ಬ್ಯಾಗ್‌ ಜಿಪ್‌ ರಿಪೇರಿ ಮಾಡೋ ಗಂಗಾವತಿ ಹುಡುಗನ 1 ದಿನದ ಎಷ್ಟು ಸಂಪಾದನೆ ಎಷ್ಟು? ಇದೇ ಬ್ಯುಸಿನೆಸ್‌ ತಾಕತ್ತು!

Published : Jul 16, 2026, 12:52 PM IST

Bag Zip Repairer: ಬ್ಯಾಗ್‌ ಜಿಪ್‌ ರಿಪೇರಿ ಮಾಡುವವರು ಹೀಗೆ ಒಂದಿಷ್ಟು ವಸ್ತುಗಳ ರಿಪೇರಿ ಮಾಡುವವರು ದಿನಕ್ಕೆ ಎಷ್ಟು ಹಣ ಸಂಪಾದನೆ ಮಾಡ್ತಾರೆ ಎಂದು ಅನೇಕರು ಅಂದುಕೊಳ್ಳಬಹುದು, ಇದೆಲ್ಲ ಸಣ್ಣ ಉದ್ಯೋಗ ಎನಿಸಬಹುದು. ಗಂಗಾವತಿ ಹುಡುಗನೊಬ್ಬ ಬ್ಯಾಗ್‌ ಜಿಪ್‌ ಹಾಕಿ ಎಷ್ಟು ಹಣ ಗಳಿಸ್ತಾನೆ ಗೊತ್ತಾ?

PREV
15
ಜಿಪ್‌ ರಿಪೇರಿಗೆ ಎಷ್ಟು ಹಣ ತಗೋತಾರೆ?

ಇತ್ತೀಚೆಗೆ ಒಂದು ಬ್ಯಾಗ್‌ಗೆ ಜಿಪ್‌ ಹಾಕೋಕೆ ಕರ್ನಾಟಕದಲ್ಲಿ ಮಿನಿಮಮ್‌ 50 ರೂಪಾಯಿ ತಗೊಳ್ತಾರೆ. ಅದೇ ಬೆಂಗಳೂರಿನಲ್ಲಿ 100 ರೂಪಾಯಿ ತಗೊಳ್ತಾರೆ. 350 ರೂಪಾಯಿಗೆ ಹೊಸ ಬ್ಯಾಗ್‌ ಬರುವುದು, ಆದರೆ ರಿಪೇರಿಗೆ ಮಾತ್ರ ದುಬಾರಿ ಬೆಲೆ ತೆರಬೇಕು.

25
ಒಂದು ದಿನದ ಆದಾಯ ಎಷ್ಟು?

ಬ್ಯಾಗ್‌ ರಿಪೇರಿ ಮಾಡುವವರು, ಡ್ರೆಸ್‌ ಸ್ಟಿಚ್‌ ಮಾಡಿಕೊಡುವವರು ಎಷ್ಟು ಹಣ ಗಳಿಸುತ್ತಾರೆ ಎಂದು ಕೆಲವರಿಗೆ ಡೌಟ್‌ ಇರುತ್ತದೆ. ಎಲ್ಲರೂ ಬ್ಯಾಗ್‌ ರಿಪೇರಿ ಮಾಡಿಕೊಡೋದಿಲ್ಲ, ಕೆಲವರು ಮಾತ್ರ ಬ್ಯಾಗ್‌ ಅಥವಾ ಇನ್ಯಾವುದೋ ವಸ್ತುಗಳ ರಿಪೇರಿ ಮಾಡ್ತಾರೆ.

35
ಗಂಗಾವತಿ ಹುಡುಗನ ಆದಾಯ ಎಷ್ಟು?

ಈಗ ಗಂಗಾವತಿ ಮೂಲದ ಹುಡುಗನೊಬ್ಬ ರಸ್ತೆ ಬದಿಯಲ್ಲಿ ಹೊಲಿಗೆ ಮಶಿನ್‌ ಇಟ್ಕೊಂಡು ಬ್ಯಾಗ್‌ ರಿಪೇರಿ ಮಾಡುತ್ತಿದ್ದಾನೆ. ಇವನ ಆದಾಯದ ವಿಡಿಯೋ ಈಗ ವೈರಲ್‌ ಆಗ್ತಿದೆ. ಹಾಗಿದ್ದರೆ ಇವನ ಒಂದು ದಿನದ ಆದಾಯ ಎಷ್ಟು? ಖರ್ಚು ಎಷ್ಟು?

ಶಹೀಲ್‌ ಕೆ ಆರ್‌ ಎನ್ನುವವರು ಈ ಹುಡುಗನ ಬಳಿ ಬ್ಯಾಗ್‌ ರಿಪೇರಿ ಮಾಡಿಸಿದ್ದಾರೆ. ಆಗ ಅವರು ಒಂದು ದಿನಕ್ಕೆ ಎಷ್ಟು ಹಣ ಗಳಿಸುತ್ತೀಯಾ? ಖರ್ಚು ಎಷ್ಟು ಎಂದೆಲ್ಲ ಪ್ರಶ್ನೆ ಮಾಡಿದ್ದಾರೆ. ಆಗ ಆ ಹುಡುಗ ಹೇಳಿದ ಮಾತು ಕೇಳಿ ಎಲ್ಲರೂ ಹೌಹಾರಿದ್ದಾರೆ.

45
ಗಂಗಾವತಿ ಹುಡುಗನ ಆದಾಯ ಎಷ್ಟು?

ಈ ಹುಡುಗ ಒಂದು ದಿನಕ್ಕೆ ಏನಿಲ್ಲ ಅಂದ್ರೂ 2000 ರೂಪಾಯಿ ಹಣ ಗಳಿಸುತ್ತಾನೆ. ಅದರಲ್ಲಿ 300 ರೂಪಾಯಿ ಖರ್ಚು ಆಗುವುದು. ಒಟ್ಟು 1700 ರೂಪಾಯಿ ಉಳಿತಾಯ ಆಗುತ್ತದೆ.

55
ಉದ್ಯಮಕ್ಕೆ ತಾಕತ್ತಿದೆ!

50 ರೂಪಾಯಿ ಗಳಿಸಲೀ, 500 ರೂಪಾಯಿ ಗಳಿಸಲಿ ಉದ್ಯಮಕ್ಕೆ ಅದರದ್ದೇ ಆದ ಮಹತ್ವ ಇದೆ. ಬೀದಿಯಲ್ಲಿ ನಿಂತು ಪಾನಿಪುರಿ ಮಾರುವವರು ದಿನಕ್ಕೆ 3000 ರೂಪಾಯಿ ಹಣ ಗಳಿಸುತ್ತಾರೆ. ಇಂಜಿನಿಯರಿಂಗ್‌ ಅಥವಾ ಇನ್ಯಾವುದೋ ದೊಡ್ಡ ಡಿಗ್ರಿ ಪಡೆದವರಿಗೂ ಕೂಡ ಇಷ್ಟು ಹಣ ಸಿಗೋದಿಲ್ಲ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories