ಭಾರತದಲ್ಲಿ ಎಸ್‌ಯುವಿ ಕಾರುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಪ್ರಮುಖವಾಗಿ ಇಲ್ಲಿನ ರಸ್ತೆ, ಪ್ರದೇಶ, ಪ್ರಯಾಣದ ವೇಳೆ ಕೊಂಡೊಯ್ಯುವ ಲಗೇಜ್ ಸೇರಿದಂತೆ ಹಲವು ಕಾರಣಗಳಿಂದ ಗ್ರೌಂಡ್ ಕ್ಲಿಯರೆನ್ಸ್ ಹೆಚ್ಚಿರುವ ವಾಹನಗಳಿಗೆ ಬೇಡಿಕೆ ಹೆಚ್ಚು. ಈ ಪೈಕಿ ಎಸ್‌ಯುವಿ ಕಾರುಗಳೇ ಮುಂಚೂಣಿಯಲ್ಲಿದೆ.
ಎಲ್ಲಾ ರಸ್ತೆಗೂ ಸೈ ಎನಿಸಿಕೊಂಡು ಆರಾಮಾದಾಯಕ ಪ್ರಯಾಣ ನೀಡಬಲ್ಲ ಹಲವು ಕಾರುಗಳು ಭಾರತದಲ್ಲಿ ಲಭ್ಯವಿದೆ. 17 ಇಂಚಿನ ವ್ಹೀಲ್ ಜೊತೆಗೆ ಕೈಗೆಟುಕುವ ದರದಲ್ಲಿ ಲಭ್ಯವಿರುವ ಕಾರುಗಳ ಪಟ್ಟಿ ಇಲ್ಲಿದೆ.
ಇತ್ತೀಚೆಗೆ ಭಾರಿ ಬೇಡಿಕೆ ಪಡೆದುಕೊಂಡಿರುವ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರ ಕಾರು 17 ಇಂಚಿನ್ ವ್ಹೀಲ್ ಹೊಂದಿದೆ. ಜೆಟಾ ವೇರಿಯೆಂಟ್ ಕಾರಿನ ಬೆಲೆ 13.91 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಭಾರತದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಮಾರಾಟದಲ್ಲಿ ದಾಖಲೆ ಬರೆದ ಕಿಯಾ ಸೆಲ್ಟೋಸ್ HTX ವೇರಿಯೆಂಟ್ ಕಾರು 17 ಇಂಚಿನ ವ್ಹೀಲ್ ಹೊಂದಿದೆ. ೀ ಕಾರಿನ ಬೆಲೆ 15.17 ಲಕ್ಷ ರೂ(ಎಕ್ಸ್ ಶೋ ರೂಂ)
ಎಂಜಿ ಮೋಟಾರ್ಸ್ ಭಾರತದಲ್ಲಿ ಹೆಕ್ಟರ್ ಸೇರಿದಂತೆ ಇತರ ಕೆಲ ಮಾಡೆಲ್ ಕಾರು ಬಿಡುಗಡೆ ಮಾಡಿದೆ. ಈ ಪೈಕಿ ಎಸ್ಟರ್ ಶೈನ್ ವೇರಿಯೆಂಟ್ ಕಾರು 17 ಇಂಚಿನ ವ್ಹೀಲ್ ಹೊಂದಿದೆ. ಈ ಕಾರಿನ ಬೆಲೆ 11.68 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಕ್ರಾಸ್ ಬ್ಯಾಡ್ಜಿಂಗ್ ಮೂಲಕ ಟೊಯೋಟಾ ಬ್ರ್ಯಾಂಡ್ ಅರ್ಬನ್ ಕ್ರೂಸರ್ ಹೈರೈಡರ್ ವಿ ಕಾರು ಬಿಡುಗಡೆ ಮಾಡಿದೆ. 17 ಇಂಚಿನ ಅಲೋಯ್ ವ್ಹೀಲ್ ಹೊಂದಿರುವ ಈ ಕಾರಿನ ಬೆಲೆ 14.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಈ ಟಾಪ್ 5 ಕಾರುಗಳು ಭಾರತದಲ್ಲಿ ಬಹುಬೇಡಿಕೆಯ ಕಾರಾಗಿ ಹೊರಹೊಮ್ಮಿದೆ. ಇದನ್ನು ಹೊರತುಪಡಿಸಿ ಇನ್ನೂ ಕೆಲ ಕಾರುಗಳು 17 ಇಂಚಿನ ವ್ಹೀಲ್ ಹೊಂದಿದೆ.