರಿನ ಬುಕಿಂಗ್ ಆರಂಭಿಸಿದ್ದು, ಭರ್ಜರು ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ 11,000 ರೂಪಾಯಿಗೆ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್ ಕಾರು ಬುಕಿಂಗ್ ಮಾಡಿಕೊಳ್ಳಬಹುದು. ಹತ್ತಿರದ ಡೀಲರ್ ಅಥವಾ ಆನ್‌ಲೈನ್ ಮೂಲಕವೂ ಬುಕಿಂಗ್ ಮಾಡಿಕೊಳ್ಳಲು ಅವಕಾಶವಿದೆ.
36
ಟೀಸರ್ ಜೊತೆ ಬುಕಿಂಗ್ ಆರಂಭ
ಹೊಸ ಬ್ರೆಜಾ ಫೇಸ್‌ಲಿಫ್ಟ್ ಕಾರಿನ ಬುಕಿಂಗ್ ಜೊತೆಗೆ ಟೀಸರ್ ಕೂಡ ಬಿಡುಗಡೆ ಮಾಡಲಾಗಿದೆ. ರಾಯಭಾರಿ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಒಳಗೊಂಡ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ವೇಳೆ ಹೊಸ ಅನುಭವ ನಿಮ್ಮನ್ನು ಕಾರು ಖರೀದಿಸುವಂತೆ ಮಾಡಲಿದೆ ಎಂದು ಮಾರುತಿ ಸುಜುಕಿ ಆತ್ಮವಿಶ್ವಾಸದಿಂದ ಹೇಳುತ್ತಿದೆ.
ಮಾರುತಿ ಸುಜುಕಿ ಬ್ರೆಜಾ ಕಾರು ಪ್ರಮುಖವಾಗಿ ವಿನ್ಯಾಸ, ಗ್ರಿಲ್, ಟೈಲ್ ಟೈಲ್, ಡಿಆರ್‌ಎಲ್ ಸೇರಿದಂತೆ ಕೆಲ ಬದಲಾವಣೆ ಮಾಡಲಾಗಿದೆ. ಮುಖ್ಯವಾಗಿ 1.0 ಲೀಟರ್ ಟರ್ಬೋ ಬೂಸ್ಟರ್‌ಜೆಟ್ ಪೆಟ್ರೋಲ್ ಎಂಜಿನ್ ನೀಡಲಾಗಿದೆ. ಇದೇ ಎಂಜಿನ್ ಮಾರುತಿ ಸುಜುಕಿ ಫ್ರಾಂಕ್ಸ್ ಕಾರಿನಲ್ಲೂ ಬಳಸಲಾಗಿದೆ. 100 PS ಪವರ್ ಹಾಗೂ 147.6 Nm ಟಾರ್ಕ್ ಸಾಮರ್ಥ್ಯ ಹೊಂದಿದೆ.
56
ಹೊಸ ಕಾರಿನ ಬೆಲೆ
1.0 ಲೀಟರ್ ಎಂಜಿನ್ ಲೋವರ್ ಕೆಚಗರಿಯಲ್ಲಿ ಬರುವ ಕಾರಣ ಬ್ರೆಜಾ ಫೇಸ್‌ಲಿಫ್ಟ್ ಕಾರು ಜಿಎಸ್‌ಟಿ ಯಲ್ಲೂ ಲಾಭವಾಗಲಿದೆ. ಹೀಗಾಗಿ ಕೈಗೆಟುಕುವ ಹಾಗೂ ಆಕರ್ಷಕ ಬೆಲೆಯಲ್ಲಿ ಕಾರು ಬಿಡುಗಡೆಯಾಗಲಿದೆ. ಎಲ್ಲೆಡೆ ಕಾರುಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಹೊಸ ಬ್ರೇಜಾ ಬೆಲೆ ಸ್ಪರ್ಧಾತ್ಮಕವಾಗಲಿದೆ. ಜುಲೈ 23ಕ್ಕೆ ಬ್ರೆಜಾ ಕಾರಿನ ಬೆಲೆ ಘೋಷಣೆಯಾಗಲಿದೆ.
66
ಪ್ರತಿಸ್ಪರ್ಧಿ ಕಾರುಗಳು
ಬ್ರೆಜಾ ಫೇಸ್‌ಲಿಫ್ಟ್ ಕಾರು ಟಾಟಾ ನೆಕ್ಸಾನ್, ಮಹೀಂದ್ರ 3ಎಕ್ಸ್ಒ, ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಸ್ಕೋಡಾ ಕೈಲಾಕ್ ಸೇರಿದಂತೆ ಸಬ್ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ. ಇನ್ನು ಬ್ರೆಜಾ ಫೇಸ್‌ಲಿಫ್ಟ್ 1.5 ಲೀಟರ್ ನ್ಯಾಚ್ಯುರಲ್ ಆಸ್ಪೈರ್ಡ್ ಹಾಗೂ ಸಿಎನ್‌ಜಿ ವರ್ಶನ್ ಬ್ರೆಜಾ ಫೇಸ್‌ಲಿಫ್ಟ್ ಕಾರು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.