6 ಕೋಟಿ ರೂ ದುಬಾರಿ ಕಾರು ಖರೀದಿಸಿದ ಕಾರ್ತಿಕ್ ಆರ್ಯನ್, ಮುದ್ದಿನ ನಾಯಿ ಜೊತೆ ಫೋಸ್!

First Published | Mar 17, 2024, 3:47 PM IST

ಬಾಲಿವುಡ್ ಸ್ಟಾರ್ ಕಾರ್ತಿಕ್ ಆರ್ಯನ್ ಸೂಪರ್ ಬೈಕ್ ಮೇಲೆ ಹೆಚ್ಚಿನ ಪ್ರೀತಿ. ಇದರ ಜೊತೆಗೆ ಹಲವು ಲಕ್ಷುರಿ ಕಾರಿನ ಮಾಲೀಕರಾಗಿದ್ದಾರೆ. ಇದೀಗ ಕಾರ್ತಿಕ್ ಆರ್ಯನ್ ಹೊಚ್ಚ ಹೊಸ ಕಾರು ಖರೀದಿಸಿದ್ದಾರೆ. ಬರೋಬ್ಬರಿ 6 ಕೋಟಿ ರೂಪಾಯಿ ಕಾರು ಖರೀದಿಸಿರುವ ಕಾರ್ತಿಕ್, ತಮ್ಮ ಮುದ್ದಿನ ನಾಯಿ ಜೊತೆ ಫೋಸ್ ನೀಡಿದ್ದಾರೆ.  ಆರ್ಯನ್ ಖರೀದಿಸಿದ ಕಾರು ಯಾವುದು? ಕಾರ್ತಿಕ್ ಬಳಿ ಇರುವ ಇತರ ಕಾರುಗಳು ಯಾವುದು?
 

ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಕಾರು ಹಾಗೂ ಬೈಕ್ ಮೇಲೆ ಹೆಚ್ಚಿನ ಪ್ರೀತಿ. ಈಗಾಗಲೇ ಕೆಲ ಸೂಪರ್ ಬೈಕ್ ಹಾಗೂ ಐಷಾರಾಮಿ ಕಾರು ಹೊಂದಿರುವ ಕಾರ್ತಿಕ್ ಆರ್ಯನ್ ಇದೀಗ ಹೊಚ್ಚ ಹೊಸ ಕಾರು ಖರೀದಿಸಿದ್ದಾರೆ.
 

ಕಾರ್ತಿಕ್ ಆರ್ಯನ್ ಬರೋಬ್ಬರಿ 6 ಕೋಟಿ ರೂಪಾಯಿ ಮೌಲ್ಯದ ರೇಂಜ್ ರೋವರ್ ಕಾರು ಖರೀದಿಸಿದ್ದಾರೆ. ಕಾರು , ತನ್ನ ಮುದ್ದಿನ ನಾಯಿ ಜೊತೆ ಫೋಸ್ ನೀಡಿದ ಫೋಟೋ ಭಾರಿ ವೈರಲ್ ಆಗಿದೆ.
 

Tap to resize

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಕಾರ್ತಿಕ್ ಆರ್ಯನ್, ನಮ್ಮ ರೇಂಜ್ ಕೊಂಚ ಏರಿಕೆಯಾಗಿದೆ ಎಂದು ಬರೆದುಕೊಂಡಿದ್ದಾರೆ. ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳು ಅಭಿನಂದನೆ ಸಲ್ಲಿಸಿದ್ದಾರೆ.
 

ಕಾರ್ತಿಕ್ ಬಳಿ ದುಬಾರಿ ಮೌಲ್ಯದ ಹಲವು ಕಾರುಗಳಿವೆ. ಈ ಪೈಕಿ ಇದೀಗ ರೇಂಜ್ ರೋವರ್ ಮೊದಲ ಸ್ಥಾನಕ್ಕೇರಿದೆ. ಇದಕ್ಕೂ ಮೊದಲು 85 ಲಕ್ಷ ರೂಪಾಯಿ ಮೌಲ್ಯದ BMW 5 ಸೀರಿಸ್ ಕಾರು ಖರೀದಿಸಿದ್ದರು.
 

40 ಲಕ್ಷ ರೂಪಾಯಿ ಮೌಲ್ಯದ ಮಿನಿ ಕೂಪರ್ ಕನ್ವರ್ಟೇಬಲ್ ಕಾರು ಹೊಂದಿದ್ದಾರೆ. ಹಸಿರು ಬಣ್ಣದ ಆಕರ್ಷಕ ಮಿನಿ ಕೂಪರ್ ಕಾರಿನಲ್ಲಿ ಹಲವು ಬಾರಿ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ.

4.5 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಉರುಸ್ ಕಾರು ಕೂಡ ಕಾರ್ತಿಕ್ ಬಳಿ ಇದೆ. ಈ ಕಾರಿನ ಜೊತೆ ಕಾರ್ತಿಕ್ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
 

ಬಾಲಿವುಡ್‌ನ ಪ್ರತಿಭಾನ್ವಿತ ನಾಯಕನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ಆರ್ಯನ್  4.7 ಕೋಟಿ ರೂಪಾಯಿ ಮೌಲ್ಯದ ಮೆಕ್ಲೆರೆನ್ ಕಾರಿನ ಮಾಲೀಕರಾಗಿದ್ದಾರೆ.

ಸದ್ಯ ಕಾರ್ತಿಕ್ ಆರ್ಯನ್ ಬಹುನಿರೀಕ್ಷಿತ ಬೂಲ್ ಬಲಯ್ಯ 3 ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಈ ಚಿತ್ರ 2024ರ ದೀಪಾವಳಿ ಹಬ್ಬಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.

Latest Videos

click me!