ಅಂಬಾನಿ, ಅದಾನಿ, ಟಾಟಾ ಬಿಸಿನೆಸ್‌ಗೆ ತೀವ್ರ ಪೈಪೋಟಿ; ಭಾರತದಲ್ಲಿ ಅತಿ ದೊಡ್ಡ ಬ್ರ್ಯಾಂಡ್‌ನಿಂದ ಡೈಮಂಡ್ ಬಿಸಿನೆಸ್

First Published | Feb 22, 2024, 10:46 AM IST

ಭಾರತದಲ್ಲಿ ಅಂಬಾನಿ, ಅದಾನಿ, ಟಾಟಾ ಕೋಟಿ ಕೋಟಿ ಕಂಪೆನಿಗಳ ಬಿಸಿನೆಸ್‌ನ್ನು ನಿರ್ವಹಿಸುತ್ತಾರೆ. ಬಹುಕೋಟಿ ಬಿಸಿನೆಸ್‌ನ್ನು ನಿರ್ವಹಿಸೋ ಮೂಲಕ ಬಿಲಿಯನೇರ್‌ ಎಂದು ಕರೆಸಿಕೊಂಡಿದ್ದಾರೆ. ಆದರೆ ಇವರೆಲ್ಲರಿಗೆ ಪೈಪೋಟಿ ಕೊಡೋಕೆ ಜಗತ್ತಿನ ಅತಿ ದೊಡ್ಡ ಬ್ರ್ಯಾಂಡ್‌ ಭಾರತದಲ್ಲಿ ಬಿಸಿನೆಸ್ ಆರಂಭಿಸಲು ಮುಂದಾಗ್ತಿದೆ.

ಟರ್ಕಿ ಮೂಲದ ವಜ್ರ ಆಭರಣ ಬ್ರ್ಯಾಂಡ್ ಝೆನ್ ಡೈಮಂಡ್ ಭಾರತದ ಪ್ರಮುಖ ಮೆಟ್ರೋಪಾಲಿಟನ್ ಪ್ರದೇಶಗಳಾದ ಮುಂಬೈ, ದೆಹಲಿ ಮತ್ತು ಬೆಂಗಳೂರು ಪ್ರವೇಶಿಸಲು ತನ್ನ ಉದ್ಯಮವನ್ನು ಆರಂಭಿಸಲು ಯೋಜನೆ ರೂಪಿಸುತ್ತಿದೆ. ಬ್ರ್ಯಾಂಡ್, ಆರಂಭದಲ್ಲಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ನ್ನು ಪ್ರಾರಂಭಿಸಲು ಗಮನಹರಿಸುತ್ತದೆ.

ಝೆನ್ ಡೈಮಂಡ್ ನಂತರದ ಹಂತಗಳಲ್ಲಿ ಭಾರತದ ಇನ್ನುಳಿದ ನಗರಗಳಲ್ಲಿ ಬಿಸಿನೆಸ್ ವಿಸ್ತರಿಸಲಿದ್ದು, ಭೌತಿಕ ಚಿಲ್ಲರೆ ಮಾರಾಟ ಮಳಿಗೆಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಈ ಹೊಸ ಉದ್ಯಮವು ಮುಕೇಶ್ ಅಂಬಾನಿಯವರ ರಿಲಯನ್ಸ್, ಅದಾನಿ ಗ್ರೂಪ್ ಮತ್ತು ಟಾಟಾ ಗ್ರೂಪ್ ಅಡಿಯಲ್ಲಿ ಬರುವ ಕಂಪೆನಿಗಳಿಗೆ ಪೈಪೋಟಿ ನೀಡಲಿದೆ.

Tap to resize

ಝೆನ್ ಡೈಮಂಡ್‌ನ್ನು ಇಸ್ತಾನ್‌ಬುಲ್‌ನಲ್ಲಿ 2000ರಲ್ಲಿ ಎಮಿಲ್ ಗುಜೆಲಿಸ್ ಪ್ರಾರಂಭಿಸಿದರು. ಈ ಬ್ರ್ಯಾಂಡ್ ಈಗ ಪ್ರಪಂಚದಾದ್ಯಂತ ಸುಮಾರು 400 ಮಳಿಗೆಗಳನ್ನು ಹೊಂದಿದೆ. 

ಝೆನ್ ಡೈಮಂಡ್ ಗ್ರೂಪ್‌ನ ಅಧ್ಯಕ್ಷ ಎಮಿಲ್ ಗುಜೆಲಿಸ್, ಬ್ರ್ಯಾಂಡ್‌ನ ಭಾರತದಲ್ಲಿ ಈ ಉದ್ಯಮವನ್ನು ಮುನ್ನಡೆಸಲು ನೀಲ್ ಸೋನಾವಾಲಾ ಅವರೊಂದಿಗೆ ಕೈಜೋಡಿಸಿದ್ದಾರೆ. 

ಹಾಂಗ್ ಕಾಂಗ್, ಚೀನಾ ಮತ್ತು ಆಗ್ನೇಯ ಏಷ್ಯಾದಾದ್ಯಂತ ಆಭರಣ ವಿತರಣಾ ಜಾಲಗಳಲ್ಲಿ ವ್ಯಾಪಕ ಅನುಭವವನ್ನು ಹೊಂದಿರುವ ಸೋನಾವಾಲಾ, ಹಾಗೆಯೇ ಡಿ ಬೀರ್ಸ್ ಗ್ರೂಪ್ ಮತ್ತು ಆಗ್ನೇಯ ಏಷ್ಯಾದ ಪ್ರಮುಖ ಚಿಲ್ಲರೆ ಸರಪಳಿಗಳನ್ನೂ ಮುನ್ನಡೆಸುತ್ತಾರೆ.

ಝೆನ್ ಡೈಮಂಡ್‌ನ ಇಂಡಿಯನ್‌ ಬಿಸಿನೆಸ್‌ನಲ್ಲೂ ಪ್ರಮುಖ ಹುದ್ದೆಯನ್ನು ಸೋನಾವಾಲಾ, ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಝೆನ್ ಡೈಮಂಡ್ ಭಾರತದಲ್ಲಿ ಅತ್ಯುತ್ತಮ ಗ್ರಾಹಕ ಸೇವೆಯನ್ನು ಒದಗಿಸಲಿದೆ. ಭಾರತದಲ್ಲಿ ವಜ್ರದ ಆಭರಣಗಳ ಶಾಪಿಂಗ್ ಅನುಭವವನ್ನು ಪರಿವರ್ತಿಸುವ ಮೂಲಕ ಝೆನ್ ಡೈಮಂಡ್ ಅಂತಾರಾಷ್ಟ್ರೀಯ ಆಭರಣ ಪ್ರವೃತ್ತಿಗಳಿಗೆ ಮಧ್ಯಮ ವರ್ಗದವರಿಗೂ ಕೈಗೆಟುಕುವ ಎಂಟ್ರಿಯನ್ನು ಒದಗಿಸಲಿದೆ

Latest Videos

click me!