ವಿಐ ಆಫರ್‌ಗೆ ಮಂಕಾದ ಜಿಯೋ, ಏರ್‌ಟೆಲ್, ಕೇವಲ 95 ರೂ.ಗೆ ಒಟಿಟಿ ಸಬ್‌ಸ್ಕ್ರಿಪ್ಶನ್ ಪ್ಲಾನ್!

First Published | Nov 6, 2024, 3:25 PM IST

ಜಿಯೋ ಹಾಗೂ ಏರ್‌ಟೆಲ್‌ಗೆ ಪೈಪೋಟಿ ನೀಡಲು ಇದೀಗ ವೋಡಾಫೋನ್ ಐಡಿಯಾ ಭರ್ಜರಿಯಾಗಿ ಎಂಟ್ರಿಕೊಟ್ಟಿದೆ. ಇದೀಗ ಉಚಿತ ಒಟಿಟಿ ಸಬ್‌ಸ್ಕ್ರಿಪ್ಶನ್ ಪ್ಲಾನ್ ಘೋಷಿಸಿದೆ. ವಿಶೇಷ ಕೇವಲ 95 ರೂಪಾಯಿಯಿಂದ ಈ ರೀಚಾರ್ಜ್ ಪ್ಲಾನ್ ಆರಂಭಗೊಳ್ಳುತ್ತಿದೆ.  

Vi ಉಚಿತ OTT ಪ್ಲಾನ್‌ಗಳು

ಪ್ರತ್ಯೇಕ OTT ಸಬ್‌ಸ್ಕ್ರಿಪ್ಶನ್‌ಗಳಿಗೆ ಹಣ ಖರ್ಚು ಮಾಡುವ ಬದಲು, ಉಚಿತ OTT ಸಬ್‌ಸ್ಕ್ರಿಪ್ಶನ್ ನೀಡುವ ರೀಚಾರ್ಜ್ ಪ್ಲಾನ್‌ಗಳನ್ನು ಪಡೆಯಬಹುದು. ಜಿಯೋ, ಏರ್‌ಟೆಲ್ ಜೊತೆಗೆ Vi ಕೂಡ ಇಂತಹ ಪ್ಲಾನ್‌ಗಳನ್ನು ನೀಡುತ್ತಿದೆ. ವಿಶೇಷ ಅಂದರೆ ವಿಐ ಒಟಿಟಿ ಸಬ್‌ಸ್ಕ್ರಿಪ್ಶನ್ ಪ್ಲಾನ್ ಕೇವಲ 95 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಇಷ್ಟೇ ಅಲ್ಲ 200 ರೂಪಾಯಿ ಒಳಗೆ ವೋಡಾಫೋನ್ ಐಡಿಯಾ ಹಲವು ಪ್ಲಾನ್ ನೀಡಿದೆ.

Vi 95 OTT ಪ್ಲಾನ್

ವೋಡಾಫೋನ್ ಐಡಿಯಾ ಪ್ರತಿಸ್ಪರ್ಧಿಗಳಿಗೆ ಠಕ್ಕರ್ ನೀಡಲು ವೋಡಾಫೋನ್ ಐಡಿಯಾ ಹೊಸ ಪ್ಲಾನ್ ಘೋಷಿಸಿದೆ. ಒಟಿಟಿ ಸಬ್‌ಸ್ಕ್ರಿಪ್ಶನ್ ಹೆಚ್ಚಾಗುತ್ತಿರುವ ಕಾರಣ ಇದೀಗ ವಿಐ ಕೇವಲ 95 ರೂಪಾಯಿಯಿಂದ ಆರಂಭಗೊಳ್ಳತ್ತಿರುವ ಒಟಿಟಿ ಪ್ಲಾನ್ ನೀಡಿದೆ. 95 ರೂಪಾಯಿ ರೀಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಂಡರೆ 14 ದಿನ ವ್ಯಾಲಿಡಿಟಿ ಸಿಗಲಿದೆ. ಈ ಪ್ಲಾನ್‌ನಲ್ಲಿ 28 ದಿನಗಳವರೆಗೆ ಸೋಲಿ ಲೈವ್ ಸಬ್‌ಸ್ಕ್ರಿಪ್ಶನ್ ಹಾಗೂ 4ಜಿಬಿ ಹೆಚ್ಚುವರಿ ಡೇಟಾ ನೀಡಲಾಗುತ್ತದೆ.  

Tap to resize

Vi 151 OTT ಪ್ಲಾನ್

ವೋಡಾಫೋನ್ ಐಡಿಯಾ ಕಡಿಮೆ ಬೆಲೆಯ ಒಟಿಟಿ ರೀಚಾರ್ಜ್ ಪ್ಲಾನ್ ಪೈಕಿ 151 ರೂಪಾಯಿ ಪ್ಲಾನ್‌ನಲ್ಲಿ 30 ದಿನಗಳ ವ್ಯಾಲಿಟಿಡಿ ಸಿಗಲಿಗೆ. ಇನ್ನು 4 ಜಜಿಬಿ ಹೆಚ್ಚುವರಿ ಡೇಟಾ, 3 ತಿಂಗಳ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಶನ್ ಉಚಿತವಾಗಿ ಸಿಗಲಿದೆ.  

Vi 154 OTT ಪ್ಲಾನ್

154 ರೂಪಾಯಿ ಪ್ಲಾನ್ ಆಯ್ಕೆ ಮಾಡಿಕೊಂಡರೆ 1 ತಿಂಗಳಿಗೆ 2GB ಡೇಟಾ, Vi Movies & TV ಲೈಟ್ ಮತ್ತು ZEE5, SonyLIV, SunNXT ಸೇರಿದಂತೆ 15ಕ್ಕೂ ಹೆಚ್ಚು OTT ಪ್ಲಾಟ್‌ಫಾರ್ಮ್‌ಗಳ ಉಚಿತ ಸಬ್‌ಸ್ಕ್ರಿಪ್ಶನ್ ಲಭ್ಯವಾಗಲಿದೆ. ಇದರಿಂದ ಬಳಕೆದಾರರು ಯಾವುದೇ ಅಡೇ ತಡೆ ಇಲ್ಲದೆ ಹಾಗೂ ದುಬಾರಿ ಮೊತ್ತ ಪಾವತಿಸದೆ ಒಟಿಟಿ ಪ್ಲಾಟ್‌ಫಾರ್ಮ್ ವೀಕ್ಷಿಸಲು ಸಾಧ್ಯವಿದೆ. 

Vi 169 OTT ಪ್ಲಾನ್

ವೋಡಾಫೋನ್ ಜಾರಿ ಮಾಡಿದ ಕೈಗೆಟುಕುವ ದರ ಪ್ಲಾನ್ ಪೈಕಿ 169 ರೂಪಾಯಿ ಪ್ಲಾನ್ ಕೂಡ ಒಂದು ಇದರಲ್ಲಿ 3 ತಿಂಗಳ Disney+ Hotstar ಸಬ್‌ಸ್ಕ್ರಿಪ್ಶನ್ ಹಾಗೂ 30 ದಿನಗಳ ವ್ಯಾಲಿಡಿಟಿ ಸಿಗಲಿದೆ. ಜೊತೆಗೆ 4GB ಹೆಚ್ಚುವರಿ ಡೇಟಾ ಪಡೆಯಲು ಈ ಪ್ಲಾನ್ ರೀಚಾರ್ಜ್ ಮಾಡಿದರೆ ಸಾಕು. 

Vi 175 OTT ಪ್ಲಾನ್

24 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್‌ನಲ್ಲಿ 10 GB ಹೆಚ್ಚುವರಿ ಡೇಟಾ, Vi Movies & TV ಮತ್ತು ZEE5, SonyLIV, Fancode ಸೇರಿದಂತೆ 13 + OTT ಪ್ಲಾಟ್‌ಫಾರ್ಮ್‌ಗಳ ಉಚಿತ ಸಬ್‌ಸ್ಕ್ರಿಪ್ಶನ್ ಸಿಗುತ್ತದೆ. 175 ರೂಪಾಯಿ ಪ್ಲಾನ್ ಆಯ್ಕೆ ಮಾಡಿಕೊಂಡರೆ ಈ ಸೌಲಭ್ಯಗಳು ಸಿಗಲಿದೆ. 

Latest Videos

click me!