UPI ಟ್ರಾನ್ಸಾಕ್ಷನ್ಸ್ ತುಂಬಾ ಸುಲಭ ಆಗಿಬಿಟ್ಟಿದೆ. ಟೀ ಕುಡಿದ್ರೂ ಫೋನ್ ಪೇ, ಗೂಗಲ್ ಪೇ ಮೂಲಕ ಪೇಮೆಂಟ್ ಮಾಡ್ತಿದ್ದೀವಿ. ದೊಡ್ಡ ಮೊತ್ತನೂ UPI ಮೂಲಕವೇ ಕಳಿಸ್ತಿದ್ದೀವಿ. ಆದರೆ ಅರ್ಜೆಂಟ್ ಆಗಿ ಹಣ ಕಳಿಸಬೇಕಾದಾಗ ಇಂಟರ್ನೆಟ್ ಇಲ್ಲ ಅಂದ್ರೆ ತೊಂದರೆ ಆಗುತ್ತೆ. ಆನ್‌ಲೈನ್ ವ್ಯವಹಾರಗಳಿಗೆ UPI ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಇಂಟರ್ನೆಟ್ ಮೂಲಕವೇ ಬಳಸುತ್ತಿದ್ದೇವೆ. ಆದರೆ UPI ಮೂಲಕ ಇಂಟರ್ನೆಟ್ ಇಲ್ಲದೆಯೇ ಹಣ ವರ್ಗಾವಣೆ ಮಾಡಬಹುದು.
ಆಫ್‌ಲೈನ್‌ನಲ್ಲಿ ನಿಮ್ಮ ಮೊಬೈಲ್‌ನಿಂದಲೇ UPI ಪಾವತಿ ಮಾಡಬಹುದು. ಇದಕ್ಕಾಗಿ NPCI ವಿಶೇಷ ಸೌಲಭ್ಯ ನೀಡುತ್ತಿದೆ. ನಿಮ್ಮ ಮೊಬೈಲ್‌ನಿಂದ *99# ಡಯಲ್ ಮಾಡಬೇಕು. ಈ ಸೇವೆಯನ್ನು NPCI ಪರಿಚಯಿಸಿದೆ.
ಈ USSD ಕೋಡ್ ಬಳಸಿ ಯಾವುದೇ ಬ್ಯಾಂಕ್ ಖಾತೆಗೆ ಹಣ ಕಳಿಸಬಹುದು, ಹಣ ಪಡೆಯಬಹುದು, ಬ್ಯಾಲೆನ್ಸ್ ಚೆಕ್ ಮಾಡಬಹುದು, UPI ಪಿನ್ ಕ್ರಿಯೇಟ್ ಮಾಡಬಹುದು ಅಥವಾ ಬದಲಾಯಿಸಬಹುದು. ಹೀಗೆ ಹಲವು ಬ್ಯಾಂಕಿಂಗ್ ಕೆಲಸಗಳನ್ನು ಸುಲಭವಾಗಿ ಮಾಡಬಹುದು.
ಇಂಟರ್ನೆಟ್ ಇಲ್ಲದಿದ್ದಾಗ UPI ಪಾವತಿ ಮಾಡಲು ಮೊದಲು *99# ಡಯಲ್ ಮಾಡಿ. ಸ್ಕ್ರೀನ್ ಮೇಲೆ ಆಯ್ಕೆಗಳಿರುವ ಮೆನು ಬರುತ್ತದೆ. 1. ಹಣ ಕಳಿಸುವುದು 2. ಹಣ ಪಡೆಯುವುದು 3. ಬ್ಯಾಲೆನ್ಸ್ ವಿಚಾರಿಸುವುದು 4. ನಿಮ್ಮ ಮಾಹಿತಿ ಹೀಗೆ ಆಯ್ಕೆಗಳು ಇರುತ್ತವೆ.
ಹಣ ಕಳಿಸಬೇಕಾದರೆ ಹಣ ಪಡೆಯುವವರ UPI ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಟೈಪ್ ಮಾಡಿ ಸೆಂಡ್ ಕ್ಲಿಕ್ ಮಾಡಿ. ಮೊತ್ತ ಟೈಪ್ ಮಾಡಿ ಸೆಂಡ್ ಕ್ಲಿಕ್ ಮಾಡಿ. ಹಣ ವರ್ಗಾವಣೆ ಆಗುತ್ತೆ. ಆಫ್‌ಲೈನ್‌ನಲ್ಲಿ UPI ವ್ಯವಹಾರ ನಡೆಸಲು ಈ USSD ಸೇವೆ ತುಂಬಾ ಉಪಯುಕ್ತ. ಆದರೆ ಈ ಸೇವೆಯನ್ನು ನಿಲ್ಲಿಸುವ ಸಾಧ್ಯತೆ ಇದೆ.