Airtelನಿಂದ ಹೊಸ ಪ್ಲಾನ್: Jioಗೆ ಶುರುವಾಯ್ತು ಢವ ಢವ; Unlimited 5G ಜೊತೆ ಹಲವು ಲಾಭ

Published : Jul 05, 2026, 01:56 PM IST

ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಏರ್‌ಟೆಲ್, ಕೇವಲ 200 ರೂಪಾಯಿಯಲ್ಲಿ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಈ ಹೊಸ ಪ್ಲಾನ್ ನಂಬರ್ ಒನ್ ಆಗಿರುವ ರಿಲಯನ್ಸ್ ಜಿಯೋಗೆ ಸ್ಪರ್ಧೆ ಒಡ್ಡುವ ನಿರೀಕ್ಷೆಯಿದೆ.

PREV
15
Airtel New Recharge Plan

ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಏರ್‌ಟೆಲ್ ಹೊಸ ಆಫರ್ ಬಿಡುಗಡೆ ಮಾಡಿದೆ. ಈ ಹೊಸ ರೀಚಾರ್ಜ್ ಪ್ಲಾನ್ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋಗೆ ಹೊಡೆತ ನೀಡುವ ಸಾಧ್ಯತೆಗಳಿವೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

Airtel ಸದ್ಯ ಬಿಡುಗಡೆ ಮಾಡಿರುವ ರೀಚಾರ್ಜ್ ಪ್ಲಾನ್‌ ಬಳಕೆದಾರರಿಗೆ ಹಲವು ಲಾಭಗಳನ್ನು ನೀಡುತ್ತಿದೆ. ಈ ಪ್ಲಾನ್ ಪ್ರಮುಖ ವಿಶೇಷತೆ ಏನಂದ್ರೆ ಕೇವಲ 200 ರೂಪಾಯಿಯಲ್ಲಿ ರೀಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ. 200 ರೂ. ಪ್ಲಾನ್ ನಲ್ಲಿರುವ ಬೆನೆಫಿಟ್ ಏನು ಎಂದು ನೋಡೋಣ ಬನ್ನಿ.

25
Airtel Rs 200 Recharge Plan Details

200 ರೂಪಾಯಿಯ ರೀಚಾರ್ಜ್ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಒಟ್ಟು 30GB ಇಂಟರ್‌ನೆಟ್ ಡೇಟಾ ಸಿಗಲಿದೆ. ನೆಟ್ ಬಳಕೆದಾರರಿಗೆ ಈ ಪ್ಲಾನ್ ಉತ್ತಮ ಆಯ್ಕೆಯಾಗಿದೆ. ಇದರ ಜೊತೆಯಲ್ಲಿಯೇ Unlimited 5G ಡೇಟಾ ಇರಲಿದೆ. ಈ ಪ್ಲಾನ್ ಲಾಭ ಪಡೆಯಲು ಸ್ಮಾರ್ಟ್‌ಫೋನ್ ಹೊಂದಿರಬೇಕಾಗುತ್ತೆ ಮತ್ತು ಬೇಸಿಕ್ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡಿರಬೇಕು.

35
18 ಒಟಿಟಿ ಆಪ್ಸ್ ಗಳ ಸಬ್‌ಸ್ಕ್ರಿಪ್ಷನ್

ರೀಚಾರ್ಜ್ ಆಕ್ಟಿವೇಟ್ ಮಾಡಿಕೊಂಡ ದಿನದಿಂದ 28 ದಿನಗಳವರೆಗೆ ಗ್ರಾಹಕರಿಗೆ JioHotstar Mobile ಸಬ್‌ಸ್ಕ್ರಿಪ್ಷನ್, Airtel Xstream Play Premium ಆಕ್ಸೆಸ್ ಸಹ ಸಿಗಲಿದೆ. ಹಾಗೆಯೇ ಬರೋಬ್ಬರಿ 18 ಒಟಿಟಿ ಆಪ್ಸ್ ಗಳ ಸಬ್‌ಸ್ಕ್ರಿಪ್ಷನ್ ಲಭ್ಯವಾಗಲಿದೆ. ಇದು ಸಹ 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ.

45
vodafone ideaದಿಂದ 199 ರೂಪಾಯಿ ಪ್ಲಾನ್

ಇನ್ನು ವೊಡಾಫೋನ್ ಐಡಿಯಾ ಸಹ 199 ರೂಪಾಯಿಯ ಡಬಲ್ ಧಮಾಕಾ ರೀಚಾರ್ಜ್ ಪ್ಲಾನ್ ಒಳಗೊಂಡಿದೆ. ಇಲ್ಲಿ ನಿಮಗೆ ಡೇಟಾ ಜೊತೆಯಲ್ಲಿ ಅನ್‌ಲಿಮಿಟೆಡ್ ಕಾಲಿಂಗ್ ಸೌಲಭ್ಯ ಸಹ ಸಿಗಲಿದೆ. 2GB ಡೇಟಾ ಮತ್ತು ಉಚಿತವಾಗಿ 300 ಎಸ್‌ಎಂಎಸ್‌ಗಳನ್ನು ಕಳುಹಿಸಬಹುದಾಗಿದೆ. ಈ ಪ್ಲಾನ್ ವ್ಯಾಲಿಡಿಟಿ 28 ದಿನಗಳಾಗಿರುಗತ್ತದೆ.

55
Reliance Jioಗೆ ಹೆಚ್ಚಾಯ್ತು ಟೆನ್ಷನ್

ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ನೀಡುತ್ತಿರುವ ಆಫರ್‌ನಿಂದ ಜಿಯೋಗೆ ಟೆನ್ಷನ್ ಹೆಚ್ಚಾಗಿದೆ. ಜಿಯೋ ಸಹ 28 ದಿನಗಳಲ್ಲಿ 200GB ಡೇಟಾ ಪ್ಲಾನ್ ಹೊಂದಿದೆ. ಈ ಪ್ಲಾನ್‌ನಲ್ಲಿ JioHotstar ಜೊತೆ 16 ಒಟಿಟಿ ಆಪ್‌ಗಳ ಸಬ್‌ಸ್ಕ್ರಿಪ್ಷನ್ ಸಿಗಲಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories