ಜುಲೈ ತಿಂಗಳಲ್ಲಿ ಬ್ಯಾಂಕ್‌ನಲ್ಲಿ ಏನಾದ್ರೂ ಮುಖ್ಯ ಕೆಲಸವಿದ್ರೆ, ಮೊದಲೇ ಪ್ಲ್ಯಾನ್ ಮಾಡಿಕೊಳ್ಳುವುದು ಉತ್ತಮ. ಯಾಕಂದ್ರೆ, ಈ ತಿಂಗಳು ಬರೋಬ್ಬರಿ 12 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಹೀಗಾಗಿ ಹಲವು ದಿನ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುವುದಿಲ್ಲ.
ನೀವು ಜುಲೈ ತಿಂಗಳಲ್ಲಿ ಬ್ಯಾಂಕ್ ಶಾಖೆಗೆ ಹೋಗಲು ಪ್ಲ್ಯಾನ್ ಮಾಡಿದ್ದರೆ, ಈ ವಿಚಾರ ತಿಳಿದುಕೊಳ್ಳುವುದು ಬಹಳ ಮುಖ್ಯ. ಮುಂದಿನ ತಿಂಗಳು ದೇಶದಾದ್ಯಂತ ಹಲವು ದಿನಗಳ ಕಾಲ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುವುದಿಲ್ಲ. ಇದರಿಂದ ಚೆಕ್ ಡೆಪಾಸಿಟ್, ಕೆವೈಸಿ ಅಪ್‌ಡೇಟ್, ಡಿಮ್ಯಾಂಡ್ ಡ್ರಾಫ್ಟ್, ಲಾಕರ್ ಸೇವೆಗಳಂತಹ ಕೆಲಸಗಳು ವಿಳಂಬವಾಗಬಹುದು. ಹಾಗಾಗಿ, ಗ್ರಾಹಕರು ಮುಂಚಿತವಾಗಿ ಯೋಜನೆ ರೂಪಿಸಿಕೊಳ್ಳುವುದು ಉತ್ತಮ.
25
12 ದಿನ ಬ್ಯಾಂಕ್‌ಗಳು ಬಂದ್
ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ, ಹೆಚ್ಚಿನ ಡಿಜಿಟಲ್ ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ. ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಯುಪಿಐ, ಎಟಿಎಂ ಮೂಲಕ ಹಣ ವರ್ಗಾವಣೆ, ಬಿಲ್ ಪಾವತಿ ಮತ್ತು ಬ್ಯಾಲೆನ್ಸ್ ಚೆಕ್ ಮಾಡುವಂತಹ ಸೇವೆಗಳನ್ನು ಯಾವುದೇ ಅಡೆತಡೆ ಇಲ್ಲದೆ ಬಳಸಬಹುದು. ಹೀಗಾಗಿ, ದೈನಂದಿನ ವಹಿವಾಟುಗಳಿಗೆ ದೊಡ್ಡ ಮಟ್ಟದಲ್ಲಿ ಸಮಸ್ಯೆ ಆಗುವ ಸಾಧ್ಯತೆ ಇಲ್ಲ.
35
ಜುಲೈ ಬ್ಯಾಂಕ್ ರಜೆಗಳ ಲಿಸ್ಟ್
ಇದೇ ಸಮಯದಲ್ಲಿ, ರಾಜ್ಯವಾರು ಸ್ಥಳೀಯ ಹಬ್ಬಗಳು ಮತ್ತು ವಿಶೇಷ ಕಾರ್ಯಕ್ರಮಗಳಿಗಾಗಿ ರಜೆಗಳನ್ನು ಘೋಷಿಸಲಾಗಿದೆ. ಈ ರಜೆಗಳು ಎಲ್ಲಾ ರಾಜ್ಯಗಳಿಗೂ ಅನ್ವಯಿಸುವುದಿಲ್ಲ. ಹಾಗಾಗಿ, ನೀವು ಬೇರೆ ರಾಜ್ಯದ ಬ್ಯಾಂಕ್ ಶಾಖೆಗೆ ಹೋಗಲು ಯೋಚಿಸುತ್ತಿದ್ದರೆ, ಆ ರಾಜ್ಯದ ರಜಾ ಪಟ್ಟಿಯನ್ನು ಮುಂಚಿತವಾಗಿ ಪರಿಶೀಲಿಸುವುದು ಬಹಳ ಮುಖ್ಯ.
ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ, ಜುಲೈ 11 (ಎರಡನೇ ಶನಿವಾರ) ಮತ್ತು ಜುಲೈ 25 (ನಾಲ್ಕನೇ ಶನಿವಾರ) ರಂದು ದೇಶದಾದ್ಯಂತ ಎಲ್ಲಾ ಬ್ಯಾಂಕ್ ಶಾಖೆಗಳು ಮುಚ್ಚಿರುತ್ತವೆ. ಇದಲ್ಲದೆ, ಜುಲೈ 5, 12, 19 ಮತ್ತು 26 ರಂದು ಬರುವ ನಾಲ್ಕು ಭಾನುವಾರಗಳಂದು ಕೂಡ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.
ಇದರೊಂದಿಗೆ, ರಾಜ್ಯಗಳಿಗೆ ಅನುಗುಣವಾಗಿ ಇನ್ನೂ 6 ಸ್ಥಳೀಯ ರಜೆಗಳನ್ನು ಘೋಷಿಸಲಾಗಿದೆ. ಇದರಿಂದಾಗಿ ಜುಲೈ ತಿಂಗಳಲ್ಲಿ ಒಟ್ಟು 12 ದಿನಗಳ ಕಾಲ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುವುದಿಲ್ಲ. ಹಾಗಾಗಿ, ಬ್ಯಾಂಕ್ ಶಾಖೆಗೆ ನೇರವಾಗಿ ಹೋಗಿ ಮಾಡಬೇಕಾದ ಕೆಲಸಗಳಿದ್ದರೆ, ರಜಾ ದಿನಗಳನ್ನು ಗಮನದಲ್ಲಿಟ್ಟುಕೊಂಡು ಮೊದಲೇ ಮುಗಿಸಿಕೊಳ್ಳುವುದು ಅನಗತ್ಯ ತೊಂದರೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.