10 ಲಕ್ಷ ರೂ ಒಳಗೆ ಲಭ್ಯವಿರುವ ಸನ್‌ರೂಫ್, ಇನ್ಫೋಟೈನ್ಮೆಂಟ್ ಸಿಸ್ಟಮ್ ಫೀಚರ್ಸ್ ಕಾರು!

First Published | Mar 15, 2024, 4:28 PM IST

ಕಾರಿನ ಸನ್‌ರೂಫ್ ಫೀಚರ್ಸ್ ಬಹುತೇಕ ಎಲ್ಲರಿಗೂ ಇಷ್ಟ. ಸಿನಿಮಾಗಳಲ್ಲಿ ಚಿತ್ರಿಸುವಂತೆ ಪ್ರಯಾಣ ಮಾಡಲು ಸನ್‌ರೂಫ್ ಮೊರೆ ಹೋಗುತ್ತಾರೆ. ಭಾರತದಲ್ಲಿ 10 ಲಕ್ಷ ರೂಪಾಯಿ ಒಳಗೆ ಸನ್‌ರೂಫ್, ಅತೀ ದೊಡ್ಡ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ಫೀಚರ್ಸ್ ಹೊಂದಿರುವ ಕಾರುಗಳ ಪಟ್ಟಿ ಇಲ್ಲಿದೆ.

ಕಾರಿನ ಸನ್‌ರೂಫ್ ಇದೀಗ ಬಾರಿ ಬೇಡಿಕೆಯ ಫೀಚರ್ ಆಗಿದೆ. ದುಬಾರಿ ಕಾರುಗಳಲ್ಲಿ ಮಾತ್ರ ಲಭ್ಯವಿದ್ದ ಈ ಫೀಚರ್ಸ್ ಇದೀಗ ಕೈಗೆಟುಕುವ ಬೆಲೆಯಲ್ಲಿನ ಕಾರುಗಳಲ್ಲೂ ಲಭ್ಯವಿದೆ.
 

ಹೀಗೆ ಕಡಿಮೆ ಬೆಲೆಯಲ್ಲಿ ಸನ್‌ರೂಫ್, ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ಫೀಚರ್ಸ್ ಹೊಂದಿರುವ ಕಾರುಗಳು ಕೇವಲ 10 ಲಕ್ಷ ರೂಪಾಯಿ ಒಳಗೆ ಲಭ್ಯವಿದೆ.

Latest Videos


ಹ್ಯುಂಡೈ ಎಕ್ಸ್‌ಟರ್ ಇತ್ತೀಚೆಗೆ ಬಿಡುಗಡೆಯಾದ ಮಿನಿ ಎಸ್‌ಯುವಿ ಕಾರು. ಈ ಪೈಕಿ ಎಕ್ಸ್‌ಟರ್ ಎಸ್‌ಎಕ್ಸ್ ವೇರಿಯೆಂಟ್ ಕಾರು ಸನ್‌ರೂಫ್ ಫೀಚರ್ಸ್ ಹೊಂದಿದೆ. 8 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದೆ. ಈ ಕಾರಿನ ಬೆಲೆ 8.23 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
 

ಹ್ಯುಂಡೈ ಐ20 ಸ್ಪೋರ್ಟ್ಸ್ ವೇರಿಯೆಟ್ ಕಾರು ಸನ್‌ರೂಫ್ ಫೀಚರ್ಸ್ ಹೊಂದಿಗೆ ಮೊದಲ ಹ್ಯಾಚ್‌ಬ್ಯಾಕ್ ಕಾರು ಅನ್ನೋ ಹೆಗ್ಗಳಿಕೆಗೆ ಹೊಂದಿದೆ. ಈ ಕಾರಿನ ಬೆಲೆ 8.38 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
 

ಟಾಟಾ ಮೋಟಾರ್ಸ್ ಬ್ರ್ಯಾಂಡ್ ಪಂಚ್ ಮಿನಿ ಎಸ್‌ಯುವಿ ಕಾರು ಸನ್‌ರೂಫ್ ಆಯ್ಕೆ ಹೊಂದಿದೆ. 7 ಇಂಚಿನ ಇನ್ಪೋಟೈನ್ಮೆಂಟ್ ಫೀಚರ್ ಹೊಂದಿರುವ ಈ ಕಾರಿನ ಬೆಲೆ 8.34 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
 

ಕಿಯಾ ಸೊನೆಟ್ ಹೆಚ್‌ಟಿಕೆ ವೇರಿಯೆಂಟ್ ಕಾರು ಕೂಡ ಸನ್‌ರೂಫ್ ಫೀಚರ್ಸ್ ಹೊಂದಿದೆ. 8 ಇಂಚಿನ ಇನ್ಫೊಟೈನ್ಮೆಂಟ್ ಫೀಚರ್ಸ್ ಹೊಂದಿರುವ ಈ ಕಾರು 9.89 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
 

ಮಹೀಂದ್ರ ಎಕ್ಸ್‌ಯುವಿ 300 ಕಾರಿನ ಪೈಕಿ W4 ವೇರಿಯೆಂಟ್ ಕಾರು ಸನ್‌ರೂಫ್ ಫೀಚರ್ಸ್ ಹೊಂದಿದೆ. ಈ ಕಾರಿನ ಬೆಲೆ  9.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

ಇವು 10 ಲಕ್ಷ ರೂಪಾಯಿ ಒಳಗಿನ ಸನ್‌ರೂಫ್ ಸೇರಿದಂತೆ ಇತರ ಫೀಚರ್ಸ್ ಹೊಂದಿರುವ ಕಾರುಗಳಾಗಿದೆ. ಇದನ್ನುಹೊರತುಪಡಿಸಿದರೆ, ಇನ್ನುಳಿದ ಎಲ್ಲಾ ಎಸ್‌ಯುವಿ ಹಾಗೂ ಸೆನಾನ್ ಟಾಪ್ ವೇರಿಯೆಂಟ್ ಕಾರುಗಳಲ್ಲೂ ಸನ್‌ರೂಫ್ ಫೀಚರ್ಸ್ ಲಭ್ಯವಿದೆ.

click me!