ಬಜೆಟ್‌ ಸಿಂಪಲ್ ಆಗಿ ಅರ್ಥ ಆಗ್ಬೇಕಾ? ಮೊದಲು ಇದನ್ನು ಓದಿ..!

Kannadaprabha News   | Kannada Prabha
Published : Feb 01, 2026, 09:17 AM IST

ಇಂದು ಕೇಂದ್ರ ಸರ್ಕಾರದಿಂದ 2026-27ನೇ ಸಾಲಿನ ಆಯವ್ಯಯ ಮಂಡನೆ. ಪ್ರತಿವರ್ಷ ಫೆ.1ರಂದು ಬಜೆಟ್‌ ಮಂಡಿಸುವುದು ವಾಡಿಕೆ. ಬಜೆಟ್‌ ಮಂಡನೆ ವೇಳೆ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಹಲವಾರು ಪದಗಳನ್ನು ಬಳಸಲಾಗುತ್ತದೆ. ಅಂತಹ ಕೆಲ ಪದಗಳ ಸರಳಾರ್ಥ ಇಲ್ಲಿದೆ: 

PREV
18
ಜಿಡಿಪಿ(ಒಟ್ಟು ದೇಶೀಯ ಉತ್ಪನ್ನ):

ಒಂದು ದೇಶದಲ್ಲಿ ನಿಗದಿತ ಅವಧಿಯಲ್ಲಿ ಉತ್ಪಾದಿಸಲಾಗುವ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯ. ಆರ್ಥಿಕ ಸ್ಥಿತಿಗತಿ ಅಧ್ಯಯನ ಮತ್ತು ಹೋಲಿಕೆಗಿದು ಅವಶ್ಯಕ.

28
ಫಿಸ್ಕಲ್‌ ಡೆಫಿಸಿಟ್‌(ವಿತ್ತೀಯ ಕೊರತೆ):

ವಿತ್ತೀಯ ವರ್ಷದಲ್ಲಿ ಸರ್ಕಾರದ ಆದಾಯ(ಸಾಲ ಹೊರತುಪಡಿಸಿ) ಮತ್ತು ವೆಚ್ಚದ ಮೊತ್ತಗಳ ನಡುವಿನ ಅಂತರ. ಇದು ದೇಶದ ಆರ್ಥಿಕತೆಯ ಶೇ.4.5ರ ಒಳಗಿದ್ದರೆ ಉತ್ತಮ.

38
ನೇರ ತೆರಿಗೆ:

ತೆರಿಗೆ ವ್ಯಾಪ್ತಿಗೆ ಒಳಪಡುವ ವ್ಯಕ್ತಿಗಳ ಆದಾಯದ ಮೇಲೆ ವಿಧಿಸಲಾಗುವ ತೆರಿಗೆ. ನೇರವಾಗಿ ಸರ್ಕಾರಿ ಬೊಕ್ಕಸ ಸೇರುವ ಇದು, ಕೇಂದ್ರ ಸರ್ಕಾರದ ಆದಾಯದ ಪ್ರಮುಖ ಮೂಲ.

48
ಪರೋಕ್ಷ ತೆರಿಗೆ:

ಇದರ ಪಾವತಿಯಿಂದ ಯಾರೂ ಹೊರತಲ್ಲ. ಕಾರಣ, ನಾವು ಕೊಳ್ಳುವ ಪ್ರತಿಯೊಂದು ವಸ್ತುವಿನ ಮೇಲೆಯೂ ಜಿಎಸ್‌ಟಿ ರೂಪದಲ್ಲಿ ಪರೋಕ್ಷ ತೆರಿಗೆಯನ್ನು ವಿಧಿಸಲಾಗಿರುತ್ತದೆ.

58
ಕಸ್ಟಮ್‌ ಸುಂಕ:

ಅಂತಾರಾಷ್ಟ್ರೀಯ ಗಡಿ ದಾಟುವ(ರಫ್ತು/ಆಮದು) ಎಲ್ಲಾ ಸರಕುಗಳ ಮೇಲೆ ವಿಧಿಸಲಾಗುವ ತೆರಿಗೆ. ಇದನ್ನು ರಫ್ತು ಉತ್ತೇಜನ ಮತ್ತು ದೇಶೀಯ ಕೈಗಾರಿಕೆಗಳನ್ನು ಕಾಪಾಡುವ ಅಸ್ತ್ರವಾಗಿ ಬಳಸಲಾಗುತ್ತದೆ.

68
ರೆವೆನ್ಯೂ ರೆಸೀಟ್‌:

ತೆರಿಗೆ ಮತ್ತು ತೆರಿಗೆಯೇತರ ಆದಾಯಗಳನ್ನು ಒಳಗೊಂಡಂತೆ ಸರ್ಕಾರಕ್ಕೆ ನಿರಂತರ ಸಂದಾಯವಾಗುವ ಆದಾಯ. ಇದನ್ನು ಸರ್ಕಾರ ಮರುಪಾವತಿ ಮಾಡಬೇಕಿಲ್ಲ.

78
ಕ್ಯಾಪಿಟಲ್‌ ರೆಸೀಟ್‌:

ಇದು ಸರ್ಕಾರ ಸಾಲವಾಗಿ ಪಡೆಯುವ ಹಣ, ಕೊಟ್ಟ ಸಾಲದ ಹಿಂಪಡೆಯುವಿಕೆ, ಆಸ್ತಿ ಮಾರಿದಾಗ ಪಾವತಿಯಾಗುವ ಹಣವಾಗಿದೆ.

88
ಹಣದುಬ್ಬರ:

ಸರಕು ಮತ್ತು ಸೇವೆಗಳ ಸಾಮಾನ್ಯ ಬೆಲೆಗಳಲ್ಲಿ ಏರಿಕೆ. ಪರಿಣಾಮವಾಗಿ ಕೊಳ್ಳುವ ಶಕ್ತಿ ಕಡಿಮೆಯಾಗಿ, ಖರೀದಿ ಕ್ರಮೇಣ ಕಡಿಮೆ ಆಗುತ್ತದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories