ಬಿಎಸ್ಎನ್ಎಲ್ ಇದೀಗ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯ ಬರೆದಿದೆ. ನಷ್ಟದಲ್ಲಿದ್ದ ಬಿಎಸ್‌ಎನ್ಎಲ್ ಇದೀಗ ಲಾಭದತ್ತ ಹೆಜ್ಜೆ ಹಾಕುತ್ತಿದೆ. 4ಜಿ ನೆಟ್‌ವರ್ಕ್ ದೇಶಾದ್ಯಂತ ವಿಸ್ತರಣೆಗೊಂಡಿದೆ. ಇನ್ನು ಖಾಸಗಿ ಟೆಲಿಕಾಂ ಕಂಪನಿಗಳು ರೀಚಾರ್ಜ್ ಬೆಲೆ ಏರಿಕೆ ಮಾಡಿದರೆ ಇತ್ತ ಬಿಎಸ್‌ಎನ್ಎಲ್ ಅತೀ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಪ್ಲಾನ್ ನೀಡುತ್ತಿದೆ. ಇದೀಗ ಬಿಎಸ್‌ಎನ್ಎಲ್ 5 ಅತೀ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಜಾರಿಗೊಳಿಸಿದೆ.
ಜಿಯೋ, ಏರ್ಟೆಲ್ ಹಾಗೂ ವಿಐ ರೀಚಾರ್ಜ್ ಬೆಲೆ ದುಬಾರಿಯಾಗುತ್ತಿದ್ದಂತೆ ಗ್ರಾಹಕರು ಬಿಎಸ್‌ಎನ್ಎಲ್‌ನತ್ತ ಮುಖ ಮಾಡಿದ್ದಾರೆ. ಈಗಾಗಲೇ ಬಿಎಸ್‌ಎನ್ಎಲ್‌ಗೆ ಇತರ ನೆಟ್‌ವರ್ಕ್‌ಗಳಿಂದ ಪೋರ್ಟ್ ಆಗಿದ್ದಾರೆ. ಅತೀ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಪ್ಲಾನ್ ಲಾಭ ಪಡೆದುಕೊಳ್ಳುತ್ತಿದ್ದಾರೆ. ಈ ಪೈಕಿ ಬಿಎಸ್‌ಎನ್ಎಲ್ ಹೊರತಂದಿರುವ 100 ರೂಪಾಯಿ ಒಳಗಿನ 5 ರೀಚಾರ್ಜ್ ಪ್ಲಾನ್ ಇಲ್ಲಿದೆ.
97 ರೂಪಾಯಿ ರೀಚಾರ್ಜ್ ಪ್ಲಾನ್
ಬಿಎಸ್‌ಎನ್ಎಲ್ ಜಾರಿಗೊಳಿಸಿರುವ ಹೊಸ 97 ರೂಪಾಯಿ ರೀಚಾರ್ಜ್ ಪ್ಲಾನ್‌ನಲ್ಲಿ ಪ್ರತಿ ದಿನ 2 ಜಿಬಿಯಿಂತೆ ಒಟ್ಟು 30 ಜಿಬಿ ಡೇಟಾ, ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್ ಸೌಲಭ್ಯ ಸಿಗಲಿದೆ. ಇನ್ನು 15 ದಿನ ವ್ಯಾಲಿಟಿಡಿ ಸಿಗಲಿದೆ.
98 ರೂಪಾಯಿ ಪ್ಲಾನ್
ಈ ಪ್ಲಾನ್‌ನಲ್ಲಿ ಪ್ರತಿ ದಿನ 2 ಜಿಬಿ ಉಚಿತ ಡೇಟಾ ಮೂಲಕ ಒಟ್ಟು 36 ಜಿಬಿ ಡೇಟಾ ಸಿಗಲಿದೆ. 97 ರೂಪಾಯಿ ಪ್ಲಾನ್ ರೀತಿಯ ಸೌಲಭ್ಯಗಳು ಇದರಲ್ಲಿದೆ. ಇನ್ನು 18 ದಿನ ವ್ಯಾಲಿಡಿಟಿ ಸಿಗಲಿದೆ.
58 ರೂಪಾಯಿ ರೀಚಾರ್ಜ್ ಪ್ಲಾನ್
ಕೇವಲ 58 ರೂಪಾಯಿ ಪ್ಲಾನ್ ಮೂಲಕ ನಿಗದಿತ 1 ಜಿಬಿ ಡೇಟಾ ಉಚಿಚವಾಗಿ ಸಿಗಲಿದೆ. ಒಟ್ಟು 7 ಜಿಬಿ ಡೇಟಾ ಸಿಗಲಿದೆ. ಈ ಪ್ಲಾನ್‌ನಲ್ಲಿ 7 ದಿನ ವ್ಯಾಲಿಟಿಡಿ ಸಿಗಲಿದೆ.
94 ರೂಪಾಯಿ ಪ್ಲಾನ್
ಹೆಚ್ಚು ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ಇದು ಸೂಕ್ತ. ಇಲ್ಲಿ ಪ್ರತಿ ದಿನ 3 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ವಿಶೇಷ ಅಂದರೆ 30 ದಿನ ವ್ಯಾಲಿಟಿಡಿ ಸಿಗಲಿದೆ. ಹೀಗಾಗಿ 3 ಜಿಬಿಯಂತೆ 30 ದಿನ ಉಚಿತ ಡೇಟಾ ಬಳಕೆ ಮಾಡಲು ಸಾಧ್ಯವಿದೆ. ಇನ್ನು 200 ನಿಮಿಷ ಸ್ಥಳೀಯ ಹಾಗೂ ನ್ಯಾಷನಲ್ ಕಾಲು ಉಚಿತವಾಗಿ ಮಾಡಲು ಸಾಧ್ಯವಿದೆ.
87 ರೂಪಾಯಿ ಪ್ಲಾನ್
87 ರೂಪಾಯಿ ರೀಚಾರ್ಜ್ ಮಾಡಿದರೆ ಪ್ರತಿ ದಿನ 1ಜಿಬಿ ಡೇಟಾ ಉಚಿತವಾಗಿ ಸಿಗಲಿದೆ.ಇದರ ಜೊತೆಗೆ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್ ಸೌಲಭ್ಯವೂ ಸಿಗಲಿದೆ. ಜೊತೆಗೆ ಹಾರ್ಡಿ ಮೊಬೈಲ್ ಗೇಮ್ಸ್‌ಗೆ ಅವಕಾಶ ನೀಡಲಿದೆ. ಒಟಟು 14 ದಿನ ವ್ಯಾಲಿಟಿಡಿ ಸಿಗಲಿದೆ.
ಬಿಎಸ್‌ಎನ್‌ಎಲ್ ಅತೀ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್‌ಗಳಿಂದ ಇದೀಗ ಗ್ರಾಹಕರು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸರ್ವೀಸ್‌ನತ್ತ ಪೋರ್ಟ್ ಆಗುತ್ತಿದ್ದಾರೆ. ಪ್ರತಿ ತಿಂಗಳು ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ.