ಅಂಬಾನಿ ಮನೆಯಲ್ಲಿ ನೂರಾರು ಮಂದಿ ಕೆಲಸ ಮಾಡುತ್ತಾರೆ. ನಿಮಗೂ ಅಂಬಾನಿ ಕುಟುಂಬದ ಜೊತೆ ಕೆಲಸ ಮಾಡುವ ಆಸೆ ಇದೆಯಾ? ಹಾಗಾದರೆ, ಅಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಯಾವೆಲ್ಲಾ ಅರ್ಹತೆಗಳು ಇರಬೇಕು? ಯಾವ ಗುಣಗಳನ್ನು ನೋಡಿ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ? ಈ ಬಗ್ಗೆ ಇಲ್ಲಿದೆ ಮಾಹಿತಿ.
ಮಾಧ್ಯಮ ವರದಿಗಳ ಪ್ರಕಾರ, ಅಂಬಾನಿ ಮನೆಯಲ್ಲಿ ಆರಂಭಿಕ ಹಂತದ ಬಾಣಸಿಗರಿಗೆ ತಿಂಗಳಿಗೆ ಸುಮಾರು ₹1.5 ಲಕ್ಷದಿಂದ ₹2 ಲಕ್ಷದವರೆಗೆ ಸಂಬಳ ನೀಡುತ್ತಾರೆ. ಅದೇ ಅನುಭವಿ ಸೀನಿಯರ್ ಅಥವಾ ಎಕ್ಸಿಕ್ಯೂಟಿವ್ ಬಾಣಸಿಗರಿಗೆ ತಿಂಗಳಿಗೆ ₹3 ಲಕ್ಷದಿಂದ ₹5 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಬಳ ಸಿಗುತ್ತದೆ.
24
ಡಿಗ್ರಿ/ಡಿಪ್ಲೊಮಾ ಇದ್ದರೆ ಕೆಲಸ
ಇಲ್ಲಿ ಬಾಣಸಿಗರಾಗಲು ಹೋಟೆಲ್ ಮ್ಯಾನೇಜ್‌ಮೆಂಟ್ ಅಥವಾ ಕ್ಯುಲಿನರಿ ಆರ್ಟ್ಸ್‌ನಲ್ಲಿ ಡಿಗ್ರಿ/ಡಿಪ್ಲೊಮಾ ಮಾಡಿರಬೇಕು. 5 ಸ್ಟಾರ್ ಹೋಟೆಲ್‌ನಲ್ಲಿ ಕೆಲಸ ಮಾಡಿದ ಅನುಭವ, ಭಾರತೀಯ ಮತ್ತು ಅಂತಾರಾಷ್ಟ್ರೀಯ ಅಡುಗೆಗಳ ಜ್ಞಾನ ಇರಬೇಕು. ಜೊತೆಗೆ, ಸ್ವಚ್ಛತೆ ಮತ್ತು ಆಹಾರ ಸುರಕ್ಷತಾ ಮಾನದಂಡಗಳ ಬಗ್ಗೆ ತಿಳಿದಿರಬೇಕು ಹಾಗೂ ಎಲ್ಲಾ ವಿಷಯಗಳನ್ನು ಗೌಪ್ಯವಾಗಿಡಬೇಕು.
34
ಪ್ರೆಸೆಂಟ್ ಮಾಡುವ ಕಲೆ
ಅಂಬಾನಿ ಮನೆಯಲ್ಲಿ ಬಾಣಸಿಗನ ಕೆಲಸಕ್ಕೆ ಕೇವಲ ಅಡುಗೆ ಬಂದರೆ ಸಾಲದು, ಸಂದರ್ಶನ ಬಹಳ ಕಠಿಣವಾಗಿರುತ್ತದೆ. ರುಚಿಕರ ಅಡುಗೆಯ ಜೊತೆಗೆ, ಅದನ್ನು ಅಂದವಾಗಿ ಪ್ರೆಸೆಂಟ್ ಮಾಡುವ ಕಲೆ ತಿಳಿದಿರಬೇಕು. ಒತ್ತಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ನಿಮ್ಮ ನಡವಳಿಕೆ ಮತ್ತು ಹಿನ್ನೆಲೆಯನ್ನು ಪರಿಶೀಲಿಸುತ್ತಾರೆ.
44
ಆರೋಗ್ಯಕರ ಆಹಾರ
ಇವೆಲ್ಲವೂ ಸರಿ ಎನಿಸಿದ ನಂತರವೇ ಕೆಲಸ ಖಚಿತವಾಗುತ್ತದೆ. ಮುಕೇಶ್ ಅಂಬಾನಿ ಹೆಚ್ಚಾಗಿ ಗುಜರಾತಿ, ದಕ್ಷಿಣ ಭಾರತದ ಸಾಂಪ್ರದಾಯಿಕ ಮತ್ತು ಆರೋಗ್ಯಕರ ಆಹಾರವನ್ನು ಇಷ್ಟಪಡುತ್ತಾರೆ. ಇಲ್ಲಿನ ಉದ್ಯೋಗಿಗಳಿಗೆ ಸಂಬಳದ ಜೊತೆಗೆ ವೈದ್ಯಕೀಯ ಸೌಲಭ್ಯ ಮತ್ತು ವಿಮೆಯಂತಹ ಹೆಚ್ಚುವರಿ ಪ್ರಯೋಜನಗಳೂ ಸಿಗುತ್ತವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.