ಮಲ್ಟಿಬ್ಯಾಗರ್ ಸ್ಟಾಕ್ ಕೇವಲ 2 ವರ್ಷಗಳಲ್ಲಿ ಹೂಡಿಕೆದಾರರಿಗೆ 900% ರಷ್ಟು ಲಾಭ ನೀಡಿದೆ. ಸೆಂಟ್ರಲ್ ಗುಜರಾತ್ ವಿಜ್ ಕಂಪನಿಯಿಂದ 265 ಕೋಟಿ ರೂಪಾಯಿ ಮೌಲ್ಯದ ಬೃಹತ್ ಪ್ರಾಜೆಕ್ಟ್ ಪಡೆದ ನಂತರ ಕಂಪನಿಯ ಷೇರುಗಳ ಮೌಲ್ಯ ನಿರಂತರವಾಗಿ ಏರಿಕೆಯಾಗುತ್ತಿದೆ.
ಮಲ್ಟಿಬ್ಯಾಗರ್ ಸ್ಟಾಕ್‌ಗಳು ಹೂಡಿಕೆದಾರರಿಗೆ ಒಳ್ಳೆಯ ರಿಟರ್ನ್ ನೀಡುತ್ತವೆ. ಇದೀಗ ಷೇರು ಮಾರುಕಟ್ಟೆಯಲ್ಲಿ ಕಂಪನಿಯೊಂದು ಹೂಡಿಕೆದಾರರಿಗೆ ಕೇವಲ 2 ವರ್ಷದಲ್ಲಿ ಬರೋಬ್ಬರಿ 900% ರಷ್ಟು ರಿಟರ್ನ್ ನೀಡಿವೆ. ಸೆಪ್ಟೆಂಬರ್ 19ರಂದು ಬಿಎಸ್ಇಯಲ್ಲಿ ಶೇ.5ರಷ್ಟು ಏರಿಕೆ ಕಂಡು ಬಂದಿತ್ತು. ಅಂತಿಮ ದಿನದ ವಹಿವಾಟು ಅಂತ್ಯಕ್ಕೆ ಷೇರು ಬೆಲೆ 1,458.85 ರೂಪಾಯಿಗೆ ತಲುಪಿತ್ತು.
25
ವಿವಿಯಾನಾ ಪವರ್ ಟೆಕ್ ಕಂಪನಿ
ವಿವಿಯಾನಾ ಪವರ್ ಟೆಕ್ ಕಂಪನಿ ತನ್ನ ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿದೆ. 2023ರಲ್ಲಿ ವಿವಿಯಾನಾ ಪವರ್ ಟೆಕ್ ಷೇರುಗಳ ಬೆಲೆ ಕೇವಲ 145 ರೂಪಾಯಿ ಅಗಿತ್ತು. ಎರಡು ವರ್ಷ ಶೇ.96ರಷ್ಟು ಲಾಭವನ್ನು ನೀಡಿದೆ. ವರ್ಷದಿಂದ ವರ್ಷಕ್ಕೆ ಲಾಭದ ಪ್ರಮಾಣ ಏರಿಕೆಯಾಗುವ ಮೂಲಕ ಹೂಡಿಕೆದಾರು ಹೆಚ್ಚಿನ ಲಾಭ ತಮ್ಮದಾಗಿಸಿಕೊಂಡಿದ್ದಾರೆ. 2024ರಲ್ಲಿ ಸುಮಾರು ಶೇ.485 ಮತ್ತು ಸದ್ಯದ ಹಣಕಾಸಿನ ವರ್ಷದಲ್ಲಿ ಶೇ.40 ರಷ್ಟು ಲಾಭ ನೀಡಿದೆ
35
ಸೆಂಟ್ರಲ್ ಗುಜರಾತ್‌ನ ವಿಜ್ ಕಂಪನಿ
ಸೆಂಟ್ರಲ್ ಗುಜರಾತ್‌ನ ವಿಜ್ ಕಂಪನಿ ಲಿಮಿಟೆಡ್‌ನಿಂದ ಪಡೆದ 265 ಕೋಟಿ ರೂಪಾಯಿ ಮೌಲ್ಯದ ಪ್ರಾಜೆಕ್ಟ್‌ನನ್ನಿ ವಿವಿಯಾನಾ ಪವರ್ ಟೆಕ್ ಕಂಪನಿ ಪಡೆದುಕೊಂಡಿದೆ. ಈ ಯೋಜನೆಯನ್ನು ಮುಂದಿನ 16 ತಿಂಗಳಲ್ಲಿ ಪೂರ್ಣಗೊಳಿಸಬೇಕಿದೆ. ಈ ಕಾರಣದಿಂದ ಷೇರುಗಳ ಮೌಲ್ಯ ಹೆಚ್ಚಳವಾಗಿದೆ ಎಂದು ವರದಿಯಾಗಿದೆ.
ಆಗಸ್ಟ್ 2025ರಲ್ಲಿ ₹1,000 ಕೋಟಿ (ಸುಮಾರು $1.2 ಬಿಲಿಯನ್) ಗಿಂತ ಹೆಚ್ಚಿನ ಕೆಲಸದ ಆದೇಶಗಳನ್ನು ಪಡೆದುಕೊಂಡಿದೆ ಎಂದು ಷೇರು ಮಾರುಕಟ್ಟೆಗೆ ವಿವಿಯಾನಾ ಪವರ್ ಟೆಕ್ ಕಂಪನಿ ಮಾಹಿತಿ ನೀಡಿತ್ತು. ಈ ಸಂದರ್ಭದಲ್ಲಿ ಕಂಪನಿಯ ಮಾರುಕಟ್ಟೆ ಬಂಡವಾಳೀಕರಣ ₹923 ಕೋಟಿ (ಸುಮಾರು $9.23 ಬಿಲಿಯನ್) ಆಗಿತ್ತು.
ಇದೇ ಅವಧಿಯಲ್ಲಿ ಗುಜರಾತ್ ಎನರ್ಜಿ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್‌ನಿಂದ ₹55.36 ಕೋಟಿ (ಸುಮಾರು $5.36 ಬಿಲಿಯನ್) ಮತ್ತು ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನಿಂದ ₹59 ಕೋಟಿ (ಸುಮಾರು $5.9 ಬಿಲಿಯನ್) ಆರ್ಡರ್ ಪಡೆದುಕೊಂಡಿರುವ ಮಾಹಿತಿಯನ್ನು ನೀಡಿತ್ತು. ಈ ಹಿನ್ನೆಲೆ ವಿವಿಯಾನಾ ಪವರ್ ಟೆಕ್ ಕಂಪನಿ ಷೇರುಗಳು ಮೌಲ್ಯ ನಿರಂತರವಾಗಿ ಏರಿಕೆಯಾಗುತ್ತಿದೆ.
Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯೂ ಸಹ ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಯಾವುದೇ ಹೂಡಿಕೆ ಮಾಡುವ ಮುನ್ನ ಆರ್ಥಿಕ/ಮಾರುಕಟ್ಟೆ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಓದುಗರು ಇದನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.