ಶೀಘ್ರದಲ್ಲೇ ವೋಟರ್ ಐಡಿ ಆಧಾರ್ ಲಿಂಕ್, ಆನ್‌ಲೈನ್ ಮೂಲಕ ಲಿಂಕ್ ಮಾಡುವುದು ಹೇಗೆ?
ಚುನಾವಣಾ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಪ್ರಕ್ರಿಯೆ ಶೀಘ್ರದಲ್ಲೇ ಶುರುವಾಗಲಿದೆ.. ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಆನ್‌ಲೈನ್ ಮೂಲಕ ಲಿಂಕ್ ಮಾಡುವುದು ಹೇಗೆ? ಸರಳ ವಿಧಾನ ಇಲ್ಲಿದೆ.
ಚುನಾವಣಾ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಪ್ರಕ್ರಿಯೆ ಶೀಘ್ರದಲ್ಲೇ ಶುರುವಾಗಲಿದೆ.. ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಆನ್‌ಲೈನ್ ಮೂಲಕ ಲಿಂಕ್ ಮಾಡುವುದು ಹೇಗೆ? ಸರಳ ವಿಧಾನ ಇಲ್ಲಿದೆ.
ಕೇಂದ್ರ ಸರ್ಕಾರ ತನ್ನ ಯೋಜನೆಗಳನ್ನು ಸುಲಭವಾಗಿ ಜನಸಾಮ್ಯನರಿಗೆ ತಲುಪಿಸಲು, ಅರ್ಹರಿಗೆ ಸೂಕ್ತ ಯೋಜನೆ ಸಿಗವಂತೆ ಮಾಡಲು, ಅಕ್ರಮ ತಪ್ಪಿಸಲು ಹಾಗೂ ಸ್ಪಷ್ಟ ಡೇಟಾ ಬೇಸ್‌ಗಾಗಿ ಕೇಂದ್ರ ಸರ್ಕಾರ ಹಲವು ಗುರುತಿನ ಚೀಟಿಗಳನ್ನು ಲಿಂಕ್ ಮಾಡುವ ಪ್ರಕ್ರಿಯೆ ಮಾಡಿದೆ. ಪ್ಯಾನ್ ಕಾರ್ಡ್-ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆ ಬಹುತೇಕ ಅಂತ್ಯಗೊಂಡಿದೆ. ಇದೀಗ ವೋಟರ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ.
ಮತದಾರರ ಚೀಟಿಯಲ್ಲಿ ಹೊಸದಾಗಿ ಸೇರ್ಪಡೆಗೊಳ್ಳುವ ಸದಸ್ಯರು ಹಾಗೂ ಈಗಾಗಲೇ ಮತದಾರರ ಚೀಟಿ ಹೊಂದಿರುವವರು ಸುಲಭವಾಗಿ ತಮ್ಮ ವೋಟರ್ ಐಡಿಯನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಬಹುದು. ಎಲ್ಲೂ ತೆರಳದೆ, ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಈ ಪ್ರಕ್ರಿಯೆ ಯಶಸ್ವಿಯಾಗಿ ಮುಗಿಸಬಹುದು. ಇದಕ್ಕೆ ಹೊಸ ವೋಟರ್ ಗಳು ಫಾರ್ಮ್ ಸಿಕ್ಸ್ ತುಂಬಬೇಕು, ಹಳೆ ವೋಟರ್ ಗಳು ಸಿಕ್ಸ್-ಬಿ ಫಾರ್ಮ್ ತುಂಬಬೇಕು.
ಆನ್‌ಲೈನ್ ಮುಖಾಂತರ ಸುಲಭವಾಗಿ ಯಾವುದೇ ಅಡೆ ತಡೆ ಇಲ್ಲದೆ ಆಧಾರ್ ಕಾರ್ಡ್ ಹಾಗೂ ಮತದಾರರ ಚೀಟಿ ಲಿಂಕ್ ಮಾಡಲು ಸುಲಭ ವಿಧಾನವಿದೆ. ಈ ಕೆಲಸನ ವೋಟರ್ ಸರ್ವೀಸ್ ಪೋರ್ಟಲ್ ಮುಖಾಂತರ ಮಾಡಬಹುದು. ಫಸ್ಟ್ ಎಲೆಕ್ಷನ್ ಕಮಿಷನ್ ವೆಬ್ಸೈಟ್ ಭೇಟಿ ನೀಡಬೇಕು. ಚುನಾವಣಾ ಆಯೋಗ ವೆಬ್‌ಸೈಟ್ ಮೂಲಕ ಲಿಂಕ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಕೇಂದ್ರ ಸರ್ಕಾರ ಇತ್ತೀಚೆಗೆ ಚುನಾವಣಾ ಆಯೋಗದ ಕುರಿತು ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿ ಲಿಂಕ್ ಪ್ರಕ್ರಿಯೆ ಕುರತು ಮಹತ್ವದ ಸಭೆ ನಡೆಸಿದೆ. ಶೀಘ್ರದಲ್ಲೇ ನಿರ್ಧಾರಗಳು ಘೋಷಣೆಯಾಗಲಿದೆ. ಇದಕ್ಕೂ ಮುನ್ನ ಲಿಂಕ್ ಪ್ರಕ್ರಿಯೆ ತಿಳಿದುಕೊಳ್ಳಿ. ಪೋರ್ಟಲ್ ಗೆ ಹೋಗಿ 'ಫಾರ್ಮ್' ಮೇಲೆ ಕ್ಲಿಕ್ ಮಾಡಿ. ಇಲ್ಲಿ ರಿಜಿಸ್ಟ್ರೇಷನ್ ಆಗಿದ್ರೆ ಮೊಬೈಲ್ ನಂಬರ್ ಹಾಕಿ ಲಾಗಿನ್ ಮಾಡಿ.
ರಿಜಿಸ್ಟ್ರೇಷನ್ ಆಗಿಲ್ಲ ಅಂದ್ರೆ, ಫಸ್ಟ್ ರಿಜಿಸ್ಟ್ರೇಷನ್ ಮಾಡ್ಕೊಂಡು ಆಮೇಲೆ ಲಾಗಿನ್ ಆಗಬೇಕು. ರಿಜಿಸ್ಟ್ರೇಶನ್ ಮಾಡುವುದು ಪ್ರಯಾಸದ ಕೆಲಸವಲ್ಲ. ಮೊಬೈಲ್ ನಂಬರ್,ವೋಟರ್ ಐಡಿ ನಂಬರ್ ನಮೂದಿಸಿ ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕು, ಮೊಬೈಲ್‌ಗೆ ಬರುವ ಒಟಿಪಿ ನಮೂದಿಸಿದರೆ ಸುಲಭಾಗಿ ನೋಂದಣಿಯಾಗಲಿದೆ.
ಮೊಬೈಲ್ ನಂಬರ್ ರಿಜಿಸ್ಟ್ರೇಶನ್ ಆದ ಬಳಿಕ ಚುನಾವಣಾ ಆಯೋಗ ಪೋರ್ಟ್‌ನಲ್ಲಿ ಲಾಗಿನ್ ಆಗಬೇಕು. ಬಳಿಕ ವೋಟರ್ ಸೇವಾ ಪೋರ್ಟಲ್ ಹೋಮ್ ಪೇಜ್ ಪರಿಶೀಲಿಸಿ. ಇಲ್ಲಿ ಮೈ ಪ್ರೊಫೈಲ್ ಅನ್ನೋ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು. ಹೊಸ ವೋಟರ್ ಆದ್ರೆ ಫಾರ್ಮ್ ಸಿಕ್ಸ್ ತುಂಬಬೇಕು, ಹಳೆ ವೋಟರ್ ಆದ್ರೆ ಸಿಕ್ಸ್-ಬಿ ಫಾರ್ಮ್ ಸೆಲೆಕ್ಟ್ ಮಾಡ್ಕೊಳ್ಳಿ.
ಇಲ್ಲಿ ಕೆಲ ಅತ್ಯ ಮಾಹಿತಿಗಳನ್ನು ಕೇಳಲಾಗುತ್ತದೆ. ಈ ಪೇಜ್‌ಗೆ ನಿಮ್ಮ ಮಾಹಿತಿ, ಅಗತ್ಯ ದಾಖಲೆ ಸಂಖ್ಯೆಗಳನ್ನು ನಮೂಜಿಸಬೇಕು. ಮೊಬೈಲ್ ಗೆ ಬರೋ ಓಟಿಪಿ ವೆರಿಫೈ ಮಾಡಿಸಿ ಪೋರ್ಟಲ್ ನಲ್ಲಿ ಪ್ರಿವ್ಯೂ ಬಟನ್ ಕ್ಲಿಕ್ ಮಾಡಿ.
ಪ್ರೀವ್ಯೂ ನೋಡಿ ಎಲ್ಲ ಕರೆಕ್ಟ್ ಆಗಿ ಇದ್ರೆ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ, ಇಲ್ಲಿ ಒಂದು ರೆಫರೆನ್ಸ್ ನಂಬರ್ ಸಿಗುತ್ತೆ.ಈ ನಂಬರ್ ಇಟ್ಕೊಂಡು ನಿಮ್ಮ ವೋಟರ್ ಆಧಾರ್ ಲಿಂಕ್ ಸ್ಟೇಟಸ್ ಚೆಕ್ ಮಾಡ್ಬೋದು.