Bengaluru: ಬಾಗಿಲು ಮುಚ್ಚಿದ ವಿರಾಟ್ ಕೊಹ್ಲಿ ಪಾಲುದಾರಿಕೆಯ 'one8 Commune' ರೆಸ್ಟೋರೆಂಟ್

Published : Apr 21, 2026, 12:44 PM IST

ಬೆಂಗಳೂರಿನಲ್ಲಿದ್ದ ವಿರಾಟ್ ಕೊಹ್ಲಿ ಪಾಲುದಾರಿಕೆಯ 'ಒನ್8 ಕಮ್ಯೂನ್' ರೆಸ್ಟೋರೆಂಟ್ ಬಾಗಿಲು ಮುಚ್ಚಿದೆ. ಬಿಬಿಎಂಪಿ ನೋಟಿಸ್, ಕೊಹ್ಲಿ ಬ್ರ್ಯಾಂಡ್ ಹೆಸರು ಹಿಂಪಡೆದಿದ್ದು, ವ್ಯಾಪಾರ ಕುಸಿತ ಮತ್ತು ಬಾಡಿಗೆ ವಿವಾದವೇ ಈ ಸ್ಥಿತಿಗೆ ಕಾರಣವಾಗಿದೆ. ಸದ್ಯ ರೆಸ್ಟೋರೆಂಟ್ ಭವಿಷ್ಯ ಅತಂತ್ರವಾಗಿದೆ.

PREV
15
ಒನ್8 ಕಮ್ಯೂನ್

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪದಲ್ಲೇ ಅದ್ದೂರಿಯಾಗಿ ಆರಂಭವಾಗಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಪಾಲುದಾರಿಕೆಯ 'ಒನ್8 ಕಮ್ಯೂನ್' (one8 Commune) ರೆಸ್ಟೋರೆಂಟ್ ಈಗ ಬಾಗಿಲು ಮುಚ್ಚಿದೆ.

25
ಒನ್8 ಕಮ್ಯೂನ್ ರೆಸ್ಟೋರೆಂಟ್‌

ಕಳೆದ ವರ್ಷ ಒನ್8 ಕಮ್ಯೂನ್ ರೆಸ್ಟೋರೆಂಟ್‌ಗೆ ಅಗ್ನಿ ಸುರಕ್ಷತಾ ನಿಯಮಗಳ ಉಲ್ಲಂಘನೆಗಾಗಿ ಬಿಬಿಎಂಪಿ (BBMP) ನೋಟಿಸ್ ನೀಡಿತ್ತು. ಈ ಘಟನೆಯಿಂದ ಅಸಮಾಧಾನಗೊಂಡ ಕಿಂಗ್ ಕೊಹ್ಲಿ, ತಮ್ಮ ಹೆಸರಿಗೆ ಮುಜುಗರವಾಗುತ್ತಿದೆ ಎಂದು ರೆಸ್ಟೋರೆಂಟ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರು ಎಂದು ಹೇಳಲಾಗುತ್ತಿದೆ.

35
ಹೆಸರು ಬದಲಾವಣೆ ಬಳಿಕ ಕುಸಿದ ವ್ಯಾಪಾರ

ನೋಟಿಸ್ ಬಳಿಕ ತಕ್ಷಣವೇ ರೆಸ್ಟೋರೆಂಟ್ ಹೆಸರಿನಿಂದ 'one8' ಬ್ರ್ಯಾಂಡ್ ಹೆಸರನ್ನು ತೆಗೆದುಹಾಕುವಂತೆ ಖಡಕ್ ಸೂಚನೆ ನೀಡಿದ್ದರು. ವಿರಾಟ್ ಕೊಹ್ಲಿ ಅವರ ಬ್ರ್ಯಾಂಡ್ ಹೆಸರು ಹೊರಹೋದ ಬೆನ್ನಲ್ಲೇ ರೆಸ್ಟೋರೆಂಟ್‌ನ ವ್ಯಾಪಾರ ತೀವ್ರವಾಗಿ ಕುಸಿಯಿತು.

45
ಕಾನೂನು ಸಮರ ಮತ್ತು ಸದ್ಯದ ಪರಿಸ್ಥಿತಿ:

ಗ್ರಾಹಕರಿಲ್ಲದೆ ಆದಾಯವಿಲ್ಲದ ಕಾರಣ, ಕಟ್ಟಡದ ಮಾಲೀಕರಿಗೆ ಲಕ್ಷಾಂತರ ರೂಪಾಯಿ ಬಾಡಿಗೆ ಮತ್ತು ನಿರ್ವಹಣಾ ವೆಚ್ಚ (Maintenance) ಪಾವತಿಸಲು ಸಾಧ್ಯವಾಗಲಿಲ್ಲ. ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಕಟ್ಟಡದ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಆದೇಶದಂತೆ ರೆಸ್ಟೋರೆಂಟ್ ಅನ್ನು ಕ್ಲೋಸ್ ಮಾಡಿಸಲಾಗಿತ್ತು.

ಇದನ್ನೂ ಓದಿ: ಆರ್‌ಸಿಬಿ ಮೇಲಿನ ಪ್ರೀತಿಗೆ ತನ್ನ ಕಾರನ್ನೇ ಮಾಡಿಫಿಕೇಶನ್ ಮಾಡಿದ ಕ್ರೇಝಿ ಫ್ಯಾನ್, ವಿಡಿಯೋ

55
ರೆಸ್ಟೋರೆಂಟ್ ಭವಿಷ್ಯ ಅತಂತ್ರ

ಸದ್ಯ ರೆಸ್ಟೋರೆಂಟ್ ಮಾಲೀಕರು ತಡೆಯಾಜ್ಞೆ (Stay Order) ತಂದಿದ್ದರೂ ಸಹ, ಆರ್ಥಿಕ ಮುಗ್ಗಟ್ಟು ಮತ್ತು ಕೆಲಸಗಾರರಿಗೆ ಸಂಬಳ ನೀಡಲಾಗದ ಸ್ಥಿತಿಯಿಂದಾಗಿ ರೆಸ್ಟೋರೆಂಟ್ ಅನ್ನು ಪುನರಾರಂಭಿಸಲು ಮಾಲೀಕರಿಗೆ ಸಾಧ್ಯವಾಗುತ್ತಿಲ್ಲ. ವಿರಾಟ್ ಕೊಹ್ಲಿ ಅವರ 'ಒನ್8' ಬ್ರ್ಯಾಂಡ್ ಹೆಸರೇ ಈ ರೆಸ್ಟೋರೆಂಟ್‌ಗೆ ಶಕ್ತಿಯಾಗಿತ್ತು. ಈಗ ಆ ಹೆಸರೂ ಇಲ್ಲ, ಹಣಕಾಸಿನ ಬಲವೂ ಇಲ್ಲದೆ ರೆಸ್ಟೋರೆಂಟ್ ಭವಿಷ್ಯ ಅತಂತ್ರವಾಗಿದೆ.

ಇದನ್ನೂ ಓದಿ: RCB ಬಡ ಅಭಿಮಾನಿಗಳ ಪರವಾಗಿ ಘರ್ಜಿಸಿದ ಹುಲಿ ಕಾರ್ತಿಕ್; ವಿರಾಟ್ ಕೊಹ್ಲಿಗೆ ಗಂಭೀರ ಮನವಿ ಮಾಡಿದ ಕಾಮಿಡಿ ಕಿಲಾಡಿ!

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories