ಇದು ಭಾರತದ 'ಮುತ್ತಿನ ನಗರಿ' ಎಂದು ಪ್ರಸಿದ್ಧವಾಗಿದೆ. ಪರ್ಷಿಯನ್ ಕೊಲ್ಲಿಯಿಂದ ಮುತ್ತುಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಇದು ಮುತ್ತಿನ ವ್ಯಾಪಾರದ ಪ್ರಮುಖ ಕೇಂದ್ರವಾಯಿತು. ಈ ನಗರ ಬೆಂಗಳೂರಿನಿಂದ 10 ಗಂಟೆಯ ದೂರದಲ್ಲಿದೆ. ಈ ನಗರಕ್ಕೆ ನೀವು ಬಸ್, ರೈಲು ಮತ್ತು ವಿಮಾನದ ಮೂಲಕ ಹೋಗಬಹುದಾಗಿದೆ .
ಹೈದರಾಬಾದ್ ಅನ್ನು 'ಮುತ್ತಿನ ನಗರಿ' (City of Pearls) ಎಂದೇ ಕರೆಯುತ್ತಾರೆ. ದೇಶ-ವಿದೇಶಗಳಿಂದ ಜನರು ಇಲ್ಲಿಗೆ ಬಂದು ಮುತ್ತುಗಳನ್ನು ಖರೀದಿಸುತ್ತಾರೆ. ಹಾಗಾದರೆ, ಹೈದರಾಬಾದ್‌ನಲ್ಲಿ ಅಗ್ಗದ ಬೆಲೆಗೆ ಒಳ್ಳೆಯ ಮುತ್ತುಗಳು ಎಲ್ಲಿ ಸಿಗುತ್ತವೆ? ಮುತ್ತುಗಳಿಗೆ ಹೈದರಾಬಾದ್ ಹೇಗೆ ಪ್ರಸಿದ್ಧವಾಯಿತು? ಈ ವಿವರಗಳನ್ನು ಈಗ ನೋಡೋಣ.
25
ಹೈದರಾಬಾದ್ ಮುತ್ತುಗಳಿಗೆ ಹೇಗೆ ಫೇಮಸ್?
ಮುತ್ತುಗಳು ಸಮುದ್ರದಲ್ಲಿ ಸಿಗುತ್ತವೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಹೈದರಾಬಾದ್ ಬಳಿ ಸಮುದ್ರವೇ ಇಲ್ಲ. ಹಾಗಿದ್ದ ಮೇಲೆ ಹೈದರಾಬಾದ್ ಮುತ್ತುಗಳಿಗೆ ಹೇಗೆ ಪ್ರಸಿದ್ಧವಾಯಿತು? ಇದರ ಹಿಂದೆ ಒಂದು ದೊಡ್ಡ ಕಾರಣವಿದೆ. ನಿಜಾಮರ ಆಳ್ವಿಕೆಯ ಕಾಲದಲ್ಲಿ, ಪರ್ಷಿಯನ್ ಕೊಲ್ಲಿಯಿಂದ ಅಸಲಿ ಮುತ್ತುಗಳನ್ನು ಆಮದು ಮಾಡಿಕೊಂಡು ಹೈದರಾಬಾದ್‌ನಲ್ಲಿ ವ್ಯಾಪಾರ ಮಾಡುತ್ತಿದ್ದರು.
35
ಮುತ್ತಿನ ವ್ಯಾಪಾರದ ಪ್ರಮುಖ ಕೇಂದ್ರ
ಇಲ್ಲಿಯ ವ್ಯಾಪಾರ ಯಶಸ್ವಿಯಾದ ಕಾರಣ, ಹೈದರಾಬಾದ್ ನಗರ ಮುತ್ತಿನ ವ್ಯಾಪಾರದ ಪ್ರಮುಖ ಕೇಂದ್ರವಾಯಿತು. ನಿಜಾಮರ ಕುಟುಂಬ ಮತ್ತು ರಾಜಮನೆತನದವರು ಆಭರಣಗಳನ್ನು ಬಹಳ ಇಷ್ಟಪಡುತ್ತಿದ್ದರು. ಅವರು ಹೆಚ್ಚಾಗಿ ಮುತ್ತಿನ ಹಾರಗಳನ್ನೇ ಖರೀದಿಸುತ್ತಿದ್ದರು. ಇದರಿಂದಾಗಿ ಇಲ್ಲಿ ವ್ಯಾಪಾರ ಮತ್ತಷ್ಟು ವಿಸ್ತರಿಸಿತು. ಅಂದಿನಿಂದ ಮುತ್ತುಗಳ ತಯಾರಿಕೆ, ಪಾಲಿಶ್ ಮತ್ತು ಮುತ್ತಿನ ಆಭರಣಗಳ ವಿನ್ಯಾಸದಲ್ಲಿ ಹೈದರಾಬಾದ್ ವಿಶೇಷ ಮನ್ನಣೆ ಗಳಿಸಿತು.
ನಮ್ಮ ದೇಶದ ಹಲವು ನಗರಗಳಲ್ಲಿ ಮುತ್ತುಗಳು ಸಿಗುತ್ತವೆ. ಆದರೆ, ಹೈದರಾಬಾದ್‌ನಲ್ಲೇ ಯಾಕೆ ಕಡಿಮೆ ಬೆಲೆಗೆ ಸಿಗುತ್ತವೆ ಗೊತ್ತಾ? ಇದಕ್ಕೆ ಹಲವು ಕಾರಣಗಳಿವೆ. ಹೈದರಾಬಾದ್ ನಗರದಲ್ಲಿ ಮುತ್ತಿನ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಷ್ಟೇ ಅಲ್ಲ, ಹೋಲ್‌ಸೇಲ್ ಮಾರುಕಟ್ಟೆಗಳೂ ಇಲ್ಲಿ ಹೆಚ್ಚಾಗಿವೆ. ವಿಭಿನ್ನ ಶೈಲಿ ಮತ್ತು ರೂಪಗಳಲ್ಲಿ ಮುತ್ತುಗಳು ಲಭ್ಯವಿವೆ. ಅದಕ್ಕಾಗಿಯೇ ಇಲ್ಲಿ ನಮಗೆ ಕಡಿಮೆ ಬೆಲೆಗೆ ಮುತ್ತುಗಳು ಸಿಗುತ್ತವೆ.
55
ಇಲ್ಲಿ ಯಾವ ಬಗೆಯ ಮುತ್ತುಗಳು ಸಿಗುತ್ತವೆ?
ಹೈದರಾಬಾದ್‌ನಲ್ಲಿ ಸಿಹಿನೀರಿನ ಮುತ್ತುಗಳು, ಅಕೋಯಾ ಮುತ್ತುಗಳು, ದಕ್ಷಿಣ ಸಮುದ್ರದ ಮುತ್ತುಗಳು, ತಾಹಿತಿ ಮುತ್ತುಗಳು ಮತ್ತು ಕೃಷಿ ಮಾಡಿದ ಮುತ್ತುಗಳು ಸಿಗುತ್ತವೆ. ಈ ಮುತ್ತುಗಳೆಲ್ಲವೂ ನಮಗೆ ಲಾಡ್ ಬಜಾರ್, ಚಾರ್ಮಿನಾರ್‌ನಂತಹ ಪ್ರದೇಶಗಳಲ್ಲಿ ಸುಲಭವಾಗಿ ಸಿಗುತ್ತವೆ. ಚಿಕ್ಕ ಇಯರಿಂಗ್ಸ್‌ನಿಂದ ಹಿಡಿದು ದೊಡ್ಡ ದೊಡ್ಡ ಹಾರಗಳವರೆಗೆ ಇಲ್ಲಿ ಸಿಗುತ್ತವೆ. ಆದರೆ, ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಎಲ್ಲೆಂದರಲ್ಲಿ ಖರೀದಿಸಬಾರದು. ಯಾಕೆಂದರೆ, ಮೋಸ ಮಾಡುವವರೂ ಹೆಚ್ಚಾಗಿರುತ್ತಾರೆ. ಹಾಗಾಗಿ, ಎಚ್ಚರಿಕೆಯಿಂದ ನೋಡಿ, ಹೆಸರುವಾಸಿ ಅಂಗಡಿಗಳಲ್ಲಿ ಮಾತ್ರ ಖರೀದಿಸುವುದು ಉತ್ತಮ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.