ಏಪ್ರಿಲ್ 1ರಿಂದ ಇವರಿಗೆ ಯುಪಿಐ ಪಾವತಿ ಸೇವೆ ಬಂದ್, ನಿಮ್ಮ ನಂಬರ್ ಇದೆಯಾ ನೋಡಿ
ಎಪ್ರಿಲ್ 1 ರಿಂದ ಯುಪಿಐ ನಿಯಮದಲ್ಲಿ ಮಹತ್ತರ ಬದಲಾವಣೆಯಾಗುತ್ತಿದೆ. ಈ ಪೈಕಿ ಯುಪಿಐ ಪಾವತಿಯಲ್ಲಿ ಕೆಲ ನಿರ್ಬಂಧ ಹೇರಲಾಗುತ್ತಿದೆ. ಇವರಿಗೆ ಯುಪಿಐ ಸೇವೆ ಬಂದ್ ಆಗಲಿದೆ.
ಎಪ್ರಿಲ್ 1 ರಿಂದ ಯುಪಿಐ ನಿಯಮದಲ್ಲಿ ಮಹತ್ತರ ಬದಲಾವಣೆಯಾಗುತ್ತಿದೆ. ಈ ಪೈಕಿ ಯುಪಿಐ ಪಾವತಿಯಲ್ಲಿ ಕೆಲ ನಿರ್ಬಂಧ ಹೇರಲಾಗುತ್ತಿದೆ. ಇವರಿಗೆ ಯುಪಿಐ ಸೇವೆ ಬಂದ್ ಆಗಲಿದೆ.
ಏಪ್ರಿಲ್ 1 ರಿಂದ ಯುಪಿಐ ನಿಯಮಗಳಲ್ಲಿ ದೊಡ್ಡ ಬದಲಾವಣೆ ಮಾಡಲಾಗುತ್ತಿದೆ. ಈಗಾಗಲೇ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಈ ಕುರಿತು ನೋಟಿಸ್ ಹೊರಡಿಸಿದೆ. ಪ್ರಮುಖವಾಗಿ ಆರ್ಥಿಕ ವಂಚನೆ ತಡೆಯಲು ಏಪ್ರಿಲ್ 1 ರಿಂದ ಯುಪಿಐ ನಿಯಮಗಳಲ್ಲಿ ದೊಡ್ಡ ಬದಲಾವಣೆ ಮಾಡಲಾಗುತ್ತಿದೆ.
ಇನ್ಮುಂದೆ ಎಲ್ಲ ನಂಬರ್‌ಗಳಿಂದ ಗೂಗಲ್ ಪೇ, ಪೇಟಿಎಂ ಮೂಲಕ ಹಣ ಕಳಿಸೋಕೆ ಆಗಲ್ಲ. ಈ ನಿಯಮದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಇದರಿಂದ ಎದುರಾಗುತ್ತಿರುವ ಆರ್ಥಿಕ ವಂಚನೆ ಹಾಗೂ ಸಮಸ್ಯೆಗಳಿಂದ ಹೊಸ ನಿಯಮ ಜಾರಿಯಾಗುತ್ತಿದೆ.
ಸೈಬರ್ ಸುರಕ್ಷತೆಗೋಸ್ಕರ ಈ ಹೊಸ ರೂಲ್ಸ್ ತಂದಿದ್ದಾರೆ. ಯಾವ್ಯಾವ ನಂಬರ್‌ಗಳಿಂದ ಹಣ ಕಳಿಸೋಕೆ ಆಗಲ್ಲ ಅಂತಾ ತಿಳ್ಕೊಳ್ಳಿ. ಯಾವ ನಂಬರ್ಗಳು ತುಂಬಾ ದಿನದಿಂದ ಬಂದ್ ಆಗಿಯೋ ಅಥವಾ ಸಕ್ರೀಯವಾಗಿಲ್ಲೋ ಅಂಥ ನಂಬರ್‌ಗಳಿಂದ ಯುಪಿಐ ಮೂಲಕ ಹಣ ಕಳಿಸೋಕೆ ಸಾಧ್ಯವಿಲ್ಲ.
ನೀವು ಫೋನ್ ನಂಬರ್ ಚೇಂಜ್ ಮಾಡಿದ್ದರೆ, ಈ ಹೊಸ ನಂಬರ್ ಕುರಿತು ಬ್ಯಾಂಕ್ಗೆ ಅಪ್ಡೇಟ್ ಮಾಡಿಲ್ಲ ಎಂದರೂ ಸಂಕಷ್ಟ ಎದುರಾಗಲಿದೆ. ಇಂತಹ ನಂಬರ್‌ಗಳಿಂದ ಯುಪಿಐ ಟ್ರಾನ್ಸಾಕ್ಷನ್ ಬಂದ್ ಆಗುತ್ತಿದೆ. ಹೊಸ ನಂಬರ್ ಅಥವಾ ನಂಬರ್ ಬದಲಾವಣೆಯನ್ನು ಬ್ಯಾಂಕ್‌ನಲ್ಲಿ ಅಪ್‌ಡೇಟ್ ಮಾಡಿಕೊಳ್ಳಬೇಕು.
ತುಂಬಾ ದಿನ ಮೊಬೈಲ್ ಫೋನ್ ರೀಚಾರ್ಜ್ ಮಾಡಿಲ್ಲ ಅಂದ್ರೆ ಅದು ಬಂದ್ ಆಗುತ್ತೆ. ಅಂಥ ನಂಬರ್ಗಳನ್ನು ಹ್ಯಾಕ್ ಮಾಡೋದು ಸುಲಭ. ಹೀಗಾಗಿ ಇವುಗಳಿಂದ ಎದುರಾಗುವ ಆರ್ಥಿಕ ವಂಚನೆ, ಸೈಬರ್ ಕ್ರೈಂ ತಪ್ಪಿಸಲು ಇದೀಗ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ.
ಯುಪಿಐ ಟ್ರಾನ್ಸಾಕ್ಷನ್ ಏನಾದ್ರೂ ಬಂದ್ ಮಾಡಿದ್ರೆ, ಬ್ಯಾಂಕ್ನಿಂದ ನೋಟಿಫಿಕೇಶನ್ ಬರುತ್ತೆ. ಬ್ಯಾಂಕ್ನಿಂದ ನೋಟಿಫಿಕೇಶನ್ ಅಥವಾ ಮೆಸೇಜ್ ಬಂದ ತಕ್ಷಣ, ಆ ನಂಬರ್ ಬಗ್ಗೆ ಬ್ಯಾಂಕ್‌ನಲ್ಲಿ ಅಪ್ಡೇಟ್ ಮಾಡ್ಬೇಕು.ಯುಪಿಐ ಐಡಿ ಇರೋ ಫೋನ್ ನಂಬರ್ ತುಂಬಾ ದಿನದಿಂದ ಬಳಕೆ ಮಾಡಿಲ್ಲ ಎಂದರೆ ಅದರಿಂದ ಮತ್ತೆ ಫೋನ್ ಅಥವಾ ಮೆಸೆಜ್ ಕಳುಹಿಸಿ ಸಕ್ರಿಯವಾಗಿಡಿ. ಯುಪಿಐ ಐಡಿ ಇರೋ ಫೋನ್ ನಂಬರ್ ಅಪ್ಡೇಟ್ ಮಾಡಿ. ಹಳೆ ಪಿನ್ ಚೇಂಜ್ ಮಾಡಿ ಹೊಸ ಪಿನ್ ಹಾಕಿ.