Gold Price ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ಶೇ.24ರಷ್ಟು ಕುಸಿದಿದ್ದರೆ, ಭಾರತದಲ್ಲಿ ಕೇವಲ ಶೇ.20ರಷ್ಟು ಕಡಿಮೆಯಾಗಿದೆ. ಜನವರಿ 29ರ ಬೆಲೆಗೆ ಹೋಲಿಸಿದ್ರೆ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಶೇ.20ರಷ್ಟು ಮಾತ್ರ ಕಡಿಮೆಯಾಗಿದೆ.
ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿತವಾಗುತ್ತಿದೆ. ಶುಕ್ರವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಬೆಲೆಗಳು ಪ್ರತಿ ಔನ್ಸ್‌ಗೆ $4,068.71 ಕ್ಕೆ ಅಂತ್ಯಗೊಂಡಿವೆ. 29ನೇ ಜನವರಿ 2026ರ ಬೆಲೆ ಹೋಲಿಸಿದ್ರೆ ಶುಕ್ರವಾರದ ದರಕ್ಕೆ ಶೇ.24ರಷ್ಟು ಕಡಿಮೆಯಾಗಿದೆ. ಆದ್ರೆ ಭಾರತದಲ್ಲಿ ಮಾತ್ರ ಶೇ.20ರಷ್ಟು ಚಿನ್ನದ ಬೆಲೆ ಕುಸಿತಗೊಂಡಿದೆ.
25
ಭಾರತದಲ್ಲಿ ಶೇ.20ರಷ್ಟು ಕುಸಿತ
ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಪ್ರಕಾರ, ಜನವರಿ 29ರಂದ ದೇಶದಲ್ಲಿ ಚಿನ್ನದ ಬೆಲೆ 1,83,000 ರೂ.ಯ ಗರಿಷ್ಟಮಟ್ಟಕ್ಕೆ ತಲುಪಿತ್ತು. ಆದ್ರೆ ಧನ್‌ತರೇಸದ ವೇಳೆ ರಾಜಧಾನಿ ದೆಹಲಿಯ ಮಾರುಕಟ್ಟೆಯಲ್ಲಿ 99.9% ಶುದ್ಧ ಚಿನ್ನವು 10 ಗ್ರಾಂಗೆ ₹146,300 ಕ್ಕೆ ಮುಕ್ತಾಯಗೊಂಡಿದೆ. ಶುಕ್ರವಾರ ಮತ್ತು ಜನವರಿ 29ರ ಬೆಲೆಗೆ ಹೋಲಿಸಿದ್ರೆ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಶೇ.20ರಷ್ಟು ಮಾತ್ರ ಕಡಿಮೆಯಾಗಿದೆ.
35
ಶೇ.4ರಷ್ಟು ವ್ಯತ್ಯಾಸಕ್ಕೆ ಕಾರಣ ಏನು?
ಸರ್ಕಾರದ ತೆರಿಗೆ ನೀತಿ ಮತ್ತು ಕರೆನ್ಸಿ ಮಾರುಕಟ್ಟೆಯಲ್ಲಿನ ಬದಲಾವಣೆಯಿಂದಾಗಿ ಭಾರತದಲ್ಲಿ ಚಿನ್ನದ ಬೆಲೆ ಶೇ.4ರಷ್ಟು ವ್ಯತ್ಯಾಸವಾಗುತ್ತದೆ. ಭಾರತವು ಅತ್ಯಧಿಕವಾಗಿ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಈ ಕಾರಣದಿಂದಾಗಿ ದೇಶದಲ್ಲಿ ಚಿನ್ನದ ಬೆಲೆಗಳು ಅಂತರರಾಷ್ಟ್ರೀಯ ಚಿನ್ನದ ದರದ ಜೊತೆಗೆ ಎರಡು ಪ್ರಮುಖ ಅಂಶಗಳಿಂದ ನಿರ್ಧರಿಸಲ್ಪಡುತ್ತವೆ.
ಜನವರಿಯಲ್ಲಿ ಚಿನ್ನದ ಬೆಲೆ ಗರಿಷ್ಠ ಮಟ್ಟ ತಲುಪಿದ ಸಂದರ್ಭದಲ್ಲಿ ಸರ್ಕಾರ ಬಂಗಾರದ ಮೇಲೆ ಶೇ.6ರಷ್ಟು ತೆರಿಗೆ ವಿಧಿಸಿತ್ತು. ಮೇ 13ರಂದು ಈ ಆಮದು ಸುಂಕ ಶೇ.6 ರಿಂದ ಶೇ.15ಕ್ಕೇರಿಕೆಯಾಗಿತ್ತು. ಇದರಲ್ಲಿ ಇದರಲ್ಲಿ 10% ಮೂಲ ಕಸ್ಟಮ್ಸ್ ಸುಂಕ ಮತ್ತು 5% ಕೃಷಿ ಮೂಲಸೌಕರ್ಯ ಸೆಸ್ ಸೇರಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದ್ರೂ Import Tax ಹೆಚ್ಚಿರೋ ಕಾರಣ ವ್ಯತ್ಯಾಸವನ್ನು ಕಾಣಬಹುದು.
55
ಕಾರಣ 2: ರೂಪಾಯಿ ಮೌಲ್ಯ
ಚಿನ್ನದ ಬೆಲೆಯನ್ನು ಡಾಲರ್ ರೂಪದಲ್ಲಿ ನಿಗಧಿಪಡಿಸಲಾಗುತ್ತದೆ. ರೂಪಾಯಿ ಮೌಲ್ಯ ದುರ್ಬಲಗೊಂಡ್ರೆ ಜಾಗತಿಕ ಮಾರುಕಟ್ಟೆಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ ಸ್ಥಳೀಯವಾಗಿ ಚಿನ್ನದ ಬೆಲೆ ಏರಿಕೆಯಾಗುತ್ತದೆ. ಜನವರಿ 29ರಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 92ರ ಆಸುಪಾಸನಲ್ಲಿತ್ತು.
ಇದು ಇದುವರೆಗಿನ ಅತ್ಯಂತ ಕಡಿಮೆ ಮಟ್ಟವಾಗಿತ್ತು. ರೂಪಾಯಿ ಮೌಲ್ಯ ಕುಸಿತವಾದ್ರೆ ಹೆಚ್ಚಿನ ಡಾಲರ್ ನೀಡಿ ಚಿನ್ನ ಖರೀದಿಸಬೇಕಾಗುತ್ತದೆ. ಹಾಗಾಗಿ ಜಾಗತಿಕ ಮತ್ತು ಭಾರತದ ಮಾರುಕಟ್ಟೆ ನಡುವೆ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಕಾಣಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.