ವಿಐ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಣೆ, ಸಂಪೂರ್ಣ ಉಚಿತ ಸ್ಪಾಟಿಫೈ ಪ್ರೀಮಿಯಂ ಸೌಲಭ್ಯ

Published : Jun 29, 2026, 10:19 PM IST

ವಿ ಸಂಸ್ಥೆಯ ಬಲಿಷ್ಠ ನೆಟ್‌ ವರ್ಕ್ ಕನೆಕ್ಟಿವಿಟಿ ಮತ್ತು ಸ್ಪಾಟಿಫೈನ ವಿಶ್ವದರ್ಜೆಯ ಆಡಿಯೋ ಸ್ಟ್ರೀಮಿಂಗ್ ಅನುಭವವನ್ನು ನೀಡುವ ಮೂಲಕ ಮಹತ್ವದ ಒಪ್ಪಂದ ಘೋಷಿಸಿದೆ. ಪರಿಣಾಮ ಗ್ರಾಹಕರಿಗೆ ಭರ್ಜರಿ ಸೌಲಭ್ಯ ಸಿಗಲಿದೆ. 

PREV
15
ವಿಐ ಗ್ರಾಹಕರಿಗೆ ಉಚಿತ ಸ್ಪಾಟಿಫೈ

ಭಾರತದ ಟೆಲಿಕಾಂ ಆಪರೇಟರ್ ವಿ ಇದೀಗ ಆಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಸ್ಪಾಟಿಫೈ ಜೊತೆ ಹೊಸ ಒಪ್ಪಂದ ಘೋಷಿಸಿದೆ. ಇಂದಿನಿಂದಲೇ ಜಾರಿಗೆ ಬರುವಂತೆ, ವಿ ಪೋಸ್ಟ್‌ ಪೇಯ್ಡ್ ಗ್ರಾಹಕರು ತಮ್ಮ ಕನೆಕ್ಷನ್ ಆಕ್ಟಿವೇಟ್ ಮಾಡಿದ ತಕ್ಷಣ ಅಥವಾ ಮುಂದುವರಿಸಿದ ತಕ್ಷಣ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, ಸಂಪೂರ್ಣ ಸ್ಪಾಟಿಫೈ ಪ್ರೀಮಿಯಂ ಸೇವೆಯನ್ನು ಉಚಿತವಾಗಿ ಪಡೆಯಲಿದ್ದಾರೆ.

25
ಸಂಗೀತ ಆನಂದಿಸುವುದು ಸುಲಭ

ಗ್ರಾಹಕರ ದೈನಂದಿನ ಡಿಜಿಟಲ್ ಅನುಭವವನ್ನು ಉತ್ತಮಗೊಳಿಸುವ ಸಲುವಾಗಿ ಹೊಸ ಸೌಲಭ್ಯ ನೀಡಲಾಗುತ್ತಿದೆ. ಅತ್ಯುತ್ತಮ ನೆಟ್‌ ವರ್ಕ್ ಕನೆಕ್ಟಿವಿಟಿಯೊಂದಿಗೆ ಪ್ರೀಮಿಯಂ ಲೈಫ್‌ ಸ್ಟೈಲ್ ಮತ್ತು ಮನರಂಜನೆಯ ಪ್ರಯೋಜನಗಳನ್ನು ಒದಗಿಸಲಾಗುತ್ತದೆ. ವಿಶೇಷವಾಗಿ ಪ್ರಯಾಣದ ಸಮಯದಲ್ಲಿ, ವರ್ಕ್‌ ಔಟ್ ಮಾಡುವಾಗ, ವಿಶ್ರಾಂತಿ ಪಡೆಯುವಾಗ ಅಥವಾ ಪ್ರವಾಸದಲ್ಲಿರುವಾಗ ವಿ ಗ್ರಾಹಕರು ಇನ್ನು ಮುಂದೆ ತಮ್ಮ ಮೊಬೈಲ್‌ ಗಳಲ್ಲಿ ನಿರಾಳವಾಗಿ, ಸುಲಭವಾಗಿ ಸಂಗೀತವನ್ನು ಆನಂದಿಸಬಹುದಾಗಿದೆ.

35
ಹಲವು ಪ್ಲಾನ್

ಅರ್ಹ ಪ್ಲಾನ್‌ ಗಳನ್ನು ಹೊಂದಿರುವ ವಿ ಪೋಸ್ಟ್‌ ಪೇಯ್ಡ್ ಗ್ರಾಹಕರು 3 ತಿಂಗಳವರೆಗೆ ಉಚಿತವಾಗಿ ಸ್ಪಾಟಿಫೈ ಪ್ರೀಮಿಯಂ ಪಡೆಯಲಿದ್ದು, ಈ ಕೆಳಗಿನ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆಯಲಿದ್ದಾರೆ:

ಜಾಹೀರಾತು ರಹಿತ ಮ್ಯೂಸಿಕ್: ಯಾವುದೇ ಜಾಹೀರಾತುಗಳ ಅಡಚಣೆಯಿಲ್ಲದೆ, 10 ಕೋಟಿಗೂ (100 ಮಿಲಿಯನ್) ಅಧಿಕ ಹಾಡುಗಳನ್ನು ನಿರಂತರವಾಗಿ ಆಲಿಸಬಹುದು.

ಆಫ್‌ ಲೈನ್ ಡೌನ್‌ ಲೋಡ್ಸ್: ಇಂಟರ್ನೆಟ್ ಇಲ್ಲದಿದ್ದಾಗಲೂ ಯಾವುದೇ ಸಮಯದಲ್ಲಿ ಹಾಡುಗಳು, ಪ್ಲೇಲಿಸ್ಟ್‌ ಗಳು, ಆಲ್ಬಮ್‌ಗಳು ಮತ್ತು 70 ಲಕ್ಷಕ್ಕೂ (7 ಮಿಲಿಯನ್) ಹೆಚ್ಚಿನ ಪಾಡ್‌ ಕಾಸ್ಟ್‌ ಗಳನ್ನು ಡೌನ್‌ ಲೋಡ್ ಮಾಡಿ ಕೇಳಬಹುದು.

ಅನಿಯಮಿತ ಕಂಟ್ರೋಲ್: ಯಾವುದೇ ಸಾಧನದಲ್ಲಾದರೂ ತಮಗೆ ಇಷ್ಟಬಂದ ಹಾಡನ್ನು ಪ್ಲೇ ಮಾಡಬಹುದು, ಅನ್‌ ಲಿಮಿಟೆಡ್ ಸ್ಕಿಪ್ ಆಪ್ಷನ್ ಬಳಸಬಹುದು ಹಾಗೂ ಮ್ಯೂಸಿಕ್ ಕ್ಯೂ ಅನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.

ಉನ್ನತ ಗುಣಮಟ್ಟದ ಆಡಿಯೋ: ಸ್ಪಾಟಿಫೈ ಪ್ರೀಮಿಯಂ 320 ಕೆಬಿಪಿಎಸ್ ವರೆಗಿನ ಅತ್ಯುನ್ನತ ಗುಣಮಟ್ಟದ ಆಡಿಯೋ ಸ್ಟ್ರೀಮಿಂಗ್ ನೀಡಲಿದ್ದು, ಸಂಗೀತ ಪ್ರೇಮಿಗಳಿಗೆ ಇದು ಸ್ಪಷ್ಟ ಧ್ವನಿಯ ಅದ್ಭುತ ಅನುಭವ ನೀಡಲಿದೆ.

45
ಉಚಿತ ಪ್ಲಾನ್ ಆ್ಯಕ್ಟಿವೇಟ್ ಮಾಡಿ

ಈ ಹಿಂದೆ ಎಂದಿಗೂ ಸ್ಪಾಟಿಫೈ ಬಳಸದ ಅರ್ಹ ಗ್ರಾಹಕರು, ವಿ ಆಪ್ ಮೂಲಕ ಈ ಉಚಿತ ಸ್ಪಾಟಿಫೈ ಪ್ರೀಮಿಯಂ ಚಂದಾದಾರಿಕೆಯನ್ನು ಸಕ್ರಿಯಗೊಳಿಸಿಕೊಳ್ಳಬಹುದು. ಈ ಸೌಲಭ್ಯವು ವಿ ಸಂಸ್ಥೆಯ ₹ 451, ₹ 551, ₹ 751 ಮತ್ತು ₹ 1201 (ಆರ್ ಇ ಡಿ ಎಕ್ಸ್) ಬೆಲೆಯ ವೈಯಕ್ತಿಕ ಪೋಸ್ಟ್‌ ಪೇಯ್ಡ್ ಪ್ಲಾನ್‌ ಗಳಲ್ಲಿ ಲಭ್ಯವಿರಲಿದೆ. ಇದರೊಂದಿಗೆ ₹ 701 / ₹ 751, ₹ 871, ₹ 1201 / ₹ 1301, ₹ 1401 / ₹ 1526 ಮತ್ತು ₹ 1601 (ಆರ್ ಇ ಡಿ ಎಕ್ಸ್ ಫ್ಯಾಮಿಲಿ) ಬೆಲೆಯ ಫ್ಯಾಮಿಲಿ ಪೋಸ್ಟ್‌ ಪೇಯ್ಡ್ ಪ್ಲಾನ್‌ ಗಳಲ್ಲೂ ಈ ಪ್ರಯೋಜನ ದೊರೆಯಲಿದೆ. ಫ್ಯಾಮಿಲಿ ಪ್ಲಾನ್‌ ಗಳಲ್ಲಿ ಈ ಕೊಡುಗೆಯು ಕೇವಲ ಮುಖ್ಯ ಸದಸ್ಯರಿಗೆ ಮಾತ್ರ ಅನ್ವಯವಾಗುತ್ತದೆ.

55
139 ಪಾವತಿಸಿ ಸೇವೆ ಮುಂದುವರಿಸಿ

ಮೂರು ತಿಂಗಳ ಉಚಿತ ಅವಧಿ ಮುಗಿದ ನಂತರವೂ ಗ್ರಾಹಕರು ಈ ಸೇವೆಯನ್ನು ಮುಂದುವರಿಸಲು ಇಚ್ಛಿಸಿದರೆ, ವಿ ಸಂಸ್ಥೆಯ ಸುಲಭ ಆಡ್ ಟು ಬಿಲ್ ಸೌಲಭ್ಯದ ಮೂಲಕ ತಿಂಗಳಿಗೆ ಕೇವಲ ₹ 139 ಪಾವತಿಸಿ ಸ್ಪಾಟಿಫೈ ಪ್ರೀಮಿಯಂ ಚಂದಾದಾರಿಕೆಯನ್ನು ಮುಂದುವರಿಸಬಹುದಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories