ಬ್ಯಾಂಕ್ ಖಾತೆಯಲ್ಲಿ ಮಿನಿಮನ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ಕಟ್ಟಬೇಕಾ? ಇಲ್ಲಿದೆ RBI ನಿಯಮ!

First Published | Nov 5, 2024, 3:11 PM IST

ಬ್ಯಾಂಕ್ ಅಕೌಂಟ್‌ಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಟ್ಟುಕೊಳ್ಳದಿದ್ದರೆ ಬ್ಯಾಂಕುಗಳು ದಂಡ ವಿಧಿಸುತ್ತವೆ. ಆದರೆ ಕಳೆದ ವರ್ಷ ಎಲ್ಲಾ ಬ್ಯಾಂಕುಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಟ್ಟುಕೊಳ್ಳದವರಿಂದ ಸುಮಾರು 5,500 ಕೋಟಿ ರೂ ವಸೂಲು ಮಾಡಲಾಗಿದೆ. ಹಾಗಾದರೆ ಆರ್‌ಬಿಐ ನಿಯಮ ಹೇಳುವುದೇನು? ಖಾತೆಯಲ್ಲಿ ಕನಿಷ್ಠ ದುಡ್ಡು ಇಲ್ಲದಿದ್ದರೆ ದಂಡ ವಿಧಿಸುವ ಅಧಿಕಾರ ಬ್ಯಾಂಕ್‌ಗೆ ಇದೆಯಾ? 

ಎಲ್ಲರಿಗೂ ಬ್ಯಾಂಕ್ ಖಾತೆಗಳಿವೆ. ಆದರೆ ಆಯಾ ಬ್ಯಾಂಕುಗಳು ಹಾಕುವ ರೂಲ್ಸ್ ಬಗ್ಗೆ ಬಹುತೇಕರಿಗೆ ತಿಳಿದಿರುವುದಿಲ್ಲ. ಎಸ್ಎಂಎಸ್ ಚಾರ್ಜಸ್, ಸೇವೆ ಬಳಸಿದ್ದಕ್ಕೆ ಚಾರ್ಜಸ್ ಸೇರಿದಂತೆ ಹಲವು ಬಾರಿ ಒಂದುಷ್ಟ ದುಡ್ಡನ್ನು ನಮ್ಮ ಖಾತೆಯಿಂದ ಬ್ಯಾಂಕ್ ಕಡಿತ ಮಾಡುತ್ತದೆ. ಇದರ ಜೊತೆಗೆ ಮಿನಿಮಮ್ ಬ್ಯಾಲೆನ್ಸ್ ಇಲ್ಲಾ ಎಂದು ದಂಡ ವಿಧಿಸುತ್ತಾರೆ.  ಕಳದ ವರ್ಷ ಭಾರತದಲ್ಲಿನ ಎಲ್ಲಾ ಬ್ಯಾಂಕ್‌ಗಳು ಹೀಗೆ ವಿನಿಮಮ್ ಬ್ಯಾಲೆನ್ಸ್ ಇಟ್ಟಿಲ್ಲದವರಿಂದ ಬರೋಬ್ಬರಿ 5500 ಕೋಟಿ ರೂಪಾಯಿ ವಸೂಲಿ ಮಾಡಿದೆ. RBI ಹಾಕಿರುವ ಮಿನಿಮಮ್ ಬ್ಯಾಲೆನ್ಸ್ ರೂಲ್ಸ್ ತಿಳಿದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ನಿಮ್ಮ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ನೀವು ಸ್ವಲ್ಪ ದಂಡ ಕಟ್ಟಬೇಕು. ಆದರೆ ಎಷ್ಟು ಅನ್ನೋದು ಗೊತ್ತಿರಬೇಕು.

ಬ್ಯಾಂಕ್ ರೂಲ್ಸ್ ತಿಳಿದುಕೊಳ್ಳುವುದು ಗ್ರಾಹಕರ ಜವಾಬ್ದಾರಿ. ಎಲ್ಲಿ ಎಷ್ಟು ಕಟ್ಟಬೇಕು ಅಂತ ಗೊತ್ತಿರಬೇಕು. ಈಗ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಬಗ್ಗೆ RBI ರೂಲ್ಸ್ ಹಾಕಿದೆ. ದಂಡ 400 ರಿಂದ 500 ರೂ. ವರೆಗೆ ಇರುತ್ತದೆ. ಹಣವಿಲ್ಲದಿದ್ದಾಗ ಬ್ಯಾಂಕ್ ದಂಡ ಹಾಕಿದರೆ ನಿಮ್ಮ ಬ್ಯಾಲೆನ್ಸ್ ಮೈನಸ್ ಆಗುತ್ತದೆ.

Tap to resize

RBI ರೂಲ್ಸ್ ಪ್ರಕಾರ ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ಬ್ಯಾಂಕ್ ದಂಡ ಹಾಕಬಹುದು. ಆದರೆ ಆ ದಂಡದಿಂದ ನಿಮ್ಮ ಖಾತೆ ಬ್ಯಾಲೆನ್ಸ್ ಮೈನಸ್ ಆಗದಂತೆ ನೋಡಿಕೊಳ್ಳುವುದು ಬ್ಯಾಂಕುಗಳ ಜವಾಬ್ದಾರಿ. ಮಿನಿಮಮ್ ಬ್ಯಾಲೆನ್ಸ್ ಇಲ್ಲದವರನ್ನು ಬ್ಯಾಂಕುಗಳು ಎಚ್ಚರಿಸಬೇಕು.

RBI ಹೊಸ ಸರ್ಕ್ಯುಲರ್ ಪ್ರಕಾರ ಗ್ರಾಹಕರ ತೊಂದರೆ, ಅಜಾಗರೂಕತೆಯಿಂದ ಬ್ಯಾಂಕುಗಳು ದಂಡ ವಸೂಲು ಮಾಡಬಾರದು. ಮಿನಿಮಮ್ ಬ್ಯಾಲೆನ್ಸ್‌ಗಿಂತ ಕಡಿಮೆಯಿದ್ದರೆ ಬ್ಯಾಂಕುಗಳು ತಕ್ಷಣ ಗ್ರಾಹಕರಿಗೆ ತಿಳಿಸಬೇಕು. ದಂಡದ ಬಗ್ಗೆ ಮೊದಲೇ ತಿಳಿಸಬೇಕು.

ನೀವು ಯಾವುದೇ ಬ್ಯಾಂಕಿನಲ್ಲಿ ಸೇವಿಂಗ್ಸ್ ಖಾತೆ ತೆರೆದರೆ ಕೆಲವು ಬ್ಯಾಂಕುಗಳು ಮಿನಿಮಮ್ ಬ್ಯಾಲೆನ್ಸ್ ಮಿತಿ ಹಾಕಿಕೊಳ್ಳುತ್ತವೆ. ನಿಮ್ಮ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್‌ಗಿಂತ ಕಡಿಮೆ ಇದ್ದರೆ ನೀವು ದಂಡ ಕಟ್ಟಬೇಕು. ಆದರೆ ಬ್ಯಾಲೆನ್ಸ್ ಸೊನ್ನೆ ಆದರೆ RBI ರೂಲ್ಸ್ ಪ್ರಕಾರ ದಂಡ ಹಾಕಬಾರದು.

Latest Videos

click me!