ಹೊಸ ಸ್ಟಾರ್ಟ್‌ಅಪ್ ಕಂಪನಿ Blinq Mobility ಶೀಘ್ರದಲ್ಲೇ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ತರಲಿದೆ. ಬ್ಯಾಟರಿ ಸ್ವಾಪಿಂಗ್ ತಂತ್ರಜ್ಞಾನ ಹೊಂದಿರುವ ಈ ಕಾರು, ಪ್ರತಿ ಚಾರ್ಜ್‌ಗೆ 250 ಕಿ.ಮೀ ರೇಂಜ್ ನೀಡಲಿದ್ದು, ಕೇವಲ 2 ನಿಮಿಷ 48 ಸೆಕೆಂಡುಗಳಲ್ಲಿ ಬ್ಯಾಟರಿ ಬದಲಾಯಿಸಬಹುದು.
ಶೀಘ್ರದಲ್ಲಿಯೇ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಬರಲಿದೆ. ಹೊಸ ಸ್ಟಾರ್ಟ್‌ಅಪ್ ಕಂಪನಿ Blinq Mobility ಇವಿ (EV) ಮಾಡೆಲ್ ಅನ್ನು ಸಿದ್ಧಪಡಿಸಿದ್ದು, ಈ ಕಾರು ಪ್ರತಿ ಚಾರ್ಜ್‌ಗೆ 250 ಕಿಲೋಮೀಟರ್ ರೇಂಜ್ ನೀಡಲಿದೆ. ಇನ್ನು ಇದು ಕೇವಲ 2 ನಿಮಿಷ 48 ಸೆಕೆಂಡುಗಳಲ್ಲಿ ಚಾರ್ಜ್ ಆಗುತ್ತದೆ. ಇದರ ಬೆಲೆ ಆಟೋ ರಿಕ್ಷಾದ ಆಸುಪಾಸಿನಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ.
26
ಬ್ಯಾಟರಿ ಸ್ವಾಪಿಂಗ್ ಟೆಕ್ನಾಲಜಿ
ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಕಾರಿಗೆ ಸೂಪರ್‌ಚಾರ್ಜ್‌ನ ಅವಶ್ಯಕತೆ ಇಲ್ಲ. ಈ ಸ್ಟಾರ್ಟ್‌ಅಪ್ ಒಂದು ಅದ್ಭುತವನ್ನೇ ಮಾಡಿದೆ. ಬ್ಯಾಟರಿ ಸ್ವಾಪಿಂಗ್ (ಬದಲಾಯಿಸುವ) ತಂತ್ರಜ್ಞಾನವನ್ನು ಅತ್ಯದ್ಭುತವಾಗಿ ಬಳಸಿಕೊಂಡಿದೆ. ಮಾಧ್ಯಮಗಳ ವರದಿಗಳ ಪ್ರಕಾರ, ಈ ಕಾರು ಬಿಡುಗಡೆಯಾಗುವ ವೇಳೆ ಮಾರುಕಟ್ಟೆಯಲ್ಲೇ ಅತ್ಯಂತ ಅಗ್ಗದ ಕಾರು ಆಗಿರಲಿದೆ. ಸ್ವಾಪಿಂಗ್ ಆಯ್ಕೆಯಿಂದಾಗಿ ಗ್ರಾಹಕರಿಗೆ ದೊಡ್ಡ ನಿರಾಳತೆ ಸಿಗಲಿದೆ.
36
ಕಾರಿಗೆ ಇನ್ನೂ ಅಧಿಕೃತ ಹೆಸರಿಡದ ಕಂಪನಿ
ಕಂಪನಿಯು ಇನ್ನೂ ಈ ಕಾರಿನ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. 'Cartoq' ವೆಬ್‌ಸೈಟ್ ಈ ಕಾರಿಗೆ 'ಕಾರ್001' (Car001) ಎಂಬ ಕೋಡ್ ನೇಮ್ ನೀಡಿದೆ. ಈ ಕಂಪನಿಯು ಇತ್ತೀಚೆಗಷ್ಟೇ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಈ ಕಾರು ತಯಾರಾಗಿರುವುದು ಕಾಣಿಸುತ್ತಿದೆ. ಕಾರಿನಲ್ಲಿ ಒಂದು ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಕಾಣಿಸುತ್ತಿದೆ. ಬ್ಯಾಟರಿ ಕಡಿಮೆಯಾದರೆ ಇದು ಎಚ್ಚರಿಕೆಯನ್ನೂ ನೀಡುತ್ತದೆ.
ಇದು ಟಾಟಾ ನ್ಯಾನೋ ತರಹದ ಮಾಡಿಫೈಡ್ ಲುಕ್ ಹೊಂದಿರುವ ಸಣ್ಣ ಕಾರಾಗಿದೆ. ಇದರಲ್ಲಿ ಎಲ್‌ಇಡಿ (LED) ಹೆಡ್‌ಲೈಟ್‌ಗಳು, ಗ್ಲಾಸ್ ಬ್ಲಾಕ್ ಫ್ರಂಟ್ ಸ್ಟ್ರಿಪ್ ಮತ್ತು ಕಂಪನಿಯ ಲೋಗೋ ಇದೆ. ಕಂಪೋಸಿಟ್ ಸಾಮಗ್ರಿಗಳನ್ನು ಬಳಸಿ ಈ ಕಾರನ್ನು ತಯಾರಿಸಲಾಗಿದೆ. ಹೀಗಾಗಿ ಈ ಕಾರಿನ ತೂಕವೂ ಕೂಡ ಕಡಿಮೆ ಇರಲಿದೆ. ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್ ಮೇಲೆ ತಯಾರಾಗಿರುವ ಈ ಕಾರನ್ನು ಟ್ರಾಫಿಕ್‌ನಲ್ಲಿ ಸುಲಭವಾಗಿ ಚಲಾಯಿಸಬಹುದು.
56
5 ಜನರ ಆರಾಮದಾಯಕ ಪ್ರಯಾಣ
ಈ ಕಾರಿನಲ್ಲಿ 5 ಜನ ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಬಹುದು. ಇದರಲ್ಲಿ ಆರಾಮದಾಯಕ ಆಸನ ವ್ಯವಸ್ಥೆ, ಕ್ಲೀನ್ ಫಿನಿಶ್ ಮತ್ತು ಸೈಲೆಂಟ್ ಕ್ಯಾಬಿನ್ ಆಕರ್ಷಕವಾಗಿವೆ. ಡ್ಯಾಶ್‌ಬೋರ್ಡ್‌ನಲ್ಲಿರುವ ರೋಟರಿ ಕಂಟ್ರೋಲರ್ ಸಹಾಯದಿಂದ 'Swap' ಅಥವಾ 'S' ಮೋಡ್ ಅನ್ನು ಆಕ್ಟಿವೇಟ್ ಮಾಡಬಹುದು. ಪ್ರೀಮಿಯಂ ಟಚ್ ಮತ್ತು ಪ್ರಾಕ್ಟಿಕಲ್ ಸ್ಟೋರೇಜ್ ಸೌಲಭ್ಯವನ್ನು ಇದರಲ್ಲಿ ನೀಡಲಾಗಿದೆ.
66
252 ಕಿಲೋಮೀಟರ್ ರೇಂಜ್
ವರದಿಗಳ ಪ್ರಕಾರ, ಈ ಕಾರು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮೇಲೆ 252 ಕಿಮೀ ರೇಂಜ್ ತೋರಿಸುತ್ತದೆ. ಬ್ಯಾಟರಿ ಸ್ವಾಪಿಂಗ್ ತಂತ್ರಜ್ಞಾನದ ಕಾರಣದಿಂದಾಗಿ 250 ಕಿಮೀಗಿಂತಲೂ ಹೆಚ್ಚಿನ ರೇಂಜ್ ಸಿಗಲಿದೆ. ಇನ್ನು ಬ್ಯಾಟರಿಯನ್ನು ಕೇವಲ 2 ನಿಮಿಷ 48 ಸೆಕೆಂಡುಗಳಲ್ಲಿ ರೀಚಾರ್ಜ್ ಮಾಡಬಹುದು (ಬದಲಾಯಿಸಬಹುದು). ಈ ಕಾರಿನಲ್ಲಿರುವ ಬ್ಯಾಟರಿಯನ್ನು ಸ್ವಾಪ್ ಮಾಡಲು ಸಾಧ್ಯವಿದೆ. ಹಾಗೆಯೇ ಈ ಕಾರಿನ ಬೆಲೆ ಆಟೋ ರಿಕ್ಷಾಗಿಂತಲೂ ಕಡಿಮೆ ಇರಲಿದೆ ಎಂದು ತಿಳಿಸಿದೆ.