ಗೌರಿ ಖಾನ್ ರಿಂದ ಬಾದ್ಶಾವರೆಗೆ ಐಷಾರಾಮಿ ರೆಸ್ಟೋರೆಂಟ್‌ ಹೊಂದಿರುವ ಬಾಲಿವುಡ್ ಸೆಲೆಬ್ರಿಟಿಗಳಿವರು

First Published | Feb 20, 2024, 4:31 PM IST

ಬಾಲಿವುಡ್ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಆಯೇಷಾ ಟಾಕಿಯಾ ಸೇರಿದಂತೆ ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಐಷಾರಾಮಿ ಹೊಟೇಲ್‌ಗಳ ಮಾಲೀಕತ್ವ ಹೊಂದಿದ್ದು, ಯಾವೆಲ್ಲಾ ಸೆಲೆಬ್ರಿಟಿಗಳು ಯಾವ ಹೊಟೇಲ್ ಮಾಲೀಕತ್ವವನ್ನು ಹೊಂದಿದ್ದಾರೆ ಎಂಬ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ. 

ಬಾದ್ಶಾ (ಬಾದಶಹ) ತುಂಬಾ ಬಡತನದಿಂದ ಬೆಳೆದು ಬಂದು ಶ್ರೀಮಂತನಾದ ಆದಿತ್ಯ ಪ್ರತೀಕ್ ಸಿಂಗ್ ಸಿಸೋದಿಯಾ ಆಲಿಯಾಸ್‌ ಬಾದ್ಶಾ  ಅವರು ಡ್ರ್ಯಾಗನ್ ಫ್ಲೈ ಎಕ್ಸ್‌ಪಿರಿಯನ್ಸ್‌ನ ಮಾಲೀಕತ್ವವನ್ನು ಹೊಂದಿದ್ದು, ಪಿಯೂಷ್ ಸುಖಿಜಾ ಅವರ ಸಹ ಮಾಲೀಕತ್ವದ ಲಾಂಜ್ ಬಾರ್  ಇದಾಗಿದೆ. 

ಜಾಕ್ವೇಲಿನ್ ಫರ್ನಾಂಡಿಸ್‌, ವಂಚಕ ಸುಕೇಶ್ ಚಂದ್ರಶೇಖರ್ ಜೊತೆಗಿನ ಒಡನಾಟದ ಕಾರಣಕ್ಕೆ ಸಾಕಷ್ಟು ಸುದ್ದಿಯಲ್ಲಿರುವ ಜಾಕ್ವೇಲಿನ್ ಫರ್ನಾಂಡಿಸ್ ಕೂಡ ಮುಂಬೈನ ಪಾಲಿ ಥಾಲಿಯಲ್ಲಿ ಬಹಳ ದುಬಾರಿ ಹಾಗೂ ಐಷಾರಾಮಿಯಾಗಿರುವ ಹೊಟೇಲೊಂದನ್ನು ಹೊಂದಿದ್ದಾರೆ. 

Tap to resize

ಶಿಲ್ಪಾ ಶೆಟ್ಟಿ, ಈ ಧಡ್ಕನ್ ನಟಿ ಮುಂಬೈನಲ್ಲಿ ಹೊಟೇಲ್‌ಗಳ ಸರಣಿ ಬಾಸ್ಟೈನ್ ಅನ್ನು ಹೊಂದಿದ್ದು, ಇದು ಬಹುತೇಕ ಬಾಲಿವುಡ್ ಸೆಲೆಬ್ರಿಟಿಗಳು ಓಡಾಡುವ , ಕಾಲ ಕಳೆಯುವ ಸಮಯವಾಗಿದೆ. ಇದರ ಜೊತೆಗೆ ಶಿಲ್ಪಾ ಚಂಕಿ ಪಾಂಡೆ ಜೊತೆ ಸೇರಿ ಬಿಂಗೆಯ ಸಹ ಮಾಲೀಕರಾಗಿದ್ದಾರೆ. 


ಕರಣ್ ಜೋಹರ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಕರಣ್ ಜೋಹರ್‌ ಮುಂಬೈನ ಕೊಲಬಾದಲ್ಲಿ ನ್ಯೂಮ ಎಂಬ ಐಷಾರಾಮಿ ಹೊಟೇಲ್‌ನ್ನು ಹೊಂದಿದ್ದು, ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. 

ಆಯೇಶಾ ಟಾಕಿಯಾ, ತಮ್ಮ ದೇಹದ ಬಗ್ಗೆ ಟ್ರೋಲ್ ಮಾಡಿದ ಟ್ರೋಲಿಗರಿಗೆ ಸರಿಯಾಗಿ ತಿರುಗೇಟು ನೀಡುವ ಮೂಲಕ ಇತ್ತೀಚೆಗೆ ಸುದ್ದಿಯಾಗಿದ್ದ ಆಯೇಶಾ ಟಾಕಿಯಾ ಕೂಡ  ತುಂಬಾ ಐಷಾರಾಮಿ ಹಾಗೂ ದುಬಾರಿಯಾದ ರೆಸ್ಟೋರೆಂಟ್ ಅನ್ನು ಹೊಂದಿದ್ದಾರೆ. ಕೆಫೆ ಬಸಿಲಿಕೊ ಹೆಸರಿನ ಈ ರೆಸ್ಟೋರೆಂಟ್‌ನ್ನು ಆಯೇಷಾ ತಮ್ಮ ಪತಿ ಫರ್ಹಾನ್ ಅಜ್ಮಿ ಜೊತೆ ಸೇರಿ ಆರಂಭಿಸಿದ್ದು, ಯುರೋಪಿಯನ್ ಸ್ಟೈಲ್‌ನ ಆಹಾರವನ್ನು ಒದಗಿಸುತ್ತದೆ. 

ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಅವರು ಒಬ್ಬರು ಸಕ್ರಿಯ ಮಹಿಳಾ ಉದ್ಯಮಿ, ಇಂಟಿರಿಯರ್ ಡಿಸೈನರ್‌ ಆಗಿ ಕಾರ್ಯ ನಿರ್ವಹಿಸುವ ಗೌರಿ ಖಾನ್ ಬಾಲಿವುಡ್ ಸೆಲೆಬ್ರಿಟಿಗಳಾದ ರಣ್‌ಬೀರ್‌ ಕಪೂರ್, ಅನನ್ಯಾ ಪಾಂಡೆ ಮುಂತಾದವರ ಮನೆಯನ್ನು  ಡಿಸೈನ್ ಮಾಡಿದ್ದು, ಇವರು ಇತ್ತಿಚೆಗಷ್ಟೇ ತಮ್ಮ ಹೊಸ ರೆಸ್ಟೋರೆಂಟ್‌ ತೋರಿ ಬಗ್ಗೆ ಘೋಷಿಸಿದ್ದರು. ಇದು ಏಷ್ಯನ್ ಆಹಾರಕ್ಕೆ ಪ್ರಸಿದ್ಧಿ ಪಡೆದಿದೆ. 

ಬಾಲಿವುಡ್ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಆಯೇಷಾ ಟಾಕಿಯಾ ಸೇರಿದಂತೆ ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಐಷಾರಾಮಿ ಹೊಟೇಲ್‌ಗಳ ಮಾಲೀಕತ್ವ ಹೊಂದಿದ್ದಾರೆ.

Latest Videos

click me!