ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ಯುಪಿಐ ಲೈಟ್ ವಾಲೆಟ್ ಮಿತಿಯನ್ನು ₹5,000ಕ್ಕೆ ಮತ್ತು ಪ್ರತಿ ವಹಿವಾಟಿನ ಮಿತಿಯನ್ನು ₹1,000ಕ್ಕೆ ಹೆಚ್ಚಿಸಿದೆ. ಪ್ರಸ್ತುತ, ಆಫ್‌ಲೈನ್ ಪಾವತಿ ವಹಿವಾಟಿನ ಗರಿಷ್ಠ ಮಿತಿ ₹500 ಮತ್ತು ಪಾವತಿ ಸಾಧನದಲ್ಲಿನ ಆಫ್‌ಲೈನ್ ವಹಿವಾಟುಗಳ ಒಟ್ಟು ಮಿತಿಯು ಯಾವುದೇ ಸಮಯದಲ್ಲಿ ₹2,000 ಆಗಿದೆ.
ಆಫ್‌ಲೈನ್ ಮೋಡ್‌ನಲ್ಲಿ ಸಣ್ಣ ಮೌಲ್ಯದ ಡಿಜಿಟಲ್ ಪಾವತಿಗಳನ್ನು ಸುಲಭಗೊಳಿಸುವ ಉದ್ದೇಶದಿಂದ 2022 ರ ಜನವರಿಯಲ್ಲಿ ನೀಡಲಾದ 'ಆಫ್‌ಲೈನ್ ಫ್ರೇಮ್‌ವರ್ಕ್' ಅನ್ನು ರಿಸರ್ವ್ ಬ್ಯಾಂಕ್ ಬುಧವಾರ ತಿದ್ದುಪಡಿ ಮಾಡಿದೆ. "...ಯುಪಿಐ ಲೈಟ್‌ಗೆ ವರ್ಧಿತ ಮಿತಿಗಳು ಪ್ರತಿ ವಹಿವಾಟಿಗೆ ₹1,000 ಆಗಿರುತ್ತದೆ, ಯಾವುದೇ ಸಮಯದಲ್ಲಿ ₹5,000 ಒಟ್ಟು ಮಿತಿಯಾಗಿರುತ್ತದೆ," ಎಂದು ರಿಸರ್ವ್ ಬ್ಯಾಂಕ್ ಸುತ್ತೋಲೆ ಹೇಳಿದೆ ಎಂದು ಪಿಟಿಐ ವರದಿ ಮಾಡಿದೆ.
ಈ ವರ್ಷದ ಅಕ್ಟೋಬರ್‌ನಲ್ಲಿ ಸೆಂಟ್ರಲ್ ಬ್ಯಾಂಕ್ ಈ ನಿಟ್ಟಿನಲ್ಲಿ ಘೋಷಣೆ ಮಾಡಿದೆ. ಇದರಿಂದಾಗಿ ಗ್ರಾಹಕರು ಯಾವುದೇ ಸಮಯದಲ್ಲಿ ಅವರ UPI ಲೈಟ್ ವ್ಯಾಲೆಟ್‌ನಲ್ಲಿ 5000ರೂಪಾಯಿ ಇರಿಸಿಕೊಳ್ಳಬಹುದು. ಹಾಗೂ ಆ ವ್ಯಾಲೆಟ್‌ನಿಂದ 1 ಸಾವಿರ ರೂಪಾಯಿಯನ್ನು ಯಾವುದೇ ಸಮಯದಲ್ಲಿ ಪಾವತಿ ಮಾಡಬಹುದು. ಇದಕ್ಕಾಗಿ ಅವರು ಯುಪಿಐ ಪಿನ್ ಅಥವಾ ದೃಢೀಕರಣದ ಅಗತ್ಯವಿರೋದಿಲ್ಲ.