ಬೆಲೆ ಇಳಿಕೆಯಾಗಿರೋ ಇಂದು ಎಷ್ಟಿದೆ ಚಿನ್ನ-ಬೆಳ್ಳಿ ದರ? ಸುವರ್ಣವಕಾಶ ಮಿಸ್ ಮಾಡ್ಕೊಂಡು ನಿರಾಶರಾಗಬೇಡಿ

Published : Feb 10, 2025, 08:32 AM IST

ಚಿನ್ನ ಖರೀದಿಸಲು ಯೋಜಿಸುತ್ತಿರುವವರಿಗೆ ಇಂದು ಸುವರ್ಣಾವಕಾಶ. 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಇಂದಿನ ದರಗಳನ್ನು ತಿಳಿದುಕೊಳ್ಳಿ.

PREV
18
ಬೆಲೆ ಇಳಿಕೆಯಾಗಿರೋ ಇಂದು ಎಷ್ಟಿದೆ ಚಿನ್ನ-ಬೆಳ್ಳಿ ದರ? ಸುವರ್ಣವಕಾಶ ಮಿಸ್ ಮಾಡ್ಕೊಂಡು ನಿರಾಶರಾಗಬೇಡಿ

ಮಹಿಳೆಯರಿಗೆ ಚಿನ್ನ ಅನ್ನೋದು ಸೆಂಟಿಮೆಂಟ್. ಚಿನ್ನ ಖರೀದಿಸಿಕೊಳ್ಳಲು ಪ್ರತಿದಿನ ಹಂತ ಹಂತವಾಗಿ ಹಣ ಜಮೆ ಮಾಡುತ್ತಿರುತ್ತಾರೆ. ಒಂದು ದೊಡ್ಡ ಮೊತ್ತವಾದ ಕೂಡಲೇ ಚಿನ್ನ ಖರೀದಿಸಿ ಸಂಭ್ರಮಿಸುತ್ತಾರೆ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 

28

ಇತ್ತೀಚೆಗಷ್ಟೆ ಹೂಡಿಕೆದಾರರ ಮೊದಲ ಆಯ್ಕೆ ಚಿನ್ನವಾಗಿದೆ. ಮತ್ತೊಂದೆಡೆ ಮದುವೆ ಸೀಸನ್ ಆರಂಭಗೊಂಡಿದ್ದು, ಚಿನ್ನ ಖರೀದಿಸಲು ಜನರು ಬೆಲೆ ಇಳಿಕೆಯಾಗೋದನ್ನೇ ಕಾಯುತ್ತಿರುತ್ತಾರೆ. ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿನಿತ್ಯ ವ್ಯತ್ಯಾಸ ಆಗುತ್ತಿರುತ್ತದೆ. ಬೆಲೆ ಇಳಿಕೆಯಾಗಿರೋ ಇಂದು ಚಿನ್ನದ ದರ ಎಷ್ಟಿದೆ ಎಂದು ನೋಡೋಣ ಬನ್ನಿ 

38

ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,944 ರೂಪಾಯಿ 
8 ಗ್ರಾಂ: 63,552 ರೂಪಾಯಿ
10 ಗ್ರಾಂ: 79,440 ರೂಪಾಯಿ
100 ಗ್ರಾಂ: 7,94,400 ರೂಪಾಯಿ

48

ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ  
1 ಗ್ರಾಂ: 8,666 ರೂಪಾಯಿ
8 ಗ್ರಾಂ: 69,328 ರೂಪಾಯಿ
10 ಗ್ರಾಂ: 86,660 ರೂಪಾಯಿ
100 ಗ್ರಾಂ:  8,66,600 ರೂಪಾಯಿ 

58

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 79,440 ರೂಪಾಯಿ,  ಮುಂಬೈ: 79,440 ರೂಪಾಯಿ, ದೆಹಲಿ: 79,590 ರೂಪಾಯಿ, ಕೋಲ್ಕತ್ತಾ: 79,440 ರೂಪಾಯಿ,  ಬೆಂಗಳೂರು: 79,440 ರೂಪಾಯಿ,  ಹೈದರಾಬಾದ್: 79,440 ರೂಪಾಯಿ ಮತ್ತು ಪುಣೆ: 79,440 ರೂಪಾಯಿ
 

68

ಬೆಳ್ಳಿ ಬೆಲೆ 
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.
10 ಗ್ರಾಂ: 994 ರೂಪಾಯಿ
100 ಗ್ರಾಂ:  9,940 ರೂಪಾಯಿ
1000  ಗ್ರಾಂ: 99,400 ರೂಪಾಯಿ 

78

ಇಂದು ಎಷ್ಟು ಇಳಿಕೆ?
ಇಂದು 22 ಕ್ಯಾರಟ್ ಮತ್ತು 24 ಕ್ಯಾರಟ್ 10 ಗ್ರಾಂ ಚಿನ್ನದ ಮೇಲೆ 10 ರೂಪಾಯಿಗಳಷ್ಟು ಇಳಿಕೆಯಾಗಿದೆ. ಭಾನುವಾರ ಚಿನ್ನದ ಬೆಲೆ ಸ್ಥಿರವಾಗಿತ್ತು. ಚಿನ್ನದ ಜೊತೆಯಲ್ಲಿಯೂ ಬೆಳ್ಳಿ ದರವೂ ಕಡಿಮೆಯಾಗಿದೆ.  1 ಕೆಜಿ ಬೆಳ್ಳಿ ಬೆಲೆಯಲ್ಲಿ 100 ರೂ.ಗಳಷ್ಟು ಕಡಿಮೆಯಾಗಿದೆ. 
 

88

ಅನೇಕರು ಮದುವೆ ಮುಂಜಿಗಳಿಗೆ ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ಖರೀದಿಸುತ್ತಾರೆ. ಆಭರಣದ ಬದಲು ಚಿನ್ನದ ಬಿಸ್ಕೆಟ್‌, ಚಿನ್ನದ ಬಾಂಡ್ ಖರೀದಿಸಿದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ ಇದೂ ಎಂದಿಗೂ ಸೆಕೆಂಡ್ ಹ್ಯಾಂಡ್ ಆಗುವುದಿಲ್ಲ.

Read more Photos on
click me!

Recommended Stories