ಈಗ ಖರೀದಿಸಿ, ಇಲ್ಲದಿದ್ದರೆ ಪಶ್ಚಾತ್ತಾಪ ಪಡ್ತೀರಿ! ಈ 10 ಷೇರುಗಳು ಭರ್ಜರಿ ರಿಟರ್ನ್ ನೀಡೋದು ಗ್ಯಾರಂಟಿ!

 ಷೇರು ಮಾರುಕಟ್ಟೆಯಲ್ಲಿ ಮತ್ತೆ ಚೇತರಿಕೆ ಕಾಣುತ್ತಿದೆ. ವಿದೇಶಿ ಹೂಡಿಕೆ ಹೆಚ್ಚಳದಿಂದ ಹೂಡಿಕೆಗೂ ಅವಕಾಶ ಸಿಗುತ್ತಿದೆ. ಈ ಚೇತರಿಕೆಯ ವಾತಾವರಣದಲ್ಲಿ, ಬ್ರೋಕರೇಜ್ ಹೌಸ್‌ಗಳು ದೀರ್ಘಾವಧಿಯಲ್ಲಿ ಉತ್ತಮ ಆದಾಯವನ್ನು ನೀಡಬಲ್ಲ 10 ಫಂಡಮೆಂಟಲ್‌ ಸ್ಟ್ರಾಂಗ್‌ ಆಗಿರುವ ಷೇರುಗಳನ್ನು ಹೆಸರಿಸಿದ್ದಾರೆ.

Top 10 High Return Indian Stocks Hotels ICICI Bank Hindustan Aeronautics san
1. ಇಂಡಿಯನ್ ಹೋಟೆಲ್ಸ್

ಟಾಟಾ ಗ್ರೂಪ್‌ನ ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್‌ಗೆ ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಬೈ ರೇಟಿಂಗ್ ನೀಡಿದೆ. ಈ ಷೇರಿನ ಟಾರ್ಗೆಟ್ ಬೆಲೆಯನ್ನು ಒಂದು ವರ್ಷಕ್ಕೆ 960 ರೂಪಾಯಿ ಎಂದು ನೀಡಲಾಗಿದೆ. ಮಾರ್ಚ್ 21 ರಂದು ಷೇರು 824.05 ರೂಪಾಯಿಯಲ್ಲಿತ್ತು.

Top 10 High Return Indian Stocks Hotels ICICI Bank Hindustan Aeronautics san
2. ಐಸಿಐಸಿಐ ಬ್ಯಾಂಕ್

ಮೋತಿಲಾಲ್ ಓಸ್ವಾಲ್ ಐಸಿಐಸಿಐ ಬ್ಯಾಂಕ್ ಷೇರಿನ ಬಗ್ಗೆಯೂ ಬುಲಿಶ್ ಆಗಿದೆ. ಒಂದು ವರ್ಷಕ್ಕೆ ಟಾರ್ಗೆಟ್ 1,550 ರೂಪಾಯಿ ನೀಡಲಾಗಿದೆ. ಮಾರ್ಚ್ 21 ರಂದು ಷೇರು 1,337.95 ರೂಪಾಯಿಗೆ ಕೊನೆಗೊಂಡಿತು.


3. ವರುಣ್ ಬೇವರ್ಜಸ್‌

ವರುಣ್ ಬೇವರ್ಜಸ್‌ ಷೇರನ್ನು ಸಹ ಖರೀದಿಸಲು ಮೋತಿಲಾಲ್ ಓಸ್ವಾಲ್ ಸಲಹೆ ನೀಡಿದೆ. ಈ ಷೇರಿನ ಟಾರ್ಗೆಟ್ ಬೆಲೆ 680 ರೂಪಾಯಿ ನೀಡಲಾಗಿದೆ. ಮಾರ್ಚ್ 21 ರಂದು ಈ ಷೇರು 538.40 ರೂಪಾಯಿಗೆ ಕೊನೆಗೊಂಡಿತು.

4. ಅಂಬರ್ ಎಂಟರ್‌ಪ್ರೈಸಸ್

ಮೋತಿಲಾಲ್ ಓಸ್ವಾಲ್ ಅಂಬರ್ ಎಂಟರ್‌ಪ್ರೈಸಸ್ ಷೇರಿನಲ್ಲಿಯೂ ಹೂಡಿಕೆ ಮಾಡಲು ಸಲಹೆ ನೀಡಿದೆ. ಈ ಷೇರಿನ ಟಾರ್ಗೆಟ್ ಬೆಲೆಯನ್ನು ಒಂದು ವರ್ಷಕ್ಕೆ 7,800 ರೂಪಾಯಿ ಎಂದು ಹೇಳಿದೆ. ಶುಕ್ರವಾರ ಮಾರ್ಚ್ 21 ರಂದು ಷೇರು 6889.80 ರೂಪಾಯಿಗೆ ಕೊನೆಗೊಂಡಿತು.

5. ಎಸ್ಆರ್ಎಫ್

ಮೋತಿಲಾಲ್ ಓಸ್ವಾಲ್ ಕಮೊಡಿಟಿ ಕೆಮಿಕಲ್ಸ್ ಕಂಪನಿ ಎಸ್ಆರ್ಎಫ್ ಷೇರಿನ ಬಗ್ಗೆಯೂ ಬುಲಿಶ್ ಆಗಿದೆ. ಇದಕ್ಕೆ ಬೈ ರೇಟಿಂಗ್ ನೀಡುತ್ತಾ ಟಾರ್ಗೆಟ್ ಬೆಲೆ 3,540 ರೂಪಾಯಿ ನೀಡಲಾಗಿದೆ. ಮಾರ್ಚ್ 21 ರಂದು ಷೇರು 3023.90 ರೂಪಾಯಿಗೆ ಕೊನೆಗೊಂಡಿತು.

6. ಎಲ್ಟಿಐ ಮೈಂಡ್ ಟ್ರೀ

ಬ್ರೋಕರೇಜ್ ಸಂಸ್ಥೆ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಮುಂದಿನ 15 ದಿನಗಳವರೆಗೆ ಎಲ್ಟಿಐ ಮೈಂಡ್ ಟ್ರೀನಲ್ಲಿ ಹೂಡಿಕೆ ಮಾಡಲು ಸಲಹೆ ನೀಡಿದೆ. ಇದರ ಟಾರ್ಗೆಟ್ ಬೆಲೆ 4730 ರೂಪಾಯಿ ನೀಡಲಾಗಿದೆ. ಶುಕ್ರವಾರ, ಮಾರ್ಚ್ 21 ರಂದು ಷೇರು 4,529.95 ರೂಪಾಯಿಗೆ ಕೊನೆಗೊಂಡಿತು.

7. ಎಸ್‌ಜೆವಿಎನ್‌

ನವರತ್ನ ಪಿಎಸ್‌ಯು ಸ್ಟಾಕ್ ಎಸ್‌ಜೆವಿಎನ್‌ಬಗ್ಗೆಯೂ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಬುಲಿಶ್ ಆಗಿದೆ. ಮುಂದಿನ 45 ದಿನಗಳವರೆಗೆ ಖರೀದಿಸಲು ಸಲಹೆ ನೀಡಲಾಗಿದೆ. ಇದರ ಟಾರ್ಗೆಟ್ ಬೆಲೆ 100.50 ರೂಪಾಯಿಯಿಂದ 108 ರೂಪಾಯಿ ವರೆಗೆ ನೀಡಲಾಗಿದೆ. ಮಾರ್ಚ್ 21 ರಂದು ಷೇರು 95.29 ರೂಪಾಯಿಗೆ ಕೊನೆಗೊಂಡಿತು.

8. ಭಾರತ್ ಎಲೆಕ್ಟ್ರಾನಿಕ್ಸ್

ಆಂಟಿಕ್ ಸ್ಟಾಕ್ ಬ್ರೋಕಿಂಗ್ ಭಾರತ್ ಎಲೆಕ್ಟ್ರಾನಿಕ್ಸ್ ಷೇರನ್ನು ಖರೀದಿಸಲು ಸಲಹೆ ನೀಡಿದೆ. ದೀರ್ಘಾವಧಿಗೆ ಇದರ ಟಾರ್ಗೆಟ್ 376 ರೂಪಾಯಿ ನೀಡಲಾಗಿದೆ. ಮಾರ್ಚ್ 21 ರಂದು ಷೇರು 296 ರೂಪಾಯಿಗೆ ಕೊನೆಗೊಂಡಿತು.

9. ಹಿಂದೂಸ್ತಾನ್ ಏರೋನಾಟಿಕ್ಸ್

ಹಿಂದೂಸ್ತಾನ್ ಏರೋನಾಟಿಕ್ಸ್ ಷೇರಿನ ಬಗ್ಗೆಯೂ ಆಂಟಿಕ್ ಸ್ಟಾಕ್ ಬ್ರೋಕಿಂಗ್ ಬುಲಿಶ್ ಆಗಿದೆ. ಈ ಷೇರಿಗೆ ಬೈ ರೇಟಿಂಗ್ ನೀಡುತ್ತಾ 4,887 ರೂಪಾಯಿ ಟಾರ್ಗೆಟ್ ನೀಡಲಾಗಿದೆ. ಮಾರ್ಚ್ 21 ರಂದು ಷೇರು 3,884 ರೂಪಾಯಿಗೆ ಕೊನೆಗೊಂಡಿತು.

ಮ್ಯೂಚುವಲ್ ಫಂಡ್‌: ಹೂಡಿಕೆ ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಗೈಡ್

10. ಭಾರತ್ ಡೈನಾಮಿಕ್ಸ್

ಭಾರತ್ ಡೈನಾಮಿಕ್ಸ್ ಷೇರನ್ನು ಸಹ ಖರೀದಿಸಲು ಆಂಟಿಕ್ ಸ್ಟಾಕ್ ಬ್ರೋಕಿಂಗ್ ಸಲಹೆ ನೀಡಿದೆ. ಇದರ ಟಾರ್ಗೆಟ್ ಬೆಲೆ 1,351 ರೂಪಾಯಿ ನೀಡಲಾಗಿದೆ. ಶುಕ್ರವಾರ, ಮಾರ್ಚ್ 21 ರಂದು ಈ ಷೇರು 1,290 ರೂಪಾಯಿಗೆ ಕೊನೆಗೊಂಡಿತು.

ಸಂಬಳದಲ್ಲಿ ಖರ್ಚು-ವೆಚ್ಚ ತೆಗೆದು ಇನ್ನು ಹಣ ಉಳಿದಿದ್ಯಾ? 

ಸೂಚನೆ

ಇದು ಷೇರು ಖರೀದಿಗೆ ಯಾವುದೇ ರೀತಿಯ ಶಿಫಾರಸುಗಳಲ್ಲ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ನಿಮ್ಮ ಮಾರುಕಟ್ಟೆ ತಜ್ಞರ ಸಲಹೆ ಪಡೆಯಿರಿ.

Latest Videos

vuukle one pixel image
click me!