ಸ್ವಿಫ್ಟ್, ಬ್ರೆಜಾ ಸೇರಿ ಮಾರುತಿ ಸುಜುಕಿ ಆಯ್ದ ಕಾರುಗಳ ಮೇಲೆ ಭಾರಿ ಡಿಸ್ಕೌಂಟ್, ಕೈಗೆಟುಕುವ ಬೆಲೆಯಲ್ಲಿ ವಾಹನ

Published : Jun 08, 2026, 09:11 PM IST

ಮಾರುತಿ ಸುಜುಕಿ ಅರೆನಾ ಡೀಲರ್‌ಶಿಪ್ ಮೂಲಕ ಆಯ್ದ ಕಾರುಗಳಿಗೆ ಭರ್ಜರಿ ಡಿಸ್ಕೌಂಟ್ ಸಿಗುತ್ತಿದೆ. ವಿಶೇಷವಾಗಿ ಮಾರುತಿ ಸ್ವಿಫ್ಟ್, ಬ್ರೆಜಾ, ವಿಕ್ಟೋರಿಸ್ ಸೇರಿದಂತೆ ಪ್ರಮುಖ ಕಾರುಗಳಿಗೆ ಜೂನ್ ತಿಂಗಳ ಆಫರ್ ಘೋಷಿಸಲಾಗಿದೆ. 

PREV
16
ಮಾರುತಿ ಸುಜುಕಿ ಕಾರುಗಳಿಗೆ 90 ಸಾವಿರ ರೂ ಡಿಸ್ಕೌಂಟ್

ಹೊಸ ಕಾರು ಖರೀದಿ ಹಲವರ ಕನಸು. ಕೆಲ ವಿಶೇಷ ಸಂದರ್ಭಗಳಲ್ಲಿ ಭರ್ಜರಿ ಡಿಸ್ಕೌಂಟ್ ಆಫರ್ ಮೂಲಕ ಕಾರು ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತದೆ. ಇದೀಗ ಮಾರುತಿ ಸುಜುಕಿ ಅರೆನಾ ಡೀಲರ್‌ಶಿಪ್ ಮೂಲಕ ಮಾರಾಟವಾಗು ಪ್ರಮುಖ ಕಾರುಗಳ ಮೇಲೆ ಜೂನ್ ತಿಂಗಳ ಆಫರ್ ಘೋಷಿಸಿದೆ. ಗರಿಷ್ಠ 90 ಸಾವಿರ ರೂಪಾಯಿವರೆಗೆ ಡಿಸ್ಕೌಂಟ್ ಘೋಷಿಸಲಾಗಿದೆ.

26
ಆಫರ್ ವಿವರ

ಈ ಕೊಡುಗೆಗಳು ನಗದು ರಿಯಾಯಿತಿ, ಎಕ್ಸ್‌ಚೇಂಜ್ ಬೋನಸ್, ಸ್ಕ್ರ್ಯಾಪೇಜ್ ಸೌಲಭ್ಯ ಹಾಗೂ ಕಾರ್ಪೊರೇಟ್ ಆಫರ್‌ಗಳನ್ನು ಒಳಗೊಂಡಿವೆ.ಮಾರುತಿ ಸುಜುಕಿಯ ಯಾವ ಕಾರುಗಳಿಗೆ ಎಷ್ಟು ಆಫರ್ ನೀಡಲಾಗಿದೆ. ಇದರಿಂದ ಗ್ರಾಹಕರಿಗೆ ಆಗುವ ಲಾಭವೆಷ್ಟು, ಇಲ್ಲಿದೆ ಸಂಪೂರ್ಣ ಮಾಹಿತಿ

36
ಮಾರುತಿ ವಿಕ್ಟೋರಿಸ್ ಆಫರ್

ಮಾರುತಿ ಅರೆನಾ ಶೋರೂಮ್‌ಗಳ ವ್ಯಾಪ್ತಿಯಲ್ಲಿ ಈ ತಿಂಗಳು ಅತ್ಯಧಿಕ ಲಾಭ ಪಡೆಯುತ್ತಿರುವ ಕಾರು ವಿಕ್ಟೋರಿಸ್ (Maruti Victoris). ಇದರ ಸ್ಟ್ರಾಂಗ್ ಹೈಬ್ರಿಡ್ ವೇರಿಯೆಂಟ್‌ಗಳ ಮೇಲೆ ಗ್ರಾಹಕರು ಬರೋಬ್ಬರಿ 90,000 ರೂಪಾಯಿಗಳವರೆಗೆ ಒಟ್ಟು ಉಳಿತಾಯವನ್ನು ಮಾಡಬಹುದಾಗಿದೆ. ಇದರಲ್ಲಿ 50,000 ರೂ.ವರೆಗಿನ ಎಕ್ಸ್‌ಚೇಂಜ್/ಸ್ಕ್ರ್ಯಾಪೇಜ್ ಬೋನಸ್, 30,000 ರೂ.ಗಳ ಲಾಯಲ್ಟಿ ಅಪ್‌ಗ್ರೇಡ್ ಬೋನಸ್ ಮತ್ತು 10,000 ರೂ.ಗಳ ಕಾರ್ಪೊರೇಟ್ ಕೊಡುಗೆ ಸೇರಿದೆ.

46
ಮಾರುತಿ ಸುಜುಕಿ ಸ್ವಿಫ್ಟ್

ನೆಚ್ಚಿನ ಹ್ಯಾಚ್‌ಬ್ಯಾಕ್ ಆದ ಮಾರುತಿ ಸುಜುಕಿ ಸ್ವಿಫ್ಟ್ (Maruti Swift) ಕಾರಿನ ಮೇಲೂ ಜೂನ್ ತಿಂಗಳಲ್ಲಿ ಭಾರಿ ರಿಯಾಯಿತಿ ಸಿಗುತ್ತಿದೆ. ಸ್ವಿಫ್ಟ್‌ನ ಎಜಿಎಸ್ (AGS - ಆಟೋ ಗೇರ್ ಶಿಫ್ಟ್) ಮಾದರಿಗಳ ಮೇಲೆ 45,000 ರೂಪಾಯಿಗಳವರೆಗೆ ಹಾಗೂ ಪೆಟ್ರೋಲ್ ಮ್ಯಾನುಯಲ್ ಮತ್ತು ಸಿಎನ್‌ಜಿ (CNG) ವೇರಿಯೆಂಟ್‌ಗಳ ಮೇಲೆ 40,000 ರೂಪಾಯಿಗಳವರೆಗೆ ಆಕರ್ಷಕ ಆಫರ್‌ಗಳನ್ನು ಘೋಷಿಸಲಾಗಿದೆ.

56
ಮಾರುತಿ ಬ್ರೆಜಾ ಸೇರಿ ಇತರ ಕಾರುಗಳ ಆಫರ್

ಕೌಟುಂಬಿಕ ಕಾರುಗಳಾದ ಮಾರುತಿ ಬ್ರೆಜ್ಜಾ (Brezza) ಮೇಲೆ 55,000 ರೂ.ವರೆಗೆ, ವ್ಯಾಗನ್ಆರ್ (WagonR) ಮತ್ತು ಆಲ್ಟೊ ಕೆ10 (Alto K10) ಬೇಸ್ ಮಾಡೆಲ್‌ಗಳ ಮೇಲೆ 52,500 ರೂ.ವರೆಗೆ ಹಾಗೂ ಮಾರುತಿ ಎಸ್-ಪ್ರೆಸ್ಸೊ (S-Presso) ಮತ್ತು ಈಕೋ (Eeco) ವ್ಯಾನ್ ಮೇಲೆ 37,500 ರೂಪಾಯಿಗಳವರೆಗೆ ಬಂಪರ್ ಆಫರ್‌ಗಳು ಲಭ್ಯವಿವೆ.

66
ಡಿಸೈರ್, ಎರ್ಟಿಗಾಗೆ ಆಫರ್ ಇಲ್ಲ

ಸದ್ಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಲ್ಲಿರುವ ಹೊಸ ಮಾರುತಿ ಡಿಸೈರ್ (Dzire) ಮತ್ತು ಎರ್ಟಿಗಾ (Ertiga) ಕಾರುಗಳ ಮೇಲೆ ಯಾವುದೇ ಕನ್ಸ್ಯೂಮರ್ ಆಫರ್‌ಗಳನ್ನು ನೀಡಲಾಗಿಲ್ಲ. ಕಾರಿನ ಮಾಡೆಲ್, ಇಂಧನ ಮಾದರಿ ಮತ್ತು ನೀವು ವಾಸಿಸುವ ನಗರಕ್ಕೆ ಅನುಗುಣವಾಗಿ ಈ ರಿಯಾಯಿತಿ ದರಗಳು ಬದಲಾಗಲಿದ್ದು, ಹೆಚ್ಚಿನ ವಿವರಗಳಿಗಾಗಿ ಗ್ರಾಹಕರು ಹತ್ತಿರದ ಅರೆನಾ ಶೋರೂಮ್‌ಗಳನ್ನು ಸಂಪರ್ಕಿಸಬಹುದಾಗಿದೆ.

Read more Photos on
click me!

Recommended Stories